ದೇಶ

ರಫ್ತಿಗೆ ಬಡ್ಡಿ ಸಬ್ಸಿಡಿ

ದೇಶದ ರಫ್ತು ಸತತವಾಗಿ ಕುಸಿಯುತ್ತಿರುವುದರಿಂದ ವಿಚಲಿತಗೊಂಡಿರುವ ಕೇಂದ್ರ ಸರ್ಕಾರ ರಫ್ತು ಕಂಪನಿಗಳನ್ನು ಉತ್ತೇಜಿಸಲು ಶೀಘ್ರದಲ್ಲಿ ಬಡ್ಡಿ ಸಹಾಯಧನ ...

ರಫ್ತಿಗೆ ಬಡ್ಡಿ ಸಬ್ಸಿಡಿ
ನಿರ್ಮಲಾ ಸೀತಾರಾಮನ್
Published On :

ನವದೆಹಲಿ: ದೇಶದ ರಫ್ತು  ಸತತವಾಗಿ  ಕುಸಿಯುತ್ತಿರುವುದರಿಂದ  ವಿಚಲಿತಗೊಂಡಿರುವ
ಕೇಂದ್ರ ಸರ್ಕಾರ ರಫ್ತು ಕಂಪನಿಗಳನ್ನು ಉತ್ತೇಜಿಸಲು ಶೀಘ್ರದಲ್ಲಿ ಬಡ್ಡಿ ಸಹಾಯಧನ ಯೋಜನೆ ಪ್ರಕಟಿಸುವುದಾಗಿ ಹೇಳಿದೆ. ಅತಿ ಹೆಚ್ಚು ಸುಸ್ಥಿರತೆ ಹೊಂದಿರುವ ರಫ್ತು ಕ್ಷೇತ್ರಕ್ಕೆ ಈ ಯೋಜನೆ ಉತ್ತೇಜನ ತುಂಬಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖ ಕಂಡಿರುವುದರಿಂದ ಮತ್ತು ಕರೆನ್ಸಿಗಳು ಅದರಲ್ಲೂ ಯುರೊ ಮೌಲ್ಯ ಕುಸಿಯುತ್ತಿರುವುದರಿಂದ ಭಾರತದ ರಫ್ತು ವಹಿವಾಟು ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ.
ರಫ್ತು ಹೆಚ್ಚಿಸಲು ಅಗತ್ಯವಾದ ಪರಿಸ್ಥಿತಿಗಳು ಸಂಭವಿಸುತ್ತಿಲ್ಲ. ರಫ್ತು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವಾಲಯ ಉದ್ಯಮ ಒಕ್ಕೂಟಗಳೊಂದಿಗೆ ಚರ್ಚಿಸಿದೆ. ಇದೇ ಸಂದರ್ಭದಲ್ಲಿ ಹೊಸ ಮಾರುಕಟ್ಟೆಗಳನ್ನು ತಲುಪುವತ್ತಲೂ ನೋಟ ಹರಿಸಿದೆ ಎಂದು ಹೇಳಿದ್ದಾರೆ.
ಬಡ್ಡಿ ಸಬ್ಸಿಡಿ ಯೋಜನೆಯಲ್ಲಿ ರಫ್ತುದಾರರು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲಿದ್ದಾರೆ. ಇದರಿಂದ ಕಳೆದ ಏಳು ತಿಂಗಳಿಂದ ನೇತ್ಯಾತ್ಮಕ ವಲಯದಲ್ಲಿರುವ ರಫ್ತು ಉತ್ತೇಜನ ಪಡೆಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನೀಡಿದ್ದ ಶೇ.3ರಷ್ಟು ಬಡ್ಡಿ ಸಹಾಯ ಧನ ಯೋಜನೆ ಕಳೆದ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡಿತ್ತು. ಕಳೆದ ಜೂನ್‍ನಲ್ಲಿ ಭಾರತದ ರಫ್ತು ಶೇ.15.82ರಷ್ಟು ಕುಸಿದು 2,228 ಕೋಟಿ ಡಾಲರ್‍ಗೆ ತಲುಪಿತ್ತು. ಗ್ರೀಕ್ ನಲ್ಲಿ  ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ಐರೋಪ್ಯ ಒಕ್ಕೂಟದೊಂದಿಗೆ ಪ್ರಸ್ತಾವಿತ ಮುಕ್ತ
ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಲಾಗುವು ದು. ಈ ಕುರಿತು ಭಾರತ ಮತ್ತು ಐರೋಪ್ಯ ಮುಖಂಡರು ಮುಂದಿನ ತಿಂಗಳು ಮಾತುಕತೆಗಳನ್ನು ಅರಂಭಿಸಲಿದ್ದಾರೆ ಎಂದು
ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ. ದಕ್ಷಿಣ ಅಮೆರಿಕದ ಹಲವು ದೇಶಗಳೊಂದಿಗೂ ಇಂತಹ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಮುಕ್ತ ವಾಣಿಜ್ಯ ಒಪ್ಪಂದಗಳತ್ತ ನೋಟ ಹರಿಸುವಂತೆ ಕೇಂದ್ರ ಸರ್ಕಾರ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್‍ರಿಗೆ ಸೂಚಿಸಿದೆ ಎಂಬ ವರದಿಗಳಿವೆ ಎಂಬ ಪ್ರಶ್ನೆಗೆ, ಹೂಡಿಕೆ ಮತ್ತು ಹೂಡಿಕೆ ರಕ್ಷಣೆಗೆ ಸಂಬಂಧಿಸಿದ ವಿಷಯಗಳಿಗೆ ಹಣಕಾಸು ಸಚಿವಾಲಯ ಅಂತಿಮ ಅನುಮೋದನೆ ನೀಡಬೇಕು. ಹೀಗಾಗಿ ಹಣಕಾಸು ಸಚಿವಾಲಯ ಈ ಕುರಿತು ಪರಿಶೀಲಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಗ್ಗದ ದರದಲ್ಲಿ ದೇಶಕ್ಕೆ ಬರುತ್ತಿರುವ ವಿದೇಶಿಉಕ್ಕಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕೆಂದು ದೇಶೀಯ ಉಕ್ಕು ಕಂಪನಿಗಳು ಒತ್ತಾಯಿಸಿರುವ ಕುರಿತು ಉತ್ತರಿಸಿದ ಅವರು, ಚೀನಾದಿಂದ ಆಮದಾಗುವ ಉಕ್ಕು ತುಂಬಾ ಅಗ್ಗವಾಗಿದೆ. ಆದರೂ ಈ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.