ಜೀವನಶೈಲಿ

ಮಹಿಳೆಯರಲ್ಲಿನ ಘ್ರಾಣ ಶಕ್ತಿ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಲಿದೆ!

ಮಹಿಳೆಯರಲ್ಲಿರುವ ವಾಸನೆಯ ಗ್ರಹಿಕೆ ಸಾಮರ್ಥ್ಯ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂಬ ಅಂಶ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ.

ಮಹಿಳೆಯರಲ್ಲಿನ  ಘ್ರಾಣ ಶಕ್ತಿ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಲಿದೆ!
ಮಹಿಳೆಯರಲ್ಲಿನ ವಾಸನೆ ಗ್ರಹಿಕೆ ಸಾಮರ್ಥ್ಯ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಲಿದೆ!
Published On :
ನ್ಯೂಯಾರ್ಕ್: ಮಹಿಳೆಯರಲ್ಲಿರುವ ವಾಸನೆಯ ಗ್ರಹಿಕೆ ಸಾಮರ್ಥ್ಯ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂಬ ಅಂಶ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. 
ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಘ್ರಾಣ ಸಂಬಂಧಿ ಸಾಮರ್ಥ್ಯದಲ್ಲಿ ಕುಸಿತ ಉಂಟಾಗುತ್ತಿದ್ದು, ವಯಸ್ಸಾದ ಮಹಿಳೆಯರಿಗೆ ಅವರ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಸಾಮಾಜಿಕ ಸಂಪರ್ಕ ಕಡಿಮೆಯಾಗುವಂತೆ ಮಾಡುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. 
ವಯಸ್ಸಾಗುತ್ತಿರುವವರಲ್ಲಿ ವಾಸನೆ ಗ್ರಹಿಕೆಯ ಸಾಮರ್ಥ್ಯ ಆರೋಗ್ಯದ ಪ್ರಮುಖ ಭಾಗವಾಗಿದೆ ಎಂದು ಅಮೆರಿಕಾದ ನರವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದು, ದೀರ್ಘಾವಧಿಯಲ್ಲಿ ಇದು ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಶೋಧನೆಗಾಗಿ 57-85 ವರ್ಷದವರೆಗಿನ ಸುಮಾರು 3,005 ಜನರನ್ನು ಸಮೀಕ್ಷೆಗೊಳಪಡಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.