ರೈತನ ಆತ್ಮಹತ್ಯೆ ಆಪ್ ಆಡಿದ ನಾಟಕ: ಆರ್ ಎಸ್ಎಸ್
ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಆಪ್ ನಡೆಸಿದ ಪ್ರತಿಭಟನೆ ವೇಳೆ ರೈತ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡದ್ದು ಆಪ್ ಆಡಿದ ನಾಟಕ. ಆದರೆ, ಇದೇ ನಾಟಕ ದುರಂತ ಕಥೆಯಾಯಿತು. ಇದರಿಂದಾದರೂ ಆಮ್ ಆಮ್ ಆದ್ಮಿ...

ನವದೆಹಲಿ: ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಆಪ್ ನಡೆಸಿದ ಪ್ರತಿಭಟನೆ ವೇಳೆ ರೈತ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡದ್ದು ಆಪ್ ಆಡಿದ ನಾಟಕ. ಆದರೆ, ಇದೇ ನಾಟಕ ದುರಂತ ಕಥೆಯಾಯಿತು. ಇದರಿಂದಾದರೂ ಆಮ್ ಆಮ್ ಆದ್ಮಿ ಪಕ್ಷ ಬುದ್ಧಿ ಕಲಿಯಬೇಕಿದೆ ಎಂದು ಆರ್ ಎಸ್ಎಸ್ ಸೋಮವಾರ ಹೇಳಿದೆ.
ಈ ಕುರಿತಂತೆ ತನ್ನ ಮುಖವಾಣಿ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ ಪ್ರತಿಕ್ರಿಯೆ ನೀಡಿರುವ ಆರ್ಎಸ್ಎಸ್, ಭಾರತೀಯ ರಾಜಕೀಯ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷ ಮನರಂಜನಾ ಪಕ್ಷವಾಗಿ ಸೇರ್ಪಡೆಯಾಗಿದ್ದು, ರೈತರ ಆತ್ಮಹತ್ಯೆಯನ್ನು ಹಿಡಿದು ಆಪ್ ನಾಟಕವಾಡಲುಹೊರಟಿದೆ.
ಗರಿಬಿ ಹಟಾವೋ, ಅಚ್ಚೆ ದಿನ್ ಎಂಬ ಪದಗಳು ಮತದಾರರ ಮನಮುಟ್ಟುವಂತಹ ಪದಗಳಾಗಿದ್ದವು. ಆದರೆ, ಆಪ್ ಮಾಡಿದ್ದೇನು? ರೈತರ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವ ನೆಪದಲ್ಲಿ ರೈತನು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡುವಂತೆ ಮಾಡಿ ಅತ್ಯಂತ ಕೀಳುಮಟ್ಟದ ರಾಜಕೀಯಕ್ಕೆ ಮಾಡಿತು. ನಾಟಕವಾಡುವ ನೆಪದಲ್ಲಿ ರೈತ ಸಾಯುವಂತೆ ಮಾಡಿ ದುರ್ಘಟನೆಯೊಂದು ಸಂಭವಿಸುವುದಕ್ಕೆ ಕಾರಣವಾಯಿತು.
ಮಾಧ್ಯಮದ ಮೂಲಕ ಜನರ ಗಮನ ಸೆಳೆಯುವ ಸಲುವಾಗಿ ಆಪ್ ಪಕ್ಷ ರೈತರ ಕುರಿತಂತೆ ಪ್ರತಿಭಟನೆ ಆಯೋಜಿಸಿತು. ನಾಟಕವಾಡಲು ಹೋದ ರೈತ ನಿಜವಾಗಲೂ ದುರಂತಕ್ಕೀಡಾಗುವಂತೆ ಮಾಡಿತು. ಅದು ಕೇವಲ ಕೆಟ್ಟ ರಾಜಕೀಯಕ್ಕಾಗಿ ಎಂದು ಆಪ್ ವಿರುದ್ಧ ಆರ್ ಎಸ್ಎಸ್ ತೀವ್ರ ರೀತಿಯಲ್ಲಿ ಕಿಡಿಕಾರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


