ಸಚಿನ್‌ರ 'ಪ್ಲೇಯಿಂಗ್ ಇಟ್ ಮೈ ವೈ' ಆತ್ಮಕತೆ ಬಿಡುಗಡೆ
ಭಾರತದ ಕ್ರಿಕೆಟ್ ದೇವರು...

ಮುಂಬೈ: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆತ್ಮಚರಿತ್ರೆ 'ಪ್ಲೇಯಿಂಗ್ ಇಟ್ ಮೈ ವೇ' ಪುಸ್ತಕ ಬುಧವಾರ ಬಿಡುಗಡೆಗೊಂಡಿದೆ.
ಮುಂಬೈನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಹಿರಿಯ ಆಟಗಾರರು, ಸಹ ಆಟಗಾರರ ಜೊತೆ ಸಚಿನ್ ಆತ್ಮಚರಿತ್ರೆಯನ್ನು ಬಿಡುಗಡೆಗೊಳಿಸಿದರು.
ಬಿಡುಗಡೆಗೂ ಮುನ್ನವೇ ಸಚಿನ್‌ರ ಆತ್ಮಚರಿತ್ರೆ ಪ್ಲೇಯಿಂಗ್ ಇಟ್ ಮೈ ವೈ ಪುಸ್ತಕ ಬಾರಿ ಸುದ್ದಿ ಮಾಡಿತ್ತು. ಸಚಿನ್‌ರ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಯಾವುದೇ ವಿವಾದಕ್ಕೆ ಗುರಿಯಾಗದೆ ಆಟವಾಡಿದ್ದ ಸಚಿನ್ ತೆಂಡೂಲ್ಕರ್, ತಮ್ಮ ಆತ್ಮಚರಿತ್ರೆಯಲ್ಲಿ ಕ್ರಿಕೆಟ್ ಜೀನವದ ಎಲ್ಲ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಪುಸ್ಕಕದಲ್ಲಿ ಕೋಚ್ ಗ್ರೇಗ್ ಚಾಪೆಲ್ ಬಗೆಗಿನ ಸಚಿನ್ ಬರಹ ಈಗಾಗಲೇ ಸುದ್ದಿಗೆ ಗ್ರಾಸವಾಗಿತ್ತು. ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಒಬ್ಬ ರಿಂಗ್ ಮಾಸ್ಟರ್‌ನಂತೆ ವರ್ತಿಸುತ್ತಿದ್ದರು. ಸರ್ವಾಧಿಕಾರಿ ಧೋರಣೆಯುಳ್ಳ ಚಾಪೆಲ್ ತಮ್ಮ ಚಿಂತನೆಗಳನ್ನು ಬಲವಂತವಾಗಿ ಇತರ ಆಟಗಾರರ ಮೇಲೆ ಹಾಕುತ್ತಿದ್ದರು. ಆಗ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್‌ಗೆ ಚಾಪೆಲ್ ಯಾವುದೇ ಗೌರವವನ್ನು ನೀಡುತ್ತಿರಲಿಲ್ಲ, ತಂಡದ ಕೋಚ್ ಆಗಿ ಗ್ರೇಗ್ ಚಾಪೆಲ್ ನಾಯಕನ ಬಗ್ಗೆ ಸ್ವಲ್ಪವೂ ಗೌರವ ತೋರದಿರುವುದು ಅಚ್ಚರಿ ಮೂಡಿಸಿತು ಎಂದು ಸಚಿನ್ ತಮ್ಮ ಆತ್ಮಕತೆಯಲ್ಲಿ ಬಹಿರಂಗಪಡಿಸಿದ್ದರು.
ಡ್ರಾವಿಡ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ, ನೀನೇ ನಾಯಕನಾಗು ಎಂದು ಚಾಪೆಲ್ ಹೇಳಿದ್ದರು. 2007ರ ವಿಶ್ವಕಪ್ ಆರಂಭವಾಗಲು ಒಂದೇ ತಿಂಗಳು ಬಾಕಿ ಇರುವಾಗ ಭಾರತ ತಂಡದ ನಾಯಕತ್ವವನ್ನು ರಾಹುಲ್ ದ್ರಾವಿಡ್‌ರಿಂದ ಕಸಿದುಕೊಳ್ಳಲು ಚಾಪೆಲ್ ನಿರ್ಧರಿಸಿರುವುದಾಗಿ ಹೇಳಿದ್ದರು ಎಂದು ಸಚಿನ್, ಚಾಪೆಲ್ ವಿರುದ್ಧ ಅಸಹನೆ ವ್ಯಕ್ತ ಪಡಿಸಿದ್ದರು.
ಅಭ್ಯಾಸದ ವೇಳೆ ಹೆಚ್ಚಾಗಿ ಮರಾಠಿಯಲ್ಲೇ ಮಾತನಾಡುತ್ತಿದ್ದೇವು: ದ್ರಾವಿಡ್
ಸಚಿನ್‌ರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಸಚಿನ್ ಓರ್ವ ಸ್ನೇಹಜೀವಿ ಎಂದರು.
ಸಚಿನ್ ಜತೆಗಿನ ಕ್ರಿಕೆಟ್ ನೆನಪು ಮೆಲುಕು ಹಾಕಿದ ದ್ರಾವಿಡ್, ಕ್ರಿಕೆಟ್ ಅಭ್ಯಾಸದ ವೇಳೆ ನಾನು ಸಚಿನ್ ಹೆಚ್ಚಾಗಿ ಮರಾಠಿ ಭಾಷೆಯಲ್ಲೇ ಹೆಚ್ಚಾಗಿ ಸಂಭಾಷಿಸುತ್ತಿದ್ದೇವು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


