ತಂತ್ರ ರೂಪಿಸಲು ಬಿಜೆಪಿಗೆ ದಾರಿಯಿಲ್ಲ, ರಾಜೇ ರಾಜಿನಾಮೆ ಕೇಳಲಿ: ಸಚಿನ್ ಪೈಲಟ್
ಐಪಿಎಲ್ ಪ್ರಮುಖ ಆರೋಪಿ ಲಲಿತ್ ವಿಚಾರದಲ್ಲಿ ಭಾಗಿಯಾಗಿರುವ ವಸುಂದರ ರಾಜೇ ಪರವಾಗಿ ಬಿಜೆಪಿ ಮತ್ತಾವುದೇ ತಂತ್ರ ರೂಪಿಸಲು ದಾರಿಯಿಲ್ಲ, ಹೀಗಾಗಿ ಬಿಜೆಪಿ ಕೂಡಲೇ ರಾಜೇ ಅವರ ರಾಜಿನಾಮೆ ಕೇಳಬೇಕೆಂದು ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ...

ನವದೆಹಲಿ: ಐಪಿಎಲ್ ಪ್ರಮುಖ ಆರೋಪಿ ಲಲಿತ್ ವಿಚಾರದಲ್ಲಿ ಭಾಗಿಯಾಗಿರುವ ವಸುಂದರ ರಾಜೇ ಪರವಾಗಿ ಬಿಜೆಪಿ ಮತ್ತಾವುದೇ ತಂತ್ರ ರೂಪಿಸಲು ದಾರಿಯಿಲ್ಲ, ಹೀಗಾಗಿ ಬಿಜೆಪಿ ಕೂಡಲೇ ರಾಜೇ ಅವರ ರಾಜಿನಾಮೆ ಕೇಳಬೇಕೆಂದು ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲಟ್ ಗುರುವಾರ ಆಗ್ರಹಿಸಿದ್ದಾರೆ.
2011ರ ಆ.18 ರಂದು ರಾಜೇ ಅವರು ಬ್ರಿಟೀಷ್ ಸರ್ಕಾರದ ಮುಂದೆ, ಲಲಿತ್ ಮೋದಿ ಅವರ ವಲಸೆ ಅರ್ಜಿಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂದರ ರಾಜೇ ಸಹಿ ಮಾಡಿರುವ ಕಡತಗಳನ್ನು ಕಾಂಗ್ರೆಸ್ ಪಕ್ಷ ಬುಧವಾರ ಬಿಡುಗಡೆ ಗೊಳಿಸಿತ್ತು. ಅಲ್ಲದೆ, ರಾಜೇ ಅವರು ಭ್ರಷ್ಟನೊಬ್ಬನಿಗೆ ಸಹಾಯ ಮಾಡಿರುವುದನ್ನು ಸಾಕ್ಷಿ ಸಮೇತವಾಗಿ ಸಾಬೀತು ಮಾಡಿದ್ದೇವೆ ಕೂಡಲೇ ರಾಜೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದವು.
ಈ ಆರೋಪವನ್ನು ತಳ್ಳಿಹಾಕಿದ್ದ ಬಿಜೆಪಿಯು ಕಡತದಲ್ಲಿ ಸಹಿ ಮಾಡಿರುವುದು ವಸುಂದರ ರಾಜೇ ಅವರದ್ದಲ್ಲ. ರಾಜೇ ಅವರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಹೇಳಿತ್ತು.
ಬಿಜೆಪಿಯ ಪ್ರತಿಕ್ರಿಯೆ ಕುರಿತಂತೆ ಕಿಡಿಕಾಡಿರುವ ಸಚಿನ್ ಪೈಲಟ್ ಅವರು, ಇದೊಂದು ವಿತಂಡವಾಗಿದ್ದು, ಬಿಜೆಪಿ ನೀಡುತ್ತಿರುವ ಹೇಳಿಕೆ ಸರಿಯಾದುದ್ದಲ್ಲ. ಒಬ್ಬ ಮುಖ್ಯಮಂತ್ರಿಯ ಸಹಿಯನ್ನು ನಕಲಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕಡತದಲ್ಲಿ ಸಹಿ ಮಾಡಿರುವ ವಿಚಾರ ಸತ್ಯ ವಸುಂದರ ರಾಜೇ ಅವರಿಗೆ ಗೊತ್ತಿದೆ. ಹೀಗಾಗಿಯೇ ರಾಜೇ ಅವರು ಬಿಜೆಪಿ ನೀಡುತ್ತಿರುವ ಹೇಳಿಕೆ ಕುರಿತಂತೆ ಈ ವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಬಿಜೆಪಿ ಕಾಲಹರಣ ಮಾಡುತ್ತಿದೆಯೇ ವಿನಃ ರಾಜೇ ಕುರಿತಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ವಸುಂದರ ರಾಜೇ ಅವರು ಎಲ್ಲಾ ತಿಳಿದಿದ್ದೂ, ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕಾದ ಸಮಯ ಬಂದಿದೆ. ರಾಜೇ ಪರವಾಗಿ ಬಿಜೆಪಿ ಏನೇ ಮಾಡಿದರೂ ಅದು ಅವರಿಗೆ ಸಹಾಯವಾಗುವುದಿಲ್ಲ. ಕಾನೂನು ರೀತಿಯಲ್ಲಿ ಸಾಮಾನ್ಯ ಜನರು, ಮಂತ್ರಿಗಳು ಎಲ್ಲರೂ ಒಂದೇ ಆಗಿದ್ದು, ಎಲ್ಲರಿಗೂ ಒಂದೇ ಕಾನೂನು ಇದೆ. ಹಾಗಾಗಿ ಇನ್ನಾವುದೇ ನೆಪ ಹೂಡದೆ ಕೂಡಲೆ ಬಿಜೆಪಿ ರಾಜೇ ಅವರ ರಾಜಿನಾಮೆ ಕೇಳಬೇಕೆಂದು ಸಚಿನ್ ಪೈಲಟ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


