ಉಗ್ರರು ವಿಮಾನ ಹೊಡೆದುರುಳಿಸಿ, ಪೈಲಟ್‌ನನ್ನು ವಶಪಡಿಸಿಕೊಂಡಿಲ್ಲ: ಅಮೆರಿಕ

ವಾಷಿಂಗ್ನಟನ್: ಜೋರ್ಡಾನ್ ಸೇನೆಗೆ ಸೇರಿದ ವಿಮಾನವನ್ನು ಇಸಿಸ್ ಉಗ್ರರು ಹೊಡೆದುರುಳಿಸಿ ವಿಮಾನದಲ್ಲಿದ್ದ ಪೈಲೆಟ್‌ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ ಎಂದು ಅಮೆರಿಕ ಸೇನೆ ಪ್ರಕಟನೆಯಲ್ಲಿ ಹೇಳಿದೆ.
ಉತ್ತರ ಸಿರಿಯಾದ ಮೇಲೆ ಜೋರ್ಡಾನ್ ಸೇನೆಯ ವಿಮಾನ ಹಾರಾಟ ನಡೆಸುತ್ತಿದ್ದಾಗ ಇಸಿಸ್ ಉಗ್ರರು ವಿಮಾನವನ್ನು ಹೊಡೆದುರುಳಿಸಿ ಬಳಿಕ ಪೈಲಟ್‌ನನ್ನು ವಶಪಡಿಸಿಕೊಂಡಿರುವುದಾಗಿ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಪ್ರಕಟಿಸಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸಿಲ್ ಉಗ್ರರು ವಿಮಾನದ ಪೈಲಟ್‌ನನ್ನು ವಶಪಡಿಸಿಕೊಂಡಿಲ್ಲ ಎಂಬುದನ್ನು ಸಾಕ್ಷ್ಯಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅಮೆರಿಕ ಸೇನೆ ಹೇಳಿದೆ.
ಉತ್ತರ ಸಿರಿಯಾದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಇಸಿಸ್ ಉಗ್ರರು ಹೊಡೆದುರುಳಿಸಿದ್ದು ರಕ್ಕಾ ಪ್ರಾಂತ್ಯದಲ್ಲಿ ಪತನಗೊಂಡ ಬಳಿಕ ಪೈಲಟ್‌ನನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಸಿಸ್ ಉಗ್ರರು ಸ್ವಂತ ಸಾಮರ್ಥ್ಯದಿಂದಲೇ ವಿಮಾನ ಹೊಡೆದುರುಳಿಸಿರುವ ಸಾಧ್ಯತೆ ಕಡಿಮೆ ಇದ್ದು ಇದರ ಹಿಂದೆ ಮತ್ತಾವುದಾದರೂ ಕೈವಾಡ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಈ ನಡುವೆ ಒಂದೊಮ್ಮೆ ಪೈಲಟ್‌ನ ಜೀವಕ್ಕೆ ತೊಂದರೆಯಾದರೆ ಅದಕ್ಕೆ ಇಸಿಸ್ ಸಂಘಟನೆಯೇ ನೇರ ಹೊಣೆ ಎಂದು ಜೋರ್ಡಾನ್ ಸೇನೆ ಹೇಳಿದೆ. ಅಲ್ಲದೇ ವಿಮಾನ ಪತನಗೊಳಿಸಿರುವ ಈ ಉಗ್ರರು ಯುದ್ಧ ವಿಮಾನದ ಪೈಲಟ್‌ನನ್ನು ಬಂಧಿಸಿರುವ ಚಿತ್ರವನ್ನು ಐಸಿಸ್ ಉಗ್ರರು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಯತ್ನ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


