ಗೋವಾ ಡ್ಯಾನ್ಸ್ ಫೆಸ್ಟ್ ನಲ್ಲಿ ಡಿಸೈನರ್ ಇಶಾ ಮಂತ್ರಿ ಸಾವು
ಗೋವಾದಲ್ಲಿ ನಡೆದ ಡ್ಯಾನ್ಸ್ ಫೆಸ್ಟ್‌ನಲ್ಲಿ ಮುಂಬೈ ಮೂಲದ ಡಿಸೈನರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಪಣಜಿ: ಗೋವಾದಲ್ಲಿ ನಡೆದ ಡ್ಯಾನ್ಸ್ ಫೆಸ್ಟ್‌ನಲ್ಲಿ ಮುಂಬೈ ಮೂಲದ ಡಿಸೈನರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಚಿತ್ರ ಮೇರಿಕೋಮ್ ಚಿತ್ರದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ 27 ವರ್ಷದ ಇಶಾ ಮಂತ್ರಿ ಸಾವನ್ನಪ್ಪಿದ್ದಾರೆ. ಹೊಸ ವರ್ಷಾಚರಣೆಯ ಹಿನಲ್ಲೆಯಲ್ಲಿ ಗೋವಾದಲ್ಲಿ ನಡೆಯುತ್ತಿರುವ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಫೆಸ್ಟ್‌ನಲ್ಲಿ ಪಾಲ್ಗೊಂಡಿದ್ದ ಇಶಾ ಮಂತ್ರಿ ಡ್ಯಾನ್ಸ್ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ನಿತ್ರಾಣರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಇಶಾ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಇನ್ನು ಇಶಾಮಂತ್ರಿ ಅವರ ಅನುಮಾನಾಸ್ಪದ ಸಾವಿನ ಹಿನ್ನಲೆಯಲ್ಲಿ ಡ್ಯಾನ್ಸ್ ಫೆಸ್ಟ್ ಮೇಲೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಪ್ರಮುಖವಾಗಿ ಫೆಸ್ಟ್‌ನಲ್ಲಿ ಡ್ರಗ್ಸ್ ಬಳಕೆಯಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಈ ಬಗ್ಗೆ ಆರೋಪ ಮಾಡುತ್ತಿದ್ದು, ಅತಿಯಾಗಿ ಡ್ರಗ್ಸ್ ಸೇವಿಸಿದ್ದರಿಂದಲೇ ಇಶಾ ಸಾವಿಗೀಡಾಗಿದ್ದಾರೆ. ಹೀಗಾಗಿ ಪ್ರಕರಣದ ಕೂಲಂಕುಷ ತನಿಖೆ ನಡೆಯಬೇಕು ಎಂದು ಒತ್ತಾಯಿಸುತ್ತಿವೆ. ಆದರೆ ಕಾರ್ಯಕ್ರಮದ ಆಯೋಜಕರು ಮಾತ್ರ ಈ ಆರೋಪವನ್ನು ನಿರಾಕರಿಸಿದ್ದು, ಕಾರ್ಯಕ್ರಮದಲ್ಲಿ ಮಾದಕದ್ರವ್ಯ ಬಳಕೆಯಾಗಿಲ್ಲ ಎಂದು ಹೇಳುತ್ತಿದ್ದಾರೆ.
ಇನ್ನು ಇಶಾ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರ ಸ್ನೇಹಿತರು ಹೇಳುವಂತೆ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಇಶಾ ಆರೋಗ್ಯ ಹದಗೆಟ್ಟಿತ್ತು. ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಆಕೆ ತುಂಬಾ ಸುಸ್ತಾಗಿದ್ದಳು ಎಂದು ಹೇಳಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಇಶಾ ಅವರ ಸ್ನೇಹಿತರ ಹೇಳಿಕೆಗಳನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಇಶಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಪೂರ್ಣಗೊಂಡಿದ್ದು, ಇನ್ನಷ್ಟೇ ವರದಿ ಬರಬೇಕಿದೆ.
ಇಶಾ ಅವರ ದಿಢೀರ್ ಸಾವಿನಿಂದಾಗಿ ಅವರ ಪೋಷಕರು ಆಘಾತಗೊಂಡಿದ್ದು, ಇಂದು ಮಧ್ಯಾಹ್ನ ಗೊವಾಗೆ ಆಗಮಿಸಿದ್ದಾರೆ. ಇಶಾ ಮಂತ್ರಿ ಅವರ ಅಕಾಲಿಕ ಮರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದು, ನಿರ್ದೇಶಕ ಮಹೇಶ್ ಭಟ್ ಮತ್ತು ಅವರ ಪುತ್ರಿ ಪೂಜಾ ಭಟ್ ಟ್ವಿಟರ್‌ನಲ್ಲಿ ತಮ್ಮ ವಿಷಾಧ ವ್ಯಕ್ತಪಡಿಸಿದ್ದಾರೆ.
ಪ್ರತೀ ವರ್ಷ ಗೋವಾದಲ್ಲಿ ಡ್ಯಾನ್ಸ್ ಫೆಸ್ಟ್‌ನಂತಹ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯವಾದರೂ, ಈ ಕಾರ್ಯಕ್ರಮಗಳಲ್ಲಿ ಮಾದಕದ್ರವ್ಯಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಆದರೆ ಆನಾರೋಗ್ಯಕ್ಕೆ ತುತ್ತಾಗಿದ್ದರೂ ಇಶಾ ಅವರು ಕಾರ್ಯಕ್ರಮದಲ್ಲೇಕೆ ಪಾಲ್ಗೊಂಡರು ಎಂಬ ಅನುಮಾನ ಕಾಡುತ್ತಿದೆ. ಇನ್ನು ಇದೇ ಗೋವಾದಲ್ಲಿ 2009ರಲ್ಲಿಯೂ ಕೂಡ ಇಂತಹುದೇ ಘಟನೆಯನ್ನು ನಡೆದಿತ್ತು. ಆಗ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಸಾವಿಗೀಡಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


