ಮೋದಿ ಮಲಗೋದಿಲ್ಲ, ನಮ್ಮನ್ನು ಮಲಗೋಕೆ ಬಿಡೋದಿಲ್ಲ: ವೆಂಕಯ್ಯ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು, ಮೋದಿ ಅವರು ಮಲಗೋದಿಲ್ಲ, ತನ್ನ ಸಂಪುಟದ ಸಚಿವರನ್ನೂ ಮಲಗೋಕೆ ಬಿಡುವುದಿಲ್ಲ ಎಂದರು.
ಪ್ರಧಾನಿ ಮೋದಿ ಅವರ ಅಧೀನದಲ್ಲಿ ಕೆಲಸ ಮಾಡಲು ಹೆಚ್ಚು ಖುಷಿಯಾಗುತ್ತದೆ. ಏಕೆಂದರೆ ಜನರಿಗಾಗಿ ಕೆಲಸ ಮಾಡುವುದರಲ್ಲಿ ಹೆಚ್ಚು ಸಂತೋಷ ಸಿಗುತ್ತದೆ ಎಂದರು. ಹೀಗಾಗಿ ಮೋದಿ ಅಡಿಯಲ್ಲಿ ಎಲ್ಲಾ ಸಚಿವರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ವೆಂಕಯ್ಯ ನಾಯ್ಡು ಅವರು ಶ್ಲಾಘಿಸಿದರು.
ದೇಶದಲ್ಲಿರುವ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಬೇಕೆಂಬ ಗುರಿಯನ್ನು ತಲುಪಲು 5 ವರ್ಷ ಬೇಕಾಗಬಹುದು ಎಂದು ಸಂಪುಟ ಸಚಿವರೆಲ್ಲರೂ ಹೇಳಿದರು. ಆದರೆ ಪ್ರಧಾನಿ ಒಂದೇ ವರ್ಷದಲ್ಲಿ ಇದು ಮುಗಿಯಬೇಕು ಎಂದು ಖಡಾಖಂಡಿತವಾಗಿ ತಿಳಿಸಿದ್ದರು. ಅದರಂತೆ ಜನಧನ ಯೋಜನೆ ಆರಂಭವಾಗಿ ಎರಡು ತಿಂಗಳು ಮುಗಿಯುವದರೊಳಗೆ ಹೊಸದಾಗಿ ಏಳು ಕೋಟಿ ಜನರು ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಮೋದಿಯ ಪ್ರೇರಣೆಯಿಂದಾಗಿಯೇ ಇಂತಹ ಕಾರ್ಯ ಯಶಸ್ವಿಯಾಗುತ್ತಿದೆ ಎಂದು ವೆಂಕಯ್ಯ ನಾಯ್ಡು ಬಣ್ಣಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


