ದೇಶ

ಕೊರಿಯರ್ ವ್ಯಾನ್ ಚಾಲಕನಿಗೆ ಗುಂಡಿಕ್ಕಿ ಕೊಂದು; ಕೋಟ್ಯಾಂತರ ರುಪಾಯಿ ಚಿನ್ನಾಭರಣ ಲೂಟಿ

ಶಸ್ತ್ರ ಸರ್ಜಿತ ದುಷ್ಕರ್ಮಿಯೊಬ್ಬ ಕೊರಿಯರ್ ವ್ಯಾನ್ ಚಾಲಕನ ಮೇಲೆ ಗುಂಡು ಹಾರಿಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನವನ್ನು ಲಪಟಾಸಿರುವ...

ಕೊರಿಯರ್ ವ್ಯಾನ್ ಚಾಲಕನಿಗೆ ಗುಂಡಿಕ್ಕಿ ಕೊಂದು; ಕೋಟ್ಯಾಂತರ ರುಪಾಯಿ ಚಿನ್ನಾಭರಣ ಲೂಟಿ
ಚಿನ್ನ
Published On :
ಉನ್ನವೋ: ಶಸ್ತ್ರ ಸರ್ಜಿತ ದುಷ್ಕರ್ಮಿಯೊಬ್ಬ ಕೊರಿಯರ್ ವ್ಯಾನ್ ಚಾಲಕನ ಮೇಲೆ ಗುಂಡು ಹಾರಿಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನವನ್ನು ಲಪಟಾಸಿರುವ ಘಟನೆ ಲಖನೌ-ಕಾನ್ಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಸಿದೆ.
ಸೀಕ್ವೆಲ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದ ಕೊರಿಯರ್ ವಾಹನದಲ್ಲಿ ಕೋಟ್ಯಾಂತರ ಮೊತ್ತದ ಚಿನ್ನವನ್ನು ಅಹಮದಬಾದ್ ನಿಂದ ಲಖನೌಗೆ ಸಾಗಿಸಲಾಗುತ್ತಿತ್ತು. ಬಜೇರಾ ಹಳ್ಳಿ ಬಳಿ ವಾಹನ ಬರುತ್ತಿದ್ದಂತೆ ದುಷ್ಕರ್ಮಿಯೊಬ್ಬ ವಾಹನ ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ. 
ಮೃತ ಚಾಲಕ 30 ವರ್ಷದ ಹರಿಚಂದ್ ಯಾದವ್ ಎಂದು ತಿಳಿದುಬಂದಿದ್ದು, ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ. ವಾಹನದಲ್ಲಿದ್ದ ಮತ್ತೊರ್ವ ಜೀವ ಉಳಿಸಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾನೆ. 
ಆಗಂತುಕನೊಬ್ಬ ಕೋಟ್ಯಾಂತರ ರುಪಾಯಿ ಮೌತ್ತದ ಚಿನ್ನಾಭರಣ, ಒಂದು ಮೊಬೈಲ್ ಹಾಗೂ ಮೂರು ಎಟಿಎಂ ಕಾರ್ಡ್ ಗಳನ್ನು ಲಪಟಾಯಿಸಿರುವುದಾಗಿ ಪೊಲೀಸರು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.