ರವಿಶಂಕರ ಗುರೂಜಿಗೆ ತಾಲಿಬಾನ್ ರಿಂದ ಜೀವ ಬೆದರಿಕೆ?
ಧಾರ್ಮಿಕ ಗುರು ರವಿಶಂಕರ ಗುರೂಜಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ತಾನಿಬಾನ್ ನಿಂದ ಜೀವಬೆದರಿಕೆ ಬಂದಿದೆ ಎಂದು ವರದಿಯಾಗಿದೆ...

ನವದೆಹಲಿ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪಕ, ಧಾರ್ಮಿಕ ಗುರು ರವಿಶಂಕರ ಗುರೂಜಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ತಾನಿಬಾನ್ ನಿಂದ ಜೀವಬೆದರಿಕೆ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತಾಲಿಬಾನ್ ಸಂಘಟನೆ ಆರ್ಟ್ ಆಫ್ ಲೀವಿಂಗ್ ಕೇಂದ್ರಕ್ಕೆ ಎರಡು ಪತ್ರಗಳನ್ನು ಕಳುಹಿಸಿದ್ದು, ರವಿಶಂಕರ ಗುರೂಜಿ ಮತ್ತು ಅವರ ಅನುಯಾಯಿಗಳನ್ನು ಗುರಿಯಾಗಿಟ್ಟು ಬಾಂಬ್ ಸ್ಪೋಟ ಮಾಡುವುದಾಗಿ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ.
ಬೆದರಿಕೆ ಹಿನ್ನೆಲೆಯಲ್ಲಿ, ರವಿಶಂಕರ ಗುರೂಜಿ ಅವರ ಭದ್ರತೆಯನ್ನು ಮತ್ತು ತಾಲಿಬಾನ್ ಕಳುಹಿಸಿರುವ ಪತ್ರವನ್ನು ಪರಿಶೀಲಿಸುವಂತೆ ಗೃಹ ಸಚಿವಾಲಯ ಅಧಿಕಾರಿಗಳಿಗೆ ಆದೇಶ ನೀಡಿದೆ.
2012ರಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಹತ್ತಿರ ಆರ್ಟ್ ಆಫ್ ಲೀವಿಂಗ್ ಕೇಂದ್ರದ ಶಾಖೆಯನ್ನು ಆರಂಭಗೊಂಡಿತ್ತು. ಆ ಸಮಯದಲ್ಲಿ ರವಿಶಂಕರ ಗುರೂಜಿ ಅಲ್ಲಿ ಶಾಂತಿ ಸ್ಥಾಪನೆ ಪ್ರಯತ್ನವಾಗಿ ತಾಲಿಬಾನರನ್ನು ಮಾತುಕತೆಗೆ ಕರೆದಿದ್ದರು. ಕಳೆದ ವರ್ಷ ಉಗ್ರರು ಆರ್ಟ್ ಆಫ್ ಲೀವಿಂಗ್ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದರು.
ಕಳೆದ ಮಾರ್ಚ್ ತಿಂಗಳಿನಲ್ಲಿ ರವಿಶಂಕರ ಗುರೂಜಿ ಮಲೇಷ್ಯಾದಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಐಎಸ್ ಐಎಸ್ ಉಗ್ರಗಾಮಿ ಸಂಘಟನೆಯಿಂದಲೂ ಬೆದರಿಕೆ ಕರೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


