ಜೀವನಶೈಲಿ

ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರು: ಸ್ಟ್ಯಾಂಡ್ ಫೋರ್ಡ್ ಅಧ್ಯಯನ ವರದಿ

ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು, ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರೂ ಸ್ಥಾನ ಪಡೆದಿದ್ದಾರೆ.

ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರು: ಸ್ಟ್ಯಾಂಡ್ ಫೋರ್ಡ್ ಅಧ್ಯಯನ ವರದಿ
ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರು: ಸ್ಟ್ಯಾಂಡ್ ಫೋರ್ಡ್ ಅಧ್ಯಯನ ವರದಿ
Published On :
ನವದೆಹಲಿ: ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು, ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರೂ ಸ್ಥಾನ ಪಡೆದಿದ್ದಾರೆ. 49 ರಾಷ್ಟ್ರಗಳ ಅಧ್ಯಯನದಲ್ಲಿ ಭಾರತ 39 ನೇ ಸ್ಥಾನ ಪಡೆದಿದ್ದು, ಭಾರತೀಯರು ಪ್ರತಿದಿನ ಸರಾಸರಿ 4,297 ಹೆಜ್ಜೆ ಇಡುತ್ತಾರೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 
ವಿಶ್ವದ ಅತ್ಯಂತ ಸೋಮಾರಿ ರಾಷ್ಟ್ರ ಇಂಡೋನೇಷ್ಯಾ ಆಗಿದ್ದು, ಕನಿಷ್ಠ ಸೋಮಾರಿತನವಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. ವಿಶೇಷವಾಗಿ ಹಾಂಕ್ ಕಾಂಗ್ ನಲ್ಲಿರುವವರು ಹೆಚ್ಚು ಕ್ರಿಯಾಶೀಲರು ಎಂದು ಅಧ್ಯಯನ ವರದಿ ತಿಳಿಸಿದೆ. ಅಧ್ಯಯನ ವರದಿಗಾಗಿ ಸ್ಮಾರ್ಟ್ ಫೋನ್ ಆಕ್ಟಿವಿಟಿ ಮೂಲಕ ವಿಶ್ವದ 46 ರಾಷ್ಟ್ರಗಳಲ್ಲಿ 700,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು,  ಪ್ರತಿದಿನ ಸರಾಸರಿ 3,513 ಹೆಜ್ಜೆ ಇಡುವ ಇಂಡೋನೇಷ್ಯಾದಲ್ಲಿರುವವರು ಹೆಚ್ಚು ಸೋಮಾರಿಗಳೆಂದು ಅಧ್ಯಯನ ವರದಿ ತಿಳಿಸಿದೆ. 
ಹಾಂಕ್ ಕಾಂಗ್, ಚೀನಾ, ಉಕ್ರೇನ್, ಜಪಾನ್ ನಲ್ಲಿರುವ ಜನರು ಹೆಚ್ಚು ನಡೆಯುತ್ತಾರೆ, ಮಲೇಷ್ಯಾ, ಸೌದಿ ಅರೇಬಿಯಾ ಹಾಗೂ ಇಂಡೋನೇಷ್ಯಾ ಕಡಿಮೆ ನಡೆಯುತ್ತಾರೆ ಎಂದು ಸಮೀಕ್ಷೆ ಮೂಲಕ ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.