ಸೆಕ್ಸ್, ಆಲ್ಕೋಹಾಲ್ ಗಿಂತ ಜನರಿಗೆ ವೈ-ಫೈ ಗಾಗಿ ಹೆಚ್ಚು ತುಡಿತ: ಅಧ್ಯಯನ
ಪ್ರತಿ 10 ರಲ್ಲಿ ನಾಲ್ಕು ಮಂದಿಗೆ ದೈನಂದಿನ ಅವಶ್ಯಕತೆಗಳ ಜೊತೆಗೆ ವೈ-ಫೈ ಕೂಡ ಒಂದು ಅತ್ಯಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ.

ಲಂಡನ್: ಪ್ರತಿ 10 ರಲ್ಲಿ ನಾಲ್ಕು ಮಂದಿಗೆ ದೈನಂದಿನ ಅವಶ್ಯಕತೆಗಳಲ್ಲಿ ವೈ-ಫೈ ಕೂಡ ಒಂದಾಗಿ ಬಿಟ್ಟಿದೆ.
ಮಾನವರಿಗೆ ಅವಶ್ಯಕತೆಯಿರುವ ಐಷಾರಾಮಿ ಅವಶ್ಯಕತೆಗಳಾದ ಸೆಕ್ಸ್, ಚಾಕೋಲೇಟ್, ಆಲ್ಕೋಹಾಲ್ ಗಿಂತ ಈಗ ವೈ-ಫೈ ಅನ್ನು ಹೆಚ್ಚಾಗಿ ಬಯಸುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಯುರೋಪ್ ಮತ್ತು ಅಮೆರಿಕಾಗಳಲ್ಲಿ ಸುಮಾರು 1700 ಮಂದಿ ನೌಕರರಿಗೆ ನಡೆಸಿದ ಅಧ್ಯಯನದಲ್ಲಿ, ದೈನಂದಿನ ಜೀವನದ ಮಾನವನ ಅವಶ್ಯಕತೆಗಳಿಗಿಂತ ವೈಫೈ ಸಂಪರ್ಕ ಉತ್ತಮಗೊಳಿಸಬೇಕು ಎಂಬುದು ಅವರ ಬಯಕೆಯಾಗಿದೆ.
ಶೇ.40.2 ರಷ್ಟು ಮಂದಿಗೆ ವೈ-ಫೈ, ಶೇ.36.6 ರಷ್ಟು ಮಂದಿಗೆ ಸೆಕ್ಸ್, ಶೇ, 14.3 ರಶ್ಟು ಮಂದಿಗೆ ಚಾಕೋಲೇಟ್ ಹಾಗೂ ಆಲ್ಕೋಹಾಲ್ ಬೇಕೆಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಇತರ ಎಲ್ಲಾ ಅಗತ್ಯಗಳಿಗಿಂತ ವೈ-ಫೈ ಸಂಪರ್ಕಕ್ಕೆ ಜನ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
ನಮ್ಮ ದೈನಂದಿನ ಅವಶ್ಯಕತೆಗಳಲ್ಲಿ ವೈ-ಫೈ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


