ಪತಂಜಲಿ ನೂಡಲ್ಸ್ ನಲ್ಲಿ ಕೀಟಪತ್ತೆ : ಬಾಬಾ ರಾಮ್ ದೇವ್ ಗೆ ಸಂಕಷ್ಟ
ಬಾಬಾ ರಾಮ್ ದೇವ್ ಕನಸಿನ ಕೂಸಾಗಿದ್ದ ಪತಂಜಲಿ ಅಟಾ ನೂಡಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಹರ್ಯಾಣದ ಅಂಗಡಿಯೊಂದರಲ್ಲಿ ಪಂತಂಜಲಿ ನೂಡಲ್ಸ್ ಪಾಕೆಟ್ ...

ನವದೆಹಲಿ: ಬಾಬಾ ರಾಮ್ ದೇವ್ ಕನಸಿನ ಕೂಸಾಗಿದ್ದ ಪತಂಜಲಿ ಅಟಾ ನೂಡಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಹರ್ಯಾಣದ ಅಂಗಡಿಯೊಂದರಲ್ಲಿ ಪಂತಂಜಲಿ ನೂಡಲ್ಸ್ ಪಾಕೆಟ್ ಒಳಗೆ ಕೀಟಗಳು ಪತ್ತೆಯಾಗಿವೆ.
ಹರ್ಯಾಣದ ನರ್ವಾನದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಪತಂಜಲಿ ನೂಡಲ್ಸ್ ಪಾಕೆಟ್ ಖರೀದಿಸಿದರು. ನಂತರ ಅದನ್ನು ತೆರೆದಾಗ ಸೀಲ್ ಮಾಡಿದ್ದ ಪಾಕೆಟ್ ನಲ್ಲಿ ಕೆಲವು ಕೀಟಗಳು ಪತ್ತೆಯಾಗಿವೆ ಎಂದು ಆಂಗ್ಲ ವಾಹಿನಿಯೊಂದು ಹೇಳಿದೆ.
ತನ್ನ ಅಂಗಡಿಯಿಂದಲೇ ಖರೀದಿಸಿದ್ದ ಪತಂಜಲಿ ನೂಡಲ್ಸ್ ಪಾಕೆಟ್ ನಲ್ಲಿ ಕೀಟಗಳು ಪತ್ತೆಯಾಗಿದೆ ಎಂದು ಅಂಗಡಿ ಮಾಲೀಕ ಒಪ್ಪಿಕೊಂಡಿದ್ದಾನೆ.
ಇನ್ನು ನೂಡಲ್ಸ್ ಖರೀದಿಸಿದ್ದ ವ್ಯಕ್ತಿಯೂ ಪತಂಜಲಿ ನೂಡಲ್ಸ್ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ. ನೆಸ್ಟ್ಲೆ ಕಂಪನಿಯ ಮ್ಯಾಗಿ ನಿಷೇಧವಾದ ನಂತರ ಬಾಬಾ ರಾಮ್ ದೇವ್ ತಮ್ಮ ಪತಂಜಲಿ ನೂಡಲ್ಸ್ ಅನ್ನು ಮಾರುಕಟ್ಟೆಗೆ ತಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


