ದೇಶ

ಡಿಸೆಂಬರ್ 14 ಮತ್ತು 15ಕ್ಕೆ ರೈಲು ಚಾಲಕರ ಮುಷ್ಕರ

ರೈಲು ಚಾಲಕರ ಫೋನ್​ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದ್ದು, ಇದನ್ನು ಖಂಡಿಸಿ...

ಡಿಸೆಂಬರ್ 14 ಮತ್ತು 15ಕ್ಕೆ ರೈಲು ಚಾಲಕರ ಮುಷ್ಕರ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ರೈಲು ಚಾಲಕರ ಫೋನ್​ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದ್ದು, ಇದನ್ನು ಖಂಡಿಸಿ ರೈಲು ಚಾಲಕರು ಮತ್ತು ಸಹಾಯಕ ಚಾಲಕರು ಡಿಸೆಂಬರ್​14 ಮತ್ತು 15ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. 
ಈ ಸಂಬಂಧ ಮಾತನಾಡಿರುವ ಅಖಿಲ ಭಾರತ ರೈಲು ಸಿಬ್ಬಂದಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್​.ಪ್ರಸಾದ್, ರೈಲು ಚಾಲಕರ ಫೋನ್​ ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದೆ. ಆದರೆ, ಅನಿವಾರ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಚಾಲಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡುತ್ತಿರುತ್ತಾರೆ. ಹೀಗಾಗಿ, ರೈಲು ಚಾಲಕರ ಕರೆ ಮಾಹಿತಿ ಪಡೆಯುವುದರಿಂದ ಚಾಲಕರ ವೈಯಕ್ತಿಕ ಬದುಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ. 
ದೂರವಾಣಿ ಕರೆ ಮಾಹಿತಿ ಪಡೆಯುವುದಕ್ಕಿಂತಲೂ ಮುಂಚಿತವಾಗಿ ರೈಲು ಸಿಬ್ಬಂದಿಯ ಹಲವು ಬೇಡಿಕೆಯ ಈಡೇರಿಕೆ ವಿಚಾರ ಇನ್ನೂ ಬಾಕಿ ಇದೆ. ಸೌಲಭ್ಯ ಮತ್ತು ವೇತನ ವಿಚಾರದಲ್ಲಿ ರೈಲು ಸಿಬ್ಬಂದಿ ಬೇಡಿಕೆ ಇನ್ನೂ ಈಡೇರಿಲ್ಲ. ನಾವು ಈ ಎಲ್ಲಾ ವಿಷಯಗಳನ್ನು ಮತ್ತೆ ಪ್ರಸ್ತಾಪಿಸುತ್ತೇವೆ. ಈ ಬೇಡಿಕೆ ಈಡೇರಿಸದೇ ಇದ್ದರೆ ಡಿಸೆಂಬರ್​ 14 ಮತ್ತು 15ರಂದು ರೈಲು ಸಿಬ್ಬಂದಿ ಅಮರಾಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. 
ಪ್ರಸ್ತುತ 70 ಸಾವಿರ ರೈಲು ಚಾಲಕರು ಮತ್ತು ಸಹಾಯಕ ಚಾಲಕರು ಕೆಲಸ ಮಾಡುತ್ತಿದ್ದಾರೆ.
ರೈಲ್ವೇ ಇಲಾಖೆ ರೈಲು ಚಾಲಕರು ಮತ್ತು ಸಹಾಯಕ ಚಾಲಕರಿಗೆ ಮೊಬೈಲ್ ನಂಬರನ್ನು ಕೊಟ್ಟಿತ್ತು. ರೈಲು ಚಾಲಕರ ಫೋನ್​ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದೆ. ನಿಯಮದ ಪ್ರಕಾರ ರೈಲು ಚಾಲನೆಯಲ್ಲಿರುವಾಗ ಈ ಫೋನ್​ಗಳು ಸ್ವೀಚ್​ಆಫ್​ಆಗಿರಬೇಕು. ಆದರೆ, ಚಾಲಕರು ಈ ನಿಯಮವನ್ನು ಪಾಲಿಸುತ್ತಿದ್ದಾರಾ ಅಥವಾ ಫೋನ್​ನಲ್ಲಿ ಮಾತನಾಡುತ್ತಿರುತ್ತಾರಾ ಎಂದು ತಿಳಿಯಲು ರೈಲ್ವೇ ಇಲಾಖೆ ಈ ಎಲ್ಲಾ ದೂರವಾಣಿ ಕರೆಯ ಮಾಹಿತಿಯನ್ನು ಸಂಗ್ರಹಿಸಲು ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.