ಭಾರತೀಯರಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಕಡಿಮೆ: ಅಧ್ಯಯನ
ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ....

Published On :
ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದು ದಿನಕ್ಕೆ 400 ಮಿಲಿ ಗ್ರಾಂಗಿಂತ ಕಡಿಮೆಯಾಗಿರುತ್ತದೆ. ಇದರಿಂದ ಮೂಳೆ ಮುರಿತ, ಆಸ್ಟಿಯೊಪೊರೋಸಿಸ್ ನಂತಹ ಅಪಾಯಗಳು ಅಧಿಕ ಎಂದು ಜಾಗತಿಕ ಕ್ಯಾಲ್ಸಿಯಂ ಸೂಚಕ ಹೇಳುತ್ತದೆ.
ದಕ್ಷಿಣ ಅಮೆರಿಕಾ, ಉತ್ತರ ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಕೂಡ ಕ್ಯಾಲ್ಸಿಯಂನ್ನು ದಿನಕ್ಕೆ 400ರಿಂದ 500 ಮತ್ತು 500ರಿಂದ 600 ಗ್ರಾಂಗಳಷ್ಟು ಸೇವಿಸುತ್ತಾರೆ.
ಉತ್ತರ ಅಮೆರಿಕಾ ಮತ್ತು ಯುರೋಪ್ ಹೊರಗೆ ಮುಖ್ಯವಾಗಿ ಉತ್ತರ ಯುರೋಪ್ ನಲ್ಲಿ ಕ್ಯಾಲ್ಸಿ.ಯಂ ಸೇವಿಸುವವರ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎತನ್ ಬಾಲ್ಕ್.
ಆಸ್ಟಿಯೊಪೊರೋಸಿಸ್ ಇಂಟರ್ ನ್ಯಾಷನಲ್ ಪತ್ರಿಕೆಯಲ್ಲಿ ಈ ಸಂಶೋಧನೆ ಪ್ರಕಟಗೊಂಡಿದೆ. ಸುಮಾರು 74 ದೇಶಗಳ ವಯಸ್ಕರನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ದಿನಕ್ಕೆ 400 ಗ್ರಾಂಗಳಿಗಿಂತಲೂ ಕಡಿಮೆ ಕ್ಯಾಲ್ಸಿಯಂ ಸೇವಿಸುತ್ತಾರೆ. ಉತ್ತರ ಯುರೋಪ್ ರಾಷ್ಟ್ರಗಳಲ್ಲಿ ಮಾತ್ರ ಜನರು ದಿನಕ್ಕೆ 1,000 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಸೇವಿಸುತ್ತಾರೆ ಎಂದು ತಿಳಿದುಬಂದಿದೆ.
ಜನರಲ್ಲಿ ಕ್ಯಾಲ್ಸಿಯಂ ಸೇವನೆಯ ಪ್ರಮಾಣ ಸೇವನೆ ಹೆಚ್ಚಳಕ್ಕೆ ಈ ಅಧ್ಯಯನ ಪ್ರೇರಣೆ ನೀಡಲಿದೆ ಎಂದು ಸಂಶೋಧಕ ಬಲ್ಕ್ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


