ಜೀವನಶೈಲಿ

ಬೇಸಿಗೆಯ ಮೊಡವೆಗಳಿಂದ ರಕ್ಷಿಸಿಕೊಳ್ಳಲು ಕೆಲವೊಂದು ಪರಿಹಾರಗಳು

ಇದೀಗ ಬಿರುಬಿಸಿಲಿನ ಸಮಯ. ಚರ್ಮದ ರಕ್ಷಣೆ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕಾದ...

ಬೇಸಿಗೆಯ ಮೊಡವೆಗಳಿಂದ ರಕ್ಷಿಸಿಕೊಳ್ಳಲು ಕೆಲವೊಂದು ಪರಿಹಾರಗಳು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಇದೀಗ ಬಿರುಬಿಸಿಲಿನ ಸಮಯ. ಚರ್ಮದ ರಕ್ಷಣೆ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕಾದ ಅವಶ್ಯಕತೆಯಿದೆ. ಬಿಸಿಲಿಗೆ ಹೋದರೆ ಚರ್ಮ ಕಪ್ಪಗಾಗುತ್ತದೆ. ಅದರೊಟ್ಟಿಗೆ ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಬಿಸಿಲಿನಲ್ಲಿ ಚರ್ಮದ ಕಾಂತಿಯನ್ನು ಕಾಪಾಡಲು, ಮೊಡವೆಗಳನ್ನು ತಡೆಯಲು ದೆಹಲಿಯ ಚರ್ಮರೋಗ ತಜ್ಞ ಡಾ. ಅಲಿಯಾ ರಿಜ್ವಿ ಕೆಲವು ಸಲಹೆಗಳನ್ನು ನೀಡುತ್ತಾರೆ.

  • ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮೇಕಪ್ ಗಳನ್ನು ಸರಿಯಾಗಿ ತೆಗೆಯಿರಿ. ಮುಖ ತೊಳೆಯಲು ಸ್ಯಾಲಿಸಿಲಿಕ್ ಬಳಸಿ.
  • ದಿನವಿಡೀ ಹೊರಗಿದ್ದರೆ ಮನೆಗೆ ಬಂದ ನಂತರ ಮುಖ ತೊಳೆಯಿರಿ.
  • ಮುಖವನ್ನು ಉಜ್ಜಬೇಡಿ. ಹೆಚ್ಚು ಮುಖ ತೊಳೆಯುವುದು ಮತ್ತು ಉಜ್ಜುವುದರಿಂದ ಚರ್ಮಕ್ಕೆ ತೊಂದರೆಯಾಗಬಹುದು.
  • ಪದೇ ಪದೇ ಮುಖ ಮುಟ್ಟುತ್ತಿರಬೇಡಿ. ಅಥವಾ ಹೊರಗಿನ ಬೆಳಕು, ಗಾಳಿಗೆ ಹೆಚ್ಚು ಹೊತ್ತು ಮುಖವೊಡ್ಡಬೇಡಿ, ಬ್ಯಾಕ್ಟೀರಿಯಾಗಳಿಂದ ಸೋಂಕು ತಗುಲುವ ಸಾಧ್ಯತೆಯಿದೆ.
  • ಬ್ರಾಂಡೆಡ್ ಮೇಕಪ್ ಗಳನ್ನೇ ಬಳಸಿ,
  • ಸೂರ್ಯನ ಪ್ರಕರತೆಯನ್ನು ಆದಷ್ಟು ತಡೆಯಿರಿ.
  • ವಾರಕ್ಕೊಮ್ಮೆ ಮೊಡವೆಗಳನ್ನು ನಿವಾರಿಸುವ ಮುಖವಾಡಗಳನ್ನು ಧರಿಸಿ.
  • ಹಾರ್ಮೋನ್ ಗಳ ಏರುಪೇರಿನಿಂದ ಮೊಡವೆಗಳು ಉಂಟಾಗುತ್ತವೆ. ಚರ್ಮರೋಗ ತಜ್ಞರು ಹಾರ್ಮೋನ್ ಗಳ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಬಹುದು.
  • ತಲೆಯ ಹಿಂಬದಿ ಮತ್ತು ಹಣೆಯ ಮೇಲೆ ತಲೆಹೊಟ್ಟು ಬರುವುದು ಕೂಡ ಒಂದು ಚರ್ಮರೋಗವೇ. ನಿಮ್ಮ ಚರ್ಮರೋಗ ತಜ್ಞರು ಸೂಚಿಸುವ ತಲೆಹೊಟ್ಟು ತಡೆಗಟ್ಟುವ  ಶಾಂಪೂಗಳನ್ನು ಬಳಸಿ.
  • ನಿಮ್ಮ ದೇಹದಲ್ಲಿ ಚರ್ಮರೋಗ, ಹುಣ್ಣು ಸಮಸ್ಯೆಗಳಿದ್ದರೆ ಬಿಗಿಯಾದ ಉಡುಪುಗಳನ್ನು ಧರಿಸುವುದನ್ನು ಆದಷ್ಟು ಕಡಿಮೆ ಮಾಡಿ. ಬೇಸಿಗೆಯಲ್ಲಿ ಸಾಧ್ಯವಾದಷ್ಟು ತೆಳುವಾದ, ಹತ್ತಿಯ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.