ಕೂದಲು ಉದುರುತ್ತಾ? ಹಾಗಾದ್ರೆ, ನೀವು ಬಳಸೋ ಶಾಂಪೂಗೆ ಸಕ್ಕರೆ ಬೆರೆಸಿ!
Hair Loss: ಕೂದಲು ಉದುರುವ ಸಮಸ್ಯೆಗೆ ಜನರು ಹಲವಾರು ರೀತಿಯ ರಾಸಾಯಿನಿಕಯುಕ್ತ ವಸ್ತುಗಳನ್ನ ಬಳಸಿದರೂ ಕೆಲವೊಮ್ಮೆ ಪರಿಹಾರ ಸಿಗುವುದಿಲ್ಲ. ಆದ್ರೆ, ನಿಮಗೆ ಗೊತ್ತಾ, ನಿಮ್ಮ ಅಡುಗೆ ಮನೆಯಲ್ಲೇ ಕೂದಲು ಉದುರುವಿಕೆಗೆ ಪರಿಹಾರವಿದೇ ಎಂದು! ಹೌದು, ಆ ಪರಿಹಾರವೇ ಸಕ್ಕರೆ. ಇಲ್ಲಿದೆ ಆ ಕುರಿತ ವರದಿ:

Hair Loss: ಇವತ್ತು ಪತ್ರಿಯೊಬ್ಬರಿಗೂ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಅದರಂತೆ, ಈ ಸಮಸ್ಯೆಗೆ ಜನರು ಹಲವಾರು ರೀತಿಯ ರಾಸಾಯಿನಿಕಯುಕ್ತ ವಸ್ತುಗಳನ್ನ ಬಳಸಿದರೂ ಕೆಲವೊಮ್ಮೆ ಪರಿಹಾರ ಸಿಗುವುದಿಲ್ಲ. ಜೊತೆಗೆ ತಜ್ಞರನ್ನು ಭೇಟಿ ಮಾಡಿ ಅವರು ನೀಡುವ ಔಷಧವು ಕೆಲಸ ಮಾಡುವುದಿಲ್ಲ! ಆದ್ರೆ, ನಿಮಗೆ ಗೊತ್ತಾ, ನಿಮ್ಮ ಅಡುಗೆ ಮನೆಯಲ್ಲೇ ಕೂದಲು ಉದುರುವಿಕೆಗೆ ಪರಿಹಾರವಿದೆ ಎಂದು! ಹೌದು, ಆ ಪರಿಹಾರವೇ ಸಕ್ಕರೆ. ಇಲ್ಲಿದೆ ಆ ಕುರಿತ ವರದಿ:
ಚರ್ಮರೋಗ ತಜ್ಞರ ಪ್ರಕಾರ, ಶಾಂಪೂಗೆ ಒಂದು ಚಮಚ ಸಕ್ಕರೆ ಬೆರೆಸಿ ತಲೆ ತೊಳೆದರೆ ಅದು ನಿಮ್ಮ ನೆತ್ತಿಯನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಅದರಂತೆ, ಸಕ್ಕರೆಯ ಸಣ್ಣ ಹರಳುಗಳು ಮನೆಯಲ್ಲಿಯೇ ತಯಾರಿಸಬಹುದಾದ ನೈಸರ್ಗಿಕ ಸ್ಕ್ರಬ್‌ನಂತೆ ಕೆಲಸ ಮಾಡುತ್ತವೆ. ಹಾಗಾಗಿ, ಈ ಕೆಲಸ ಮಾಡುವುದರಿಂದ ನೆತ್ತಿಯ ಮೇಲೆ ಮತ್ತು ಕೂದಲಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ.....
ಸತ್ತ ಚರ್ಮದ ಕೋಶಗಳ ನಿವಾರಣೆ: ಸಕ್ಕರೆಯ ಹರಳುಗಳು ನೆತ್ತಿಯ ಮೇಲಿರುವ ಸತ್ತ ಚರ್ಮ ಮತ್ತು ಹೊಟ್ಟನ್ನು ಸುಲಭವಾಗಿ ಉಜ್ಜುಹಾಕುತ್ತವೆ.
ಉತ್ಪನ್ನಗಳ ಉಳಿಕೆ ನಿವಾರಣೆ: ಕೂದಲಿಗೆ ಬಳಸುವ ಎಣ್ಣೆ, ಜೆಲ್ ಅಥವಾ ಕೆಮಿಕಲ್ ಸರಕುಗಳ ಜಿಡ್ಡು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
ಮೃದುವಾದ ಕೂದಲು: ಶಾಂಪೂ ಜೊತೆ ಸಕ್ಕರೆ ಕರಗಿದಾಗ ಅದು ಕೂದಲಿಗೆ ನೈಸರ್ಗಿಕ ತೇವಾಂಶವನ್ನು ನೀಡಿ, ಕೂದಲನ್ನು ಹೆಚ್ಚು ಮೃದುವಾಗಿಸುತ್ತದೆ.
ರಕ್ತ ಸಂಚಾರ ವೃದ್ಧಿ: ಸಕ್ಕರೆ ಮಿಶ್ರಿತ ಶಾಂಪೂನಿಂದ ನಿಧಾನವಾಗಿ ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿ, ಕೂದಲಿನ ಬೇರುಗಳು ಬಲಗೊಳ್ಳುತ್ತವೆ.
ಬಳಸುವ ಸರಿಯಾದ ವಿಧಾನ:
ಒಂದು ಸಣ್ಣ ಬಟ್ಟಲಿನಲ್ಲಿ ಶಾಂಪೂ ತೆಗೆದುಕೊಳ್ಳಿ.
ಅದಕ್ಕೆ ಒಂದು ಟೀಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಒದ್ದೆಯಾದ ಕೂದಲಿನ ನೆತ್ತಿಗೆ ಹಚ್ಚಿ, ಬೆರಳಿನ ತುದಿಗಳಿಂದ 2-3 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ.
ನಂತರ ಸ್ವಚ್ಛವಾದ ನೀರಿನಿಂದ ತಲೆಯನ್ನು ಚೆನ್ನಾಗಿ ತೊಳೆಯಿರಿ.
ತೊಳೆಯುವಾಗ ಸಕ್ಕರೆಯ ಹರಳುಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗಿ ಹೋಗುವುದರಿಂದ ಕೂದಲು ಜಿಗುಟಾಗುವುದಿಲ್ಲ
ನೆನಪಿನಲ್ಲಿಡಿ...
ವಾರಕ್ಕೆ ಒಂದೇ ಬಾರಿ ಬಳಸಿ: ಅತಿಯಾಗಿ ಸಕ್ಕರೆ ಸ್ಕ್ರಬ್ ಬಳಸಿದರೆ ನೆತ್ತಿ ತುಂಬಾ ಒಣಗಬಹುದು ಅಥವಾ ಕಿರಿಕಿರಿ ಉಂಟಾಗಬಹುದು. ಹಾಗಾಗಿ, ವಾರಕ್ಕೆ ಅಥವಾ 15 ದಿನಕ್ಕೊಮ್ಮೆ ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ.
ಮೃದುವಾಗಿ ಮಸಾಜ್ ಮಾಡಿ: ಸಕ್ಕರೆ ಹರಳುಗಳಿಂದ ನೆತ್ತಿಯನ್ನು ತುಂಬಾ ಜೋರಾಗಿ ಉಜ್ಜಬೇಡಿ. ಇದರಿಂದ ಚರ್ಮಕ್ಕೆ ಗಾಯವಾಗಬಹುದು.
ಯಾರಿಗೆ ಬೇಡ?
ಯಾರ ನೆತ್ತಿಯ ಚರ್ಮ ತುಂಬಾ ಸೂಕ್ಷ್ಮವಾಗಿದ್ದರೆ ಅಥವಾ ಇನ್ಫೆಕ್ಷನ್ ಇದ್ದರೆ ಇದನ್ನು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿ ಅಥವಾ ವೈದ್ಯರನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




