ಆಹಾರ ಜಾಹೀರಾತುಗಳಿಂದ ಅನಾರೋಗ್ಯಕರ ತಿನಿಸು ತಿನ್ನುವ ಬಯಕೆ ಹೆಚ್ಚಳ!
ಆಹಾರ ಜಾಹೀರಾತುಗಳಿಂದ ಅನಾರೋಗ್ಯಕರ ತಿನಿಸು ತಿನ್ನುವ ಬಯಕೆಯೂ ಹೆಚ್ಚುತ್ತದೆ ಎಂಬುದನ್ನು ಮಾರ್ಕೆಟ್ ಸಂಶೋಧಕರು ದೃಢಪಡಿಸಿದ್ದಾರೆ.

ವಾಷಿಂಗ್ ಟನ್ : ಆಹಾರ ಜಾಹೀರಾತುಗಳು ಹೇಗೆ ಅನಾರೋಗ್ಯಕರ ತಿನಿಸು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತವೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.
ಪೂರ್ವರಾಷ್ಟ್ರಗಳಲ್ಲಿನ ಜನರ ಆಲೋಚನಾ ಕ್ರಮಗಳು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇಂತಹ ರಾಷ್ಟ್ರಗಳಲ್ಲಿ ಆಹಾರ ಜಾಹೀರಾತುಗಳಿಂದ ಅನಾರೋಗ್ಯಕರ ತಿನಿಸು ತಿನ್ನುವ ಬಯಕೆಯೂ ಹೆಚ್ಚುತ್ತದೆ ಎಂಬುದನ್ನು ಮಾರ್ಕೆಟ್ ಸಂಶೋಧಕರು ದೃಢಪಡಿಸಿದ್ದಾರೆ.
ಪ್ರಪಂಚದ ಪ್ರತಿಯೊಂದರಲ್ಲಿಯೂ ಒಂದಕ್ಕೊಂದು ಪರಸ್ಪರ ಸಂಬಂಧ ಇದೆ ಎಂಬ ನಂಬಿಕೆ ತಿಂಡಿ ಪೋತರಲ್ಲಿ ಹೆಚ್ಚಾಗಿರುತ್ತದೆ .ಅಂತಹವರು ಪರಿಸ್ಥಿತಿಯ ಸನ್ನಿವೇಶವನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಉತಾಹ್ ವ್ಯಾಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಸ್ಟಿನ್ ಹಾರ್ಡಿಂಗ್ ಹೇಳಿದ್ದಾರೆ.
ಪಪ್ ಕಾರ್ನ್ ತುಂಬಿರುವ ಬ್ಯಾಗ್ ಹಿಡಿದು ಸಿನಿಮಾ ವೀಕ್ಷಿಸುತ್ತಿರುವ ಜಾಹಿರಾತು ನೋಡಿದ್ದಾಗ ನಾವೂ ಕೂಡಾ ಹಾಗೆಯೇ ಸಿನಿಮಾ ನೋಡುತ್ತಾ ಎಂಜಯ್ ಮಾಡಬೇಕು ಅನ್ನಿಸುತ್ತದೆ. ಪಪ್ ಕಾರ್ನ್ ತಿನ್ನುವ ಬಯಕೆಯೂ ಹೆಚ್ಚುತ್ತದೆ. ಇಂತಹ ಇನ್ನೂ ಹಲವು ಜಾಹಿರಾತುಗಳ ಬಗ್ಗೆ ಹಾರ್ಡಿಂಗ್ ತಂಡ ಪರೀಕ್ಷೆ ನಡೆಸಿದ್ದು, ಅನಾರೋಗ್ಯಕರ ತಿನಿಸು ತಿನ್ನುವ ಬಯಕೆ ಹೆಚ್ಚಳವಾಗಿರುವುದು ದೃಢಪಟ್ಟಿದೆ.
ಈ ಬಗ್ಗೆ ಒಂದು ಅಧ್ಯಯನದಲ್ಲಿ ಚಿತ್ರಮಂದಿರದಲ್ಲಿ ಚಾಕ್ ಲೇಟ್ ಬಾರ್ ಹಾಗೂ ಸ್ವಲ್ಪ ಮಂಕಾದ ಚಾಕಲೇಟ್ ಪಟ್ಟಿಯನ್ನಿಟ್ಟು ಪರೀಕ್ಷೆ ನಡೆಸಿದ್ದಾಗ , ಚಾಕ್ ಲೇಟ್ ಬಾರ್ ತಿನ್ನಬೇಕು ಎನ್ನುವರ ಸಂಖ್ಯೆ ಹೆಚ್ಚಾಗಿತ್ತು, ಆದರೆ, ಸ್ವಲ್ಪ ಮಂಕಾದ ಚಾಕ್ ಲೇಟ್ ತೋರಿಸಿದಾಗ ಯಾವುದೇ ಪ್ರತಿಕ್ರಿಯೆ ಕಂಡುಬರಲಿಲ್ಲ.
ಚೆನ್ನಾಗಿರುವ ಪಿಚ್ಚಾ,ಕೆಟ್ಟದಾಗಿರುವ ಪಿಜ್ಜಾ ಆಯ್ಕೆಯನ್ನು ಇಟ್ಟು ಸಂಶೋಧಕರು ಮತ್ತೊಂದು ಪರೀಕ್ಷೆ ಮಾಡಲಾಗಿದ್ದು, ತಿಂಡಿ ಪೋರರು ಯಾವುದರ ದರ ಕಡಿಮೆ ಇದೆಯೋ ಅದನ್ನು ಖರೀದಿಸಿ ತಿಂದಿದ್ದಾರೆ. ಇವುಗಳನ್ನು ಪರೀಕ್ಷೆ ನಡೆಸಿದಾಗ ಅನಾರೋಗ್ಯಕರವಾಗಿದ್ದ ತಿನಿಸನ್ನೇ ಖರೀದಿಸಿ ಗ್ರಾಹಕರು ತಿಂದಿರುವುದು ಕಂಡುಬಂದಿದೆ.
ಜಾಹೀರಾತುಗಳು ಜನರ ಆರೋಗ್ಯಕರ ಆಹಾರದ ಕ್ರಮವನ್ನೆ ಕೆಡಿಸುತ್ತಿದ್ದು, ಗ್ರಾಹಕರು ತಾವು ತಿನ್ನುವ ಆಹಾರ ಹಾಗೂ ಖರೀದಿಸುವ ತಿನ್ನಿಸಿಗಳ ಬಗ್ಗೆ ಜಾಗ್ರತೆ ವಹಿಸಬೇಕು ಹಾರ್ಡಿಂಗ್ ಸಲಹೆ ನೀಡಿದ್ದಾರೆ.
ತಿಂಡಿ ಪೋತರು ಟಿವಿ ಅಥವಾ ಮ್ಯಾಗಜಿನ್ ನಲ್ಲಿ ಬರುವ ಜಾಹಿರಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


