"ಧೂಮಪಾನದ ಅಭ್ಯಾಸವಿದ್ದರೆ ಕೋವಿಡ್-19 ಎದುರಿಸುವುದು ಮತ್ತಷ್ಟು ಕಷ್ಟ"
ತಂಬಾಕು ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿದ್ದು ಕೋವಿಡ್-19 ಎದುರಿಸುವುದು ತಂಬಾಕು ಅಭ್ಯಾಸವುಳ್ಳವರಿಗೆ ಕಷ್ಟ ಎಂದು ಡಾ. ರಾಮಚಂದ್ರ ಹೇಳಿದ್ದಾರೆ.

ಬೆಂಗಳೂರು: ತಂಬಾಕು ಶ್ವಾಸಕೋಶಕ್ಕೆ ಹಾನಿಯುಂಟುಮಾಡಬಲ್ಲ ಅಪಾಯಕಾರಿ ಪದಾರ್ಥ ಎಂದೇ ಕುಖ್ಯಾತಿ ಪಡೆದಿದ್ದು, ಇದರ ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿದ್ದು ಕೋವಿಡ್-19 ಎದುರಿಸುವುದು ತಂಬಾಕು ಅಭ್ಯಾಸವುಳ್ಳವರಿಗೆ ಕಷ್ಟ ಎಂದು ಡಾ. ರಾಮಚಂದ್ರ ಹೇಳಿದ್ದಾರೆ.
ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆನ್ಕೋಲಜಿಯ ನಿರ್ದೇಶಕರಾಗಿರುವ ಡಾ. ಸಿ ರಾಮಚಂದ್ರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹೇಳಿಕೆ ನೀಡಿದ್ದು, ಕೋವಿಡ್-19 ವೈರಾಣು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತವೆ ಹಾಗೂ ಧೂಮಪಾನದ ಅಭ್ಯಾಸವುಳ್ಳವರ ಶ್ವಾಸಕೋಶ ದುರ್ಬಲವಾಗಿದ್ದು, ಇವರಿಗೆ ಕೋವಿಡ್-19 ಎದುರುವುದು ಕಷ್ಟವಾಗಲಿದೆ ಎನ್ನುತ್ತಾರೆ.
2020 ರ ಏ.29 ರಂದು ಸಾರ್ವಜನಿಕ ಆರೋಗ್ಯ ತಜ್ಞರ ಅಧ್ಯಯನಗಳ ವಿಮರ್ಶೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದು ಧೂಮಪಾನ ಮಾಡದವರಿಗೆ ಹೋಲಿಕೆ ಮಾಡಿದಲ್ಲಿ ಧೂಮಪಾನ ಮಾಡುವವರಿಗೇ ಕೋವಿಡ್-19 ಹೆಚ್ಚು ಬಾಧಿಸುತ್ತದೆ ಎಂದು ಎಚ್ಚರಿಸಿದೆ.
ತಂಬಾಕು ಸಾಂಕ್ರಾಮಿಕವಲ್ಲದ ರೋಗಗಳಾದ ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಉಸಿರಾಟದ ಕಾಯಿಲೆ ಮತ್ತು ಮಧುಮೇಹಕ್ಕೂ ಕಾರಣವಾಗುತ್ತದೆ. ಇವೆಲ್ಲವೂ ಕೋವಿಡ್-19 ಬಂದಲ್ಲಿ ಆರೋಗ್ಯದ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದ್ದು ಸಾವಿಗೂ ಕಾರಣವಾಗಬಹುದು ಎಂದು ಡಾ.ರಾಮಚಂದ್ರ ಹೇಳಿದ್ದಾರೆ.
ಇದೇ ವೇಳೆ ತಂಬಾಕು ಕೋವಿಡ್-19 ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಆಧಾರವಿಲ್ಲದ ಉಲ್ಲೇಖಗಳಿಂದ ಮಾಧ್ಯಮಗಳು, ಸಂಶೋಧಕರು, ವಿಜ್ಞಾನಿಗಳಿಗೆ ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


