ಜೀವನಶೈಲಿ

ಲಿವ್-ಇನ್ ರಿಲೇಷನ್ ಶಿಪ್ ಗೆ ಭಾರತದಲ್ಲಿ ಶೇ.80ರಷ್ಟು ಜನ ಓಕೆ!

ಭಾರತದಲ್ಲಿ ಲಿವ್-ಇನ್ ರಿಲೇಷನ್ ಶಿಪ್ ನ್ನು ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಭಾರತೀಯರು ಲಿವ್-ಇನ್ ರಿಲೇಷನ್ ಶಿಪ್ ನ್ನು ನಿಧಾನವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ.

ಲಿವ್-ಇನ್ ರಿಲೇಷನ್ ಶಿಪ್ ಗೆ ಭಾರತದಲ್ಲಿ ಶೇ.80ರಷ್ಟು ಜನ ಓಕೆ!
ಲಿವ್-ಇನ್ ರಿಲೇಷನ್ ಶಿಪ್ ಗೆ ಶೇ.80 ಕ್ಕೂ ಹೆಚ್ಚು ಭಾರತೀಯರ ಬೆಂಬಲ!
Published On :
ನವದೆಹಲಿ: ಭಾರತದಲ್ಲಿ ಲಿವ್-ಇನ್ ರಿಲೇಷನ್ ಶಿಪ್ ನ್ನು ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಭಾರತೀಯರು ಲಿವ್-ಇನ್ ರಿಲೇಷನ್ ಶಿಪ್ ನ್ನು ನಿಧಾನವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ. 
ಸಮೀಕ್ಷಾ ವರದಿಯೊಂದರ ಪ್ರಕಾರ ಭಾರತದಲ್ಲಿ ಲಿವ್-ಇನ್-ರಿಲೇಷನ್ ಶಿಪ್ ನ್ನು ಶೇ.80 ರಷ್ಟು ಜನರು ಬೆಂಬಲಿಸುತ್ತಾರೆ ಎಂದು ಇನ್ಶಾರ್ಟ್ಸ್ ಎಂಬ ಸುದ್ದಿ ಆಪ್ ನಡೆಸಿದ ಪೋಲಿಂಗ್ ನಲ್ಲಿ ತಿಳಿದುಬಂದಿದೆ. 
ಮೇ ತಿಂಗಳ ಎರಡನೇ ವಾರ 1.4 ಲಕ್ಷ ನೆಟಿಜನ್ ಗಳು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಪೈಕಿ ಶೇ.80 ರಷ್ಟು ಜನರು 18-35 ವಯಸ್ಸಿನವರಾಗಿದ್ದರು.  ಸಮೀಕ್ಷೆಯ ವರದಿಯ ಪ್ರಕಾರ ಶೇ.80 ರಷ್ಟು ಜನರ ಪ್ರಕಾರ ಲಿವ್-ಇನ್-ರಿಲೇಷನ್ ನ್ನು ಭಾರತದಲ್ಲಿ ಇನ್ನೂ ಬಹಿಷ್ಕಾರ ದೃಷ್ಟಿಯಿಂದ ನೋಡುತ್ತಾರೆ. ಶೇ.47 ರಷ್ಟು ಜನ ಲಿವ್-ಇನ್ ರಿಲೇಷನ್ ಶಿಪ್ ಗಿಂತಲೂ ವಿವಾಹವೇ ಉತ್ತಮವಾದ ಆಯ್ಕೆ ಎಂಬ ಅಭಿಪ್ರಾಯ ಹೊಂದಿದ್ದಾರೆ. 
ಶೇ.80 ರಷ್ಟು ಜನರು ಲಿವ್-ಇನ್ ರಿಲೇಷನ್ ಶಿಪ್ ನ್ನು ಬೆಂಬಲಿಸುವುದಾಗಿ ಹೇಳಿದರೆ, ಶೇ.26 ರಷ್ಟು ಜನರು ವಿವಾಹಕ್ಕಿಂತಲೂ ಜೀವನ ಪರ್ಯಂತ ಲಿವ್ ಇನ್ ರಿಲೇಷನ್ ಶಿಪ್ ನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.