ದೇಶ

ಗಡಿ ವಿವಾದದಲ್ಲಿ ಮೋದಿ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ: ಚೀನಾ ಪತ್ರಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ ಮೋದಿ ವಿರುದ್ಧ ಚೀನಾ ಪತ್ರಿಕೆಯೊಂದು ಟೀಕಾ ಪ್ರಹಾರ...

ಗಡಿ ವಿವಾದದಲ್ಲಿ ಮೋದಿ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ: ಚೀನಾ ಪತ್ರಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :

ಬೀಜಿಂಗ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ ಮೋದಿ ವಿರುದ್ಧ ಚೀನಾ ಪತ್ರಿಕೆಯೊಂದು ಟೀಕಾ ಪ್ರಹಾರ ನಡೆಸಿದ್ದು, ಗಡಿ ವಿವಾದದಲ್ಲಿ ಮೋದಿ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಚೀನಾದ ಆಂಗ್ಲ ಪತ್ರಿಕೆಯಾದ ಗ್ಲೋಬರ್ ಟೈಮ್ಸ್ ಮೋದಿ ವಿರುದ್ಧ ಟೀಕೆ ನಡೆಸಿದ್ದು, ನರೇಂದ್ರ ಮೋದಿ ಅವರು ತಮ್ಮ ಆಂತರಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಗಡಿವಿವಾದ ಹಾಗೂ ಭದ್ರತಾ ಬಿಕ್ಕಟ್ಟು ವಿಚಾರಗಳಲ್ಲಿ ರಾಜಕೀಯ ಕುತಂತ್ರಗಳನ್ನು ರೂಪಿಸುತ್ತಿದ್ದಾರೆ. ಅವರೊಬ್ಬ ವ್ಯವಹಾರಿಕ ವಾದಿ ಎಂದು ಹೇಳಿದೆ.

ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೇ ಜಪಾನ್, ಅಮೆರಿಕ ಮತ್ತು ಐರೋಪ್ಯ ದೇಶಗಳೊಂದಿಗೆ ಸಂಬಂಧವನ್ನು ಭದ್ರಪಡಿಸಿಕೊಳ್ಳಲು ಮುಂದಾದರು. ಈ ಮೂಲಕ ದೇಶದ ಮೂಲಸೌಕರ್ಯ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಬಿಂಬಿಸುವುದರ ಜತೆಗೆ ದೇಶದ ಆರ್ಥಿಕ ಅಭಿವೃದ್ಧಿಯನ್ನು ಕುರಿತು ಪ್ರಚಾರ ಪಡಿಸಲು ಪ್ರಾರಂಭಿಸಿದರು.

ಮೋದಿ ರಾಜಕೀಯ ಹಿತಾಸಕ್ತಿಯಿಂದ ವಿವಾದಿತ ಗಡಿ ಪ್ರದೇಶ ಅರುಣಾಚಲಕ್ಕೆ ಭೇಟಿ ನೀಡಬಾರದು. ಭಾರತ ಮೊದಲು ದಲೈಲಾಮಾ ಅವರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ಮೋದಿ ಕುರಿತ ಲೇಖನದಲ್ಲಿ ಕಟುವಾಗಿ ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.