ಬಾಲಕಿಯಿಂದ ಆತ್ಮಹತ್ಯಾ ದಾಳಿ
ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದು ಗೊತ್ತು. ಆದರೆ ಉತ್ತರ ಕ್ಯಾಮರೂನ್‍ನ ಮರೋವಾದಲ್ಲಿ 12 ವರ್ಷದ ಬಾಲಕಿ ಬಾರ್ ಮೇಲೆ ಇಂಥ ಕುಕೃತ್ಯ ಎಸಗಿದ್ದಾಳೆ...
ಯಾಂಡೆ (ಕ್ಯಾಮರೂನ್): ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದು ಗೊತ್ತು. ಆದರೆ ಉತ್ತರ ಕ್ಯಾಮರೂನ್‍ನ ಮರೋವಾದಲ್ಲಿ 12 ವರ್ಷದ ಬಾಲಕಿ ಬಾರ್ ಮೇಲೆ ಇಂಥ ಕುಕೃತ್ಯ ಎಸಗಿದ್ದಾಳೆ.
ಈ ಘಟನೆಯಲ್ಲಿ ಕನಿಷ್ಠ 20 ಮಂದಿ ಅಸುನೀಗಿದ್ದಾರೆ. ಶನಿವಾರ ನಡೆದ ಅವಳಿ ಬಾಂಬ್ ಸ್ಪೋಟದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಈ ಬಾಂಬ್ ದಾಳಿ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಬಾರ್‍ಗೆ ಆಗಮಿಸಿದ ಬಾಲಕಿ ಕೌಂಟರ್ ಸಮೀಪಕ್ಕೆ ಆಗಮಿಸಿ ತನ್ನನ್ನು ತಾನು ಸ್ಪೋಟಿಸಿಕೊಂಡಳು.
ಘಟನೆಯಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕ್ಯಾಮರೂನ್‍ನ ಉತ್ತರ ಭಾಗದಲ್ಲಿ ಬೋಕೋ ಹರಾಮ್ ಉಗ್ರ ಸಂಘಟನೆ ಹಲವು ಬಾರಿ ಬಾಂಬ್ ದಾಳಿ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

