ದೇಶ

ಚೆನ್ನೈನ ಶ್ವಾನಗಳಿಗೆ ಬೆಂಗಳೂರಲ್ಲಿ ಆಶ್ರಯ!

ಮಳೆಯಿಂದ ತತ್ತರಿಸಿರುವ ತಮಿಳುನಾಡಲ್ಲಿ ಜನರನ್ನೇ ರಕ್ಷಿಸಲು ರಕ್ಷಣಾತಂಡಗಳು ಹರಸಾಹಸ ಪಡುತ್ತಿದ್ದರೆ, ಪ್ರಾಣಿ-ಪಕ್ಷಿಗಳ ಕಥೆ...

ಚೆನ್ನೈನ ಶ್ವಾನಗಳಿಗೆ ಬೆಂಗಳೂರಲ್ಲಿ ಆಶ್ರಯ!
ಚೆನ್ನೈ ಪ್ರವಾಹ: ಸಾಕು ನಾಯಿಯನ್ನು ಹೊತ್ತುಯುತ್ತಿರುವ ಯುವಕ
Published On :

ಚೆನ್ನೈ: ಮಳೆಯಿಂದ ತತ್ತರಿಸಿರುವ ತಮಿಳುನಾಡಲ್ಲಿ ಜನರನ್ನೇ ರಕ್ಷಿಸಲು ರಕ್ಷಣಾತಂಡಗಳು ಹರಸಾಹಸ ಪಡುತ್ತಿದ್ದರೆ, ಪ್ರಾಣಿ-ಪಕ್ಷಿಗಳ ಕಥೆ ಕೇಳುವವರಾರು? 

ಇಂಥ ಸ್ಥಿತಿಯಲ್ಲಿ ಮೂಕಪ್ರಾಣಿಗಳ ರೋದನಕ್ಕೆ ಕಿವಿಯಾದದ್ದು `ಹೋಟೆಲ್ ಫಾರ್ ಡಾಗ್ಸ್' ಎಂಬ ಸಂಸ್ಥೆ. ಚೆನ್ನೈ ಮೂಲದ ಈ ಸಂಸ್ಥೆಯು ಪ್ರವಾಹಪೀಡಿತ ಸ್ಥಳಗಳಲ್ಲಿನ ನಾಯಿಗಳನ್ನು ತನ್ನ ಬೆಂಗಳೂರಿನ ಹೋಟೆಲ್‍ಗೆ ಸ್ಥಳಾಂತರ ಮಾಡುತ್ತಿವೆ. 

ಸಾಕುಪ್ರಾಣಿಗಳ ಮಾಲೀಕರು ಈ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದು, ತಮ್ಮ ಪ್ರಾಣಿಗಳ ಸುರಕ್ಷೆಯ ಹೊಣೆಯನ್ನು ಇವರಿಗೆ ವಹಿಸಿದ್ದಾರೆ. ಅದರಂತೆ, ನಾಯಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. 

ತಮಿಳು ನಾಡಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಇವುಗಳನ್ನು ಮರಳಿ, ಮಾಲೀಕರಿಗೆ ಒಪ್ಪಿಸ ಲಾಗುವುದು ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.