ATM ನಿಂದ ಹಣ ವಿತ್ ಡ್ರಾ ಮಾಡಲು ನೆರವು ಕೋರಿದ ಮಹಿಳೆ: ನಗದು ದೋಚಿ ಕಳ್ಳಿ ಪರಾರಿ!
ಸಂತ್ರಸ್ತೆ ದಾಸನಪುರದ ಸಂಜೀವಿನಿ ಲೇಔಟ್‌ನಲ್ಲಿರುವ ಖಾಸಗಿ ಬ್ಯಾಂಕಿನ ಎಟಿಎಂಗೆ 10,000 ರೂ. ನಗದು ಪಡೆಯಲು ಭೇಟಿ ನೀಡಿದ್ದಾಗ ಅಪರಿಚಿತ ಮಹಿಳೆಯಿಂದ ಸಹಾಯ ಕೇಳಿರುವುದಾಗಿ ಲಲಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ATM ನಿಂದ ಹಣ ವಿತ್ ಡ್ರಾ ಮಾಡಲು ಅಪರಿಚಿತನಿಂದ ನೆರವು ಕೋರಿದ 47 ವರ್ಷದ ಮಹಿಳೆ ಭಾರಿ ಬೆಲೆ ತೆತ್ತಿದ್ದಾರೆ. ಸಂತ್ರಸ್ತೆಗೆ ಸಹಾಯ ಮಾಡಿದ ನಂತರ ಆರೋಪಿ ಮಹಿಳೆಯ ಆಕೆಯನ್ನು ಹಿಂಬಾಲಿಸಿ ನಗದು ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ದಾಸನಪುರ ಬಳಿಯ ಲಕ್ಷ್ಮಿಪುರ ನಿವಾಸಿ ಲಲಿತಾ ಶುಕ್ರವಾರ ದೂರು ದಾಖಲಿಸಿದ್ದಾರೆ.
ಗುರುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ದಾಸನಪುರದ ಸಂಜೀವಿನಿ ಲೇಔಟ್‌ನಲ್ಲಿರುವ ಖಾಸಗಿ ಬ್ಯಾಂಕಿನ ಎಟಿಎಂಗೆ 10,000 ರೂ. ನಗದು ಪಡೆಯಲು ಭೇಟಿ ನೀಡಿದ್ದಾಗ ಅಪರಿಚಿತ ಮಹಿಳೆಯಿಂದ ಸಹಾಯ ಕೇಳಿರುವುದಾಗಿ ಲಲಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಎಟಿಎಂನಿಂದ 10,000 ರೂ. ಹಣ ಪಡೆದ ನಂತರ ಕಾರ್ಡ್ ಮತ್ತು ಹಣವನ್ನು ಅವರಿಗೆ ನೀಡಿದ್ದಾರೆ. ಲಲಿತಾ ದಿನಸಿ ವಸ್ತುಗಳನ್ನು ಖರೀದಿಸಿದ ನಂತರ ಆಟೋರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಟ್ರಾಫಿಕ್ ನಿಂದಾಗಿ ದೊಡ್ಡಬೈರನಹಳ್ಳಿಯಲ್ಲಿ ಇಳಿದು ತನ್ನ ಮನೆಯ ಕಡೆಗೆ ನಡೆದು ಹೋಗುತ್ತಿದ್ದಾಗ ಎಟಿಎಂನಲ್ಲಿ ಸಹಾಯ ಮಾಡಿದ ಅದೇ ಮಹಿಳೆ ರಾತ್ರಿ 8 ಗಂಟೆಗೆ ತನ್ನನ್ನು ಹಿಂಬಾಲಿಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
ಆರೋಪಿಯು ಲಕ್ಷ್ಮಿಪುರಕ್ಕೆ ಹೋಗುವ ದಾರಿಯನ್ನು ಹುಡುಕುತ್ತಿದ್ದ ದೂರುದಾರರ ಗಮನವನ್ನು ಬೇರೆಡೆಗೆ ತಿರುಗಿಸಿದ್ದು, ಲಲಿತಾ ಅವರು ಮನೆ ತಲುಪುವಷ್ಟರಲ್ಲಿ ಅವರ ಕೈಯಿಂದ ಪರ್ಸ್ ಕಸಿದುಕೊಂಡು ಪರಾರಿಯಾಗಿದ್ದಾಳೆ. ಪರ್ಸ್‌ನಲ್ಲಿ ನಗದು, ಎಟಿಎಂ ಕಾರ್ಡ್, ಆಧಾರ್ ಇತ್ತು ಎನ್ನಲಾಗಿದೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಕಳ್ಳತನ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ್ತಿಯಾಗಿರುವ ದೂರುದಾರರಿಗೆ, ಆರೋಪಿಯ ಬಳಿ ಕಾರ್ಡ್ ಇದ್ದು, ಪಿನ್ ಕೂಡ ತಿಳಿದಿದ್ದರಿಂದ ಎಟಿಎಂ ಕಾರ್ಡ್ ಅನ್ನು ನಿರ್ಬಂಧಿಸಲು ಸೂಚಿಸಲಾಗಿದೆ.
ಎಟಿಎಂ ಕಿಯೋಸ್ಕ್‌ನ ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಅಪರಿಚಿತರಿಂದ ಸಹಾಯ ಪಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ದೂರುದಾರರು ಭಾರಿ ಬೆಲೆ ತೆತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳಿಂದ ಸಹಾಯ ಪಡೆಯದಂತೆ ಯಾವಾಗಲೂ ಸೂಚಿಸಲಾಗಿದೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



