ಲೈಂಗಿಕ ಕ್ರಿಯೆಯಲ್ಲಿ ತೊಡಗಿದಷ್ಟೂ ಪುರುಷರಿಗೆ ದೈವಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚು!
ಇಲ್ಲೊಂದು ವರದಿಯ ಪ್ರಕಾರ ಸಂಭೋಗದಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೂ ಹೆಚ್ಚು ದೈವ ಭಕ್ತಿ ಇರುತ್ತಂತೆ!

Published On :
ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ, ಅಂದರೆ ಸಂಕಷ್ಟ ಬಂದಾಗ ದೈವ ಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚಾಗುತ್ತದೆ ಎನ್ನುವುದು ಸಾಮಾನ್ಯ ನುಡಿ. ಆದರೆ ಇಲ್ಲೊಂದು ವರದಿಯ ಪ್ರಕಾರ ಸಂಭೋಗದಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೂ ಹೆಚ್ಚು ದೈವ ಭಕ್ತಿ ಇರುತ್ತಂತೆ!
ಉತ್ತರ ಕೆರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯ ಸಂಶೋಧಕರ ಪ್ರಕಾರ ಲೈಂಗಿಕ ಕ್ರಿಯೆಯ ವೇಳೆ ಬಿಡುಗಡೆಯಾಗುವ ಆಕ್ಸಿಟೋಸಿನ್ ಹಾರ್ಮೋನ್ (ಲವ್ ಹಾರ್ಮೋನ್) ಕೇವಲ ಸಾಮಾಜಿಕ ಬಂಧಗಳು ಬೆಸೆಯುವಂತೆ ಮಾಡುವುದಿಲ್ಲ, ಬದಲಾಗಿ, ದೈವತ್ವದ ಭಾವನೆಯನ್ನೂ ಉತ್ತೇಜಿಸುತ್ತದೆ, ಪ್ರಮುಖವಾಗಿ ಪುರುಷರಲ್ಲಿ ಈ ರೀತಿಯಾಗುತ್ತದೆ.
ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಅಧ್ಯಾತ್ಮಕ್ಕೆ ಪ್ರೇರಣೆ ಸಿಗುತ್ತದೆ, ಆಕ್ಸಿಟೋಸಿನ್ ಹಾರ್ಮೋನ್ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ತಿದ್ದಾರೆ.
ಈ ಸಂಶೋಧನೆಗೆ ಸಂಬಂಧಪಟ್ಟ ರಾಸಾಯನಿಕ ಕ್ರಿಯೆಯನ್ನು ಕೆಲವು ಪುರುಷರ ಮೇಲೆ ಪ್ರಯೋಗಿಸಲಾಗಿದ್ದು, ಲವ್ ಹಾರ್ಮೋನ್ ಪ್ರಯೋಗಕ್ಕೆ ಒಳಪಟ್ಟ ಪುರುಷರೆಲ್ಲರೂ ಅಧ್ಯಾತ್ಮ ತಮ್ಮ ಜೀವನದ ಭಾಗ ಎಂದು ಹೇಳಿದ್ದಾರೆ. ಈ ಪೈಕಿ ಸಂಶೋಧನೆಗೆ ಒಳಪಡುವುದಕ್ಕೂ ಮುನ್ನ ಹಲವು ಅಧ್ಯಾತ್ಮವನ್ನು ತಮ್ಮ ಜೀವನದ ಭಾಗ ಎಂದು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಆದ್ದರಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಷ್ಟೂ ಪುರುಷರಿಗೆ ದೈವಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


