ಜೀವನಶೈಲಿ

ಮೇಕಪ್ ಗೆ ಗುಡ್ ಬೈ ಹೇಳಿ, ಸ್ವಾಭಾವಿಕ ಸೌಂದರ್ಯ ಬೇಕಿದ್ದರೆ ಹೀಗೆ ಮಾಡಿ...

ಯಾರಿಗೆ ತಾನೆ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇರುವುದಿಲ್ಲ ಹೇಳಿ? ಸೌಂದರ್ಯ ಹೆಚ್ಚಿಸಿಕೊಳ್ಳಲು ಬಹಳ ಮಂದಿ ಸೌಂದರ್ಯವರ್ಧಕ, ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಆದರೆ....

ಮೇಕಪ್ ಗೆ ಗುಡ್ ಬೈ ಹೇಳಿ, ಸ್ವಾಭಾವಿಕ ಸೌಂದರ್ಯ ಬೇಕಿದ್ದರೆ ಹೀಗೆ ಮಾಡಿ...
ಮೇಕಪ್ ಗೆ ಗುಡ್ ಬೈ ಹೇಳಿ, ಸ್ವಾಭಾವಿಕ ಸೌಂದರ್ಯ ಬೇಕಿದ್ದರೆ ಹೀಗೆ ಮಾಡಿ...
Published On :
ಯಾರಿಗೆ ತಾನೆ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇರುವುದಿಲ್ಲ ಹೇಳಿ?  ಸೌಂದರ್ಯ ಹೆಚ್ಚಿಸಿಕೊಳ್ಳಲು ಬಹಳ ಮಂದಿ  ಸೌಂದರ್ಯವರ್ಧಕ, ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಆದರೆ ಅದಕ್ಕಿಂತಲೂ ಅಗ್ಗದ, ಪರಿಣಾಮಕಾರಿ ವಿಧಾನವೊಂದು ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. 
ಸೌಂದರ್ಯವರ್ಧಕಗಳಿಂದ ಕೃತಕ ಸೌಂದರ್ಯವನ್ನಷ್ಟೇ ಪಡೆಯಲು ಸಾಧ್ಯವಿದೆ. ಆದರೆ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಸ್ವಾಭಾವಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಅಷ್ಟೇ ಅಲ್ಲದೇ ಚರ್ಮ ಸುಕ್ಕುಗಟ್ಟುವಿಕೆಯನ್ನೂ ತಡೆಗಟ್ಟಬಹುದಾಗಿದೆ. 
ನಿಯಮಿತವಾಗಿ ಯೋಗ, ಪ್ರಾಣಾಯಾಮ ಮಾಡುವುದು, ಧ್ಯಾನ ಮಾಡುವುದರಿಂದ ಸ್ವಾಭಾವಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು, ಚರ್ಮ ಸುಕ್ಕುಗಟ್ಟುವಿಕೆಯನ್ನೂ ತಡೆಗಟ್ಟಬಹುದಾಗಿದೆ. ದಿನ ನಿತ್ಯ ಯೋಗ ಮಾಡುವುದರಿಂದ ತಾರುಣ್ಯಪೂರ್ಣ ತ್ವಚೆಯನ್ನು ಪಡೆಯಬಹುದಾಗಿದೆ ಎಂದು ಸೌಂದರ್ಯ ತಜ್ಞ ಹುಸೇನ್ ಹೇಳಿದ್ದಾರೆ. 
ಉತ್ತಮ ಆರೋಗ್ಯ ಹಾಗೂ ಸೌಂದರ್ಯ ಎರಡೂ ಒಂದೇ ಮುಖದ ಎರಡು ನಾಣ್ಯಗಳು, ಉತ್ತಮ ಆರೋಗ್ಯ ಕಾಪಾಡಿಕೊಳ್ಳದೇ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ  ಸ್ವಾಭಾವಿಕ ಸೌಂದರ್ಯ ಬೇಕಿದ್ದರೆ ಯೋಗ ಮಾಡುವುದು ಸೂಕ್ತ ಎನ್ನುತ್ತಾರೆ ಸೌಂದರ್ಯ ತಜ್ಞರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.