ಎಂ ವೆಂಕಯ್ಯ ನಾಯ್ಡು

ರಾಜ್ಯದ ಏಳು ಸಾಧಕರು ಸೇರಿ 34 ಮಂದಿಗೆ ಪದ್ಮಶ್ರೀ, ಚಿರಂಜೀವಿ, ವೆಂಕಯ್ಯ ನಾಯ್ಡುಗೆ ಪದ್ಮವಿಭೂಷಣ
ಕೇಂದ್ರ ಸರ್ಕಾರ 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 34 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಂಸತ್ ಅಧಿವೇಶನ ಸಂದರ್ಭದಲ್ಲಿ ಸಂಸದರನ್ನು ಬಂಧಿಸಬಹುದು: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು
ಸಂಸತ್ತಿನ ಸದಸ್ಯರು ಸದನದ ಅಧಿವೇಶನದಲ್ಲಿ ಅಪರಾಧ ಪ್ರಕರಣಗಳಲ್ಲಿ ಬಂಧನದಿಂದ ಯಾವುದೇ ವಿನಾಯಿತಿಯನ್ನು ಪಡೆಯುವುದಿಲ್ಲ ಮತ್ತು ಕಾನೂನು ಜಾರಿ ಸಂಸ್ಥೆಗಳು ನೀಡುವ ಸಮನ್ಸ್‌ಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಆದೇಶ ಹಿಂಪಡೆಯುವಿಕೆ ಪರಿಗಣನೆ: ವೆಂಕಯ್ಯ ನಾಯ್ಡು
ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 19 ಸದಸ್ಯರ ಅಮಾನತು ಮಾಡಿರುವ ಬೆನ್ನಲ್ಲೇ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಅಮಾನತುಗೊಂಡಿರುವ ಎಲ್ಲ ಸದಸ್ಯರು ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಹಿಂತೆಗೆದುಕೊಳ್ಳುವಿಕೆಯನ್ನು ಪರಿಗಣಿಸಬಹುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಜೀವವಿಲ್ಲದ ಕಲ್ಲುಗಳಿಗೆ ಸಂಗೀತ ನೀಡಿದ ಕುಶಲಕರ್ಮಿಗಳಿಗೆ ವಂದನೆ: ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು
ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಶನಿವಾರ ಕುಟುಂಬ ಸಮೇತ ವಿಶ್ವ ವಿಖ್ಯಾತ ಹಂಪಿ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾರ್ಕ್ ಮಾಯ!
ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಎದುರಿಗೆ ಬ್ಲೂ ಬ್ಯಾಡ್ಜ್ ಅಥವಾ ಟಿಕ್ ಮಾರ್ಕ್ ಬರುತ್ತದೆ. ನೀಲಿ ಬಣ್ಣದ ಟಿಕ್ ಮಾರ್ಕ್ ಇದ್ದರೆ ಸಂಬಂಧಪಟ್ಟವರ ಅಧಿಕೃತ ಟ್ವಿಟ್ಟರ್ ಖಾತೆ ಎಂದರ್ಥ.

ಸ್ವಾವಲಂಭಿ ಭಾರತ: 'ಲೋಕಲ್' ಭಾರತವನ್ನು 'ಗ್ಲೋಕಲ್' ಆಗಿ ಪರಿವರ್ತಿಸಲು ವೆಂಕಯ್ಯ ನಾಯ್ಡು ಕರೆ
ದೇಶದ ಪ್ರತಿ ನಾಗರಿಕ ಕೂಡ "ಸ್ಥಳೀಯ ಭಾರತ"ವನ್ನು "ಗ್ಲೋಕಲ್ ಇಂಡಿಯಾ" (ಗ್ಲೋಬಲ್ ಮತ್ತು ಲೋಕಲ್) ಆಗಿ ಪರಿವರ್ತಿಸುವ 'ಸ್ವಾವಲಂಬಿ ಭಾರತ' ಅಭಿಯಾನ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ವಿಶ್ವವಿದ್ಯಾಲಯ ಪವಿತ್ರ ಸ್ಥಳ; ಅಲ್ಲಿ ರಾಜಕೀಯ ಸರಿಯಲ್ಲ: ಎಂ.ವೆಂಕಯ್ಯನಾಯ್ಡು
ವಿಶ್ವವಿದ್ಯಾಲಯಗಳು ದೇಗುಲದಂತೆ ಪವಿತ್ರ ಸ್ಥಾನಗಳು. ಪಾದರಕ್ಷೆಗಳನ್ನು ಹೊರಗೆ ಕಳಚಿಟ್ಟು ನಾವು ದೇವಸ್ಥಾನಕ್ಕೆ ಹೋಗುವ ರೀತಿಯಲ್ಲೇ ರಾಜಕೀಯವನ್ನು ವಿಶ್ವವಿದ್ಯಾಲಯಗಳಿಂದ ಹೊರಗಿಡಬೇಕಾದುದು ಅತ್ಯಗತ್ಯ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡುಗೆ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ
ಭಾರತದ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರಿಗೆ ಕೊಮೊರೋಸ್ ಸರ್ಕಾರ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ ನೀಡಿ ಸತ್ಕರಿಸಿದೆ.

ಶಾಂತಿ ಬಯಸುವ ನಮ್ಮ ಮೇಲೆ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ: ವೆಂಕಯ್ಯ ನಾಯ್ಡು
ಶಾಂತಿ ಬಯಸುವ ನಮ್ಮ ಮೇಲೆ ಯಾರಾದರೂ ದಾಳಿ ಮಾಡಿದರೆ ನಾವು ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.

