ದೇಶ

ರಾಮ್ ಬನ್ ನಲ್ಲಿ ಉಗ್ರರ ಅಡಗುತಾಣದ ಮೇಲೆ ಸೇನೆ ದಾಳಿ

ಜಮ್ಮುವಿನ ರಾಮ್ ಬನ್ ಜಿಲ್ಲೆಯಲ್ಲಿ ಉಗ್ರಗಾಮಿಗಳ ಅಡಗುತಾಣದ ಮೇಲೆ ದಾಳಿ ನಡೆಸಿದ ಸೇನೆ ಅಪಾರ ಪ್ರಮಾಣದ...

ರಾಮ್ ಬನ್ ನಲ್ಲಿ ಉಗ್ರರ ಅಡಗುತಾಣದ ಮೇಲೆ ಸೇನೆ ದಾಳಿ
ಸಾಂದರ್ಭಿಕ ಚಿತ್ರ
Published On :

ಜಮ್ಮು: ಜಮ್ಮುವಿನ ಕಾಶ್ಮೀರದ ರಾಮ್ ಬನ್ ಜಿಲ್ಲೆಯಲ್ಲಿ ಉಗ್ರಗಾಮಿಗಳ ಅಡಗುತಾಣದ ಮೇಲೆ ದಾಳಿ ನಡೆಸಿದ ಸೇನೆ ಅಪಾರ ಪ್ರಮಾಣದ ಯುದ್ಧ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ರಾಮ್ ಬನ್ ಜಿಲ್ಲೆಯ ದಟ್ಟ ಕಾಡುಗಳಲ್ಲಿ ಉಗ್ರರು ಅಡಗಿದ್ದ ಮಾಹಿತಿ ದೊರೆತಾಕ್ಷಣ ಸೇನೆ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯ ವೇಳೆ ಉಗ್ರರ ಸುಸಜ್ಜಿತ ಅಡಗುದಾಣ ಕಂಡು ಬಂದು, ಅದರ ಮೇಲೆ ನಡೆಸಿದ ಯಶಸ್ವಿ ತಪಾಸಣೆಯಲ್ಲಿ ೨ ಪಿಸ್ತೂಲ್ ಗಳು, ೨ ರೇಡಿಯೋಗಳು, ೨ ಎ ಕೆ ಮ್ಯಾಗಜೀನ್ ಗಳು, ೩೭ ಸುತ್ತಿನ ಎ ಕೆ ೪೭ ಗುಂಡುಗಳು, ೧ ದೂರದರ್ಶಕ ಗಳನ್ನು ಸೇನೆ  ವಶಪಡಿಸಿಕೊಂಡಿದೆ.

ರಾಷ್ಟ್ರೀಯ ರೈಫಲ್ಸ್ ಮತ್ತು ಜೆ ಕೆ ಪಿ ಅವರ ತೀವ್ರ ಕಾರ್ಯಾಚರಣೆಯಿಂದ ಇಷ್ಟು ಪ್ರಮಾಣದ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ಮುಂಬರುವ ಚುನಾವಣೆಗೂ ಮುಂಚೆ ಈ ಪ್ರದೇಶದಲ್ಲಿ ಭಯಭೀತಿ ಹುಟ್ಟಿಸುವ ಉಗ್ರರ ಯೋಜನೆಗೆ ತಡೆ ಬಿದ್ದಿದೆ ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.