ದೇಶ

ಐಫೋನ್‌ಗಳನ್ನು ಇಎಂಐ ಸೌಲಭ್ಯದಲ್ಲಿ ಮಾರಾಟ ಮಾಡಲಿದೆ ವೊಡಾಫೋನ್

ಆ್ಯಪಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟಕ್ಕೆ ಹೊಸ...

ಐಫೋನ್‌ಗಳನ್ನು ಇಎಂಐ ಸೌಲಭ್ಯದಲ್ಲಿ ಮಾರಾಟ ಮಾಡಲಿದೆ ವೊಡಾಫೋನ್
Published On :

ನವದೆಹಲಿ: ಆ್ಯಪಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟಕ್ಕೆ ಹೊಸ ತಂತ್ರ ಹೆಣೆದಿದೆ. ವೊಡಾಫೋನ್ ಗ್ರಾಹಕರಿಗೆ ಐಫೋನ್‌ಗಳನ್ನು ಇಎಂಐ ರೂಪದಲ್ಲಿ ಖರೀದಿಸಲು ಅವಕಾಶಮಾಡಿಕೊಟ್ಟಿದೆ.

ಅದರಂತೆ ವೊಡಾಫೋನ್ ತನ್ನ ಗ್ರಾಹಕರಿಗೆ ಇಎಂಐ ರೂಪದಲ್ಲಿ ಐಫೋನ್ ಖರೀದಿ ಯೋಜನೆ ಘೋಷಿಸಿದೆ.

ಗ್ರಾಹಕರು ಎರಡು ವರ್ಷ ಪ್ರತಿ ತಿಂಗಳು ರು.2,099 ಪಾವತಿಸುವ ಮೂಕ ಐಫೋನ4ಎಸ್ ಖರೀದಿಬಹುದು. ಉಚಿತ ಎಸ್‌ಎಂಎಸ್‌ಗಳು, ಎಸ್‌ಟಿಡಿ/ಸ್ಥಳೀಯ ಕರೆಗಳು, 3ಜಿ ಡಾಟಾ ಬಳಕೆ ಶುಲ್ಕ ಹಾಗೂ ತೆರಿಗೆಯೂ ಈ ಇಎಂಐನಲ್ಲಿ ಸೇರಿರುತ್ತದೆ.

ಇದೇ ರೀತಿ ಐಫೋನ್5ಸಿ-ರು.2499, ಐಫೋನ್5ಎಸ್-ರು.2,999 ಹಾಗೂ ಐಫೋನ್6ಗಾಗಿ ಪ್ರತಿ ತಿಂಗಳು ರು.3,599 ಪಾವತಿಸಬೇಕು. ಐಫೋನ್-6ಗೆ ಝೀರೋ ಡೌನ್‌ಪೇಮೆಂಟ್. ಆದರೆ, 5ಎಸ್, 5ಸಿ ಮತ್ತು 4ಎಸ್‌ಗಳಿಗೆ ರು.4,990 ಹಾಗೂ ಐಫೋನ್-6 ಪ್ಲಸ್‌ಗೆ ರು.8,490 ಡೌನ್‌ಪೇಮೆಂಟ್ ಪಾವತಿ ಕಡ್ಡಾಯ.

ಈ ಸೌಲಭ್ಯದಿಂದ ಗ್ರಾಹಕರಿಗೆ ತಮಗಿಷ್ಟವಾದ ಐಫೋನಗಳನ್ನು ಖರೀದಿಸಿದಂತೆಯೂ ಆಯ್ತು. ಜತೆಗೆ, ಹೆಚ್ಚುವರಿ ಶುಲ್ಕಿವಿಲ್ಲದೆ ವೊಡಾಫೋನ್ ಸೇವೆಯ ಸಂಪೂರ್ಣ ಸದುಪಯೋಗ ಪಡೆಯುವುದೂ ಸಾಧ್ಯವಾಗಲಿದೆ. ಒಟ್ಟಾರೆ ನೋಡಿದರೆ ಹೆಚ್ಚು ಡಾಟಾ ಬಳಸುವವರಿಗೆ ಇದರಿಂದ ಉಳಿತಾಯವೇ ಆಗಲಿದೆ ಎಂದು ವೊಡಾಫೋನ್ ಇಂಡಿಯಾದ ಸಿಇಒ ಮಾರ್ಟನ್ ಪೀಟರ್ಸ್ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.