ಶೇ. 90 ರಷ್ಟು ವಾಟರ್ ಬಾಟಲ್ ಬ್ರಾಂಡ್ ಗಳು ಜಾಗತಿಕವಾಗಿ ಕಲುಶಿತ
ಭಾರತವೂ ಸೇರಿದಂತೆ ಬ್ರಾಂಡೆಡ್ ವಾಟರ್ ಬಾಟಲ್ ಗಳು ಜಾಗತಿಕವಾಗಿ ಶೇ.90 ರಷ್ಟು ಕಲುಶಿತಗೊಂಡಿವೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.

Published On :
ವಾಷಿಂಗ್ ಟನ್: ಭಾರತವೂ ಸೇರಿದಂತೆ ಬ್ರಾಂಡೆಡ್ ವಾಟರ್ ಬಾಟಲ್ ಗಳು ಜಾಗತಿಕವಾಗಿ ಶೇ.90 ರಷ್ಟು ಕಲುಶಿತಗೊಂಡಿವೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.
ಓರ್ಬ್ ಮೀಡಿಯಾ ವರದಿಯ ಪ್ರಕಾರ ಪಾಲಿಪ್ರೊಪಿಲೀನ್, ನೈಲಾನ್ ಮತ್ತು ಪಾಲಿಥೈಲಿನ್ ಟೆರೆಫ್ತಾಲೇಟ್ ನಿಂದ ಕೂಡಿದ ಬ್ರಾಂಡೆಡ್ ನೀರಿನ ಬಾಟಲ್ ಗಳು ಶೇ.90 ರಷ್ಟು ಕಲುಶಿತಗೊಂಡಿದ್ದು ಮನುಕುಲಕ್ಕೇ ಹಾನಿಕಾರಕವಾಗಿದೆ. ಅಮೆರಿಕ ಮೂಲದ ಎನ್ ಜಿಒ ನಡೆಸಿರುವ ಅಧ್ಯಯನ ವರದಿ ಪ್ರಕಾರ ದಿನಕ್ಕೆ ಒಂದು ಲೀಟರ್ ಬ್ರಾಂಡೆಡ್ ಬಾಟಲ್ ನೀರನ್ನು ಸೇವಿಸುವ ವ್ಯಕ್ತಿ ವರ್ಷಕ್ಕೆ ಸಾವಿರಾರು ಮೈಕ್ರೋಪ್ಲಾಸ್ಟಿಕ್ ಅಂಶಗಳನ್ನು ಸೇವಿಸುತ್ತಾನೆ.
ಶೇ.93 ರಷ್ಟು ಮಾದರಿಗಳಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದ್ದು, ಒಂದು ಬಾಟಲ್ ನಲ್ಲಿ ಪ್ಲಾಸ್ಟಿಕ್ ಅಂಶದ ಸಾಂದ್ರತೆ ಶೂನ್ಯದಿಂದ 10,000 ದವರೆಗೂ ಕಂಡುಬಂದಿದೆ. ಪ್ರತಿ ಲೀಟರ್ ನಲ್ಲಿ ಸರಾಸರಿ 10.4 ಪ್ಲಾಸ್ಟಿಕ್ ಪಾರ್ಟಿಕಲ್ (ಮೈಕ್ರೋ ಪ್ಲಾಸ್ಟಿಕ್) ಗಳು ಕಂಡುಬಂದಿದ್ದು ಒಟ್ಟಾರೆ ಶೇ.90 ರಷ್ಟು ಕಲುಶಿತಗೊಂಡಿದೆ ಎಂದು ವರದಿ ಎಚ್ಚರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


