ಎಚ್ಚರ! ಬೆಳಿಗ್ಗೆ ಉಪಹಾರ ಸೇವಿಸದಿದ್ದರೆ ಬೊಜ್ಜು ಹೆಚ್ಚಾಗುತ್ತದೆ
ನೀವು ಬೆಳಗಿನ ಉಪಹಾರ ಸೇವಿಸದೇ ಇರುವ ಅಭ್ಯಾಸ ಹೊಂದಿದ್ದರೆ, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಬೊಜ್ಜು ಖಂಡಿತಾ ಹೆಚ್ಚಾಗುತ್ತದೆ.

Published On :
ನ್ಯೂಯಾರ್ಕ್: ನೀವು ಬೆಳಗಿನ ಉಪಹಾರ ಸೇವಿಸದೇ ಇರುವ ಅಭ್ಯಾಸ ಹೊಂದಿದ್ದರೆ, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಬೊಜ್ಜು ಖಂಡಿತಾ ಹೆಚ್ಚಾಗುತ್ತದೆ.
ಹೌದು, ಬೆಳಗಿನ ಉಪಹಾರ ಸೇವಿಸದೇ ಇದ್ದಲ್ಲಿ ಬೊಜ್ಜು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಅಮೆರಿಕದ ಮೇಯೊ ಕ್ಲಿನಿಕ್ ನ ಸಂಶೋಧಕರು. ಬೆಳಗಿನ ಉಪಹಾರ ಸೇವಿಸದೇ ಇರುವವರನ್ನು ಉಪಹಾರ ಸೇವಿಸುವವರೊಂದಿಗೆ ಹೋಲಿಕೆ ಮಾಡಲಾಗಿದ್ದು, ಉಪಹಾರ ಸೇವನೆ ಮಾಡದೇ ಇದ್ದ ಶೇ.26.7 ರಷ್ಟು ಜನರಲ್ಲಿ ಬೊಜ್ಜು ಹೆಚ್ಚಾಗಿರುವುದು ಅಧ್ಯಯನ ವರದಿ ವೇಳೆ ಬೆಳಕಿಗೆ ಬಂದಿದೆ.
ಉಪಹಾರವನ್ನು ನಿಯಮಿತವಾಗಿ ಸೇವಿಸದೇ ಇರುವುದು ಸ್ಥೂಲಕಾಯತೆ ಮತ್ತು ತೂಕ ಹೆಚ್ಚಳವಾಗುವುದಕ್ಕೆ ನೇರ ಪರಿಣಾಮ ಹೊಂದಿರುತ್ತದೆ ಎಂದು ಮೇಯೊ ಕ್ಲಿನಿಕ್ ನ ಸಂಶೋಧಕರಾದ ಕೆವಿನ್ ಸ್ಮಿತ್ ಹೇಳಿದ್ದಾರೆ. ಇನ್ನು ಉಪಹಾರ ಸೇವಿಸದೆಯೇ ಇರುವವರಲ್ಲಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಅತಿ ಹೆಚ್ಚಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಬೊಜ್ಜು ಹೆಚ್ಚಾಗಿರುವುದು ಕಂಡುಬಂದಿದೆ.
2005 ರಿಂದ 2017 ರ ವರೆಗೆ 18-87 ವಯಸ್ಸಿನ ಸುಮಾರು 347 ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ನಿಯಮಿತವಾಗಿ ತೂಕ, ಸೊಂಟ ಮತ್ತು ಸೊಂಟದ ಸುತ್ತಳತೆಯನ್ನು ಪರೀಕ್ಷಿಸಲಾಗುತ್ತಿತ್ತು. ಉಪಹಾರ ಸೇವಿಸದೇ ಇದ್ದವರ ಸೊಂಟದ ಸುತ್ತಳತೆ ಉಪಹಾರ ಸೇವಿಸುವವರ ಸೊಂಟದ ಸುತ್ತಳತೆಗಿಂತ ಸರಾಸರಿ ಶೇ.9.8 ಸೆಂಟಿಮೀಟರ್ ಹೆಚ್ಚಿತ್ತು, ಆದ್ದರಿಂದ ಬೊಜ್ಜು, ಸ್ಥೂಲ ಕಾಯದ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಬೆಳಿಗ್ಗೆ ಉಪಹಾರ ಸೇವಿಸುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


