ರಾಜ್ಯ

BMTC ನೌಕರರಿಗೆ 11 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿ: ಮುಂದೇನಾಯ್ತು?

ವೇತನ ಪರಿಷ್ಕರಣೆ ಹಿಂಬಾಕಿ ಪಾವತಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಡೇಟಾ ಎಂಟ್ರಿ ದೋಷದಿಂದಾಗಿ ಬಿಎಂಟಿಸಿ ಯಶವಂತಪುರ ಡಿಪೋ-26ರ ಸುಮಾರು 100 ನಿರ್ವಾಹಕರ ಖಾತೆಗೆ ಹೆಚ್ಚುವರಿ ವೇತನ ಜಮೆಯಾಗಿದೆ.

BMTC ನೌಕರರಿಗೆ 11 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿ: ಮುಂದೇನಾಯ್ತು?
ಸಂಗ್ರಹ ಚಿತ್ರ
Published On :

ಬೆಂಗಳೂರು: ಬಿಎಂಟಿಸಿ ನೌಕರರ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ ಬಿಡುಗಡೆ ಆಗಿದ್ದು, ಬಿಎಂಟಿಸಿಯ ಯಶವಂತಪುರ ಘಟಕದಲ್ಲಿ 100 ಸಿಬ್ಬಂದಿಗೆ ಮೊದಲ ಕಂತಿನ ರೂಪದಲ್ಲಿ 11 ತಿಂಗಳ ಹಿಂಬಾಕಿ ಬದಲು ಎಲ್ಲ 26 ತಿಂಗಳ ಹಿಂಬಾಕಿ ಪಾವತಿಯಾಗಿರುವುದಾಗಿ ತಿಳಿದುಬಂದಿದೆ.

ವೇತನ ಪರಿಷ್ಕರಣೆ ಹಿಂಬಾಕಿ ಪಾವತಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಡೇಟಾ ಎಂಟ್ರಿ ದೋಷದಿಂದಾಗಿ ಬಿಎಂಟಿಸಿ ಯಶವಂತಪುರ ಡಿಪೋ-26ರ ಸುಮಾರು 100 ನಿರ್ವಾಹಕರ ಖಾತೆಗೆ ಹೆಚ್ಚುವರಿ ವೇತನ ಜಮೆಯಾಗಿದೆ.

ಸರ್ಕಾರ ಅನುಮೋದಿಸಿದ ವೇತನ ಪರಿಷ್ಕರಣೆ ಪ್ಯಾಕೇಜ್‌ನಡಿ 26 ತಿಂಗಳ ವೇತನ ಹಿಂಬಾಕಿಯ ಮೊದಲ 11 ತಿಂಗಳ ಕಂತು ಮಾತ್ರ ಪಾವತಿಸಬೇಕಿದ್ದರೂ, ತಪ್ಪಾಗಿ ಸಂಪೂರ್ಣ 26 ತಿಂಗಳ ಮೊತ್ತವೇ ಕೆಲವು ಸಿಬ್ಬಂದಿಗಳ ಖಾತೆಗೆ ಜಮೆಯಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವೇತನ ಪ್ರಕ್ರಿಯೆ ವೇಳೆ ಬಿಲ್ಲಿಂಗ್ ಕ್ಲರ್ಕ್ ತಪ್ಪಾಗಿ ಡೇಟಾ ನಮೂದಿಸಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಮೊತ್ತ ಜಮೆಯಾದ ವಿಷಯ ಖಾತೆಗೆ ಹಣ ವರ್ಗಾವಣೆಯಾದ ತಕ್ಷಣವೇ ಗಮನಕ್ಕೆ ಬಂದಿದ್ದು, ಡಿಪೋ ಅಧಿಕಾರಿಗಳು ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಇದೇ ವೇಳೆ 26 ತಿಂಗಳ ಸಂಪೂರ್ಣ ವೇತನ ಹಿಂಬಾಕಿ ನೌಕರರದ್ದೇ ಆಗಿದ್ದು, ರಸೀದಿ ಇಲ್ಲದೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಬಿಎಂಟಿಸಿ ತಳ್ಳಿಹಾಕಿದೆ.

ಹೆಚ್ಚುವರಿ ಹಣ ಪಡೆದ ನಿರ್ವಾಹಕರನ್ನು ಸಂಪರ್ಕಿಸಿ ಹೆಚ್ಚುವರಿ ಮೊತ್ತವನ್ನು ಮರಳಿ ಜಮೆ ಮಾಡುವಂತೆ ಸೂಚಿಸಲಾಗಿದೆ. ಚೌಡೇಶ್ವರಿ ದೇವಸ್ಥಾನ ಬಸ್ ನಿಲ್ದಾಣ ಕಚೇರಿಗೆ ಸಂಬಂಧಿಸಿದ ಅಧಿಕೃತ ಇಲಾಖಾ ಖಾತೆಗಳ ಮೂಲಕವೇ ಹಣ ಮರುಪಾವತಿ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿಯೊಂದು ವ್ಯವಹಾರಕ್ಕೂ ರಸೀದಿ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ಎಲ್ಲ ಮರುಪಾವತಿ ಪ್ರಕ್ರಿಯೆಗಳು ಅಧಿಕೃತ ಮೇಲ್ವಿಚಾರಣೆಯಲ್ಲೇ ಸರಿಯಾದ ದಾಖಲೆಗಳೊಂದಿಗೆ ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಈಗಾಗಲೇ 35 ಸಿಬ್ಬಂದಿಗಳಿಂದ ಹೆಚ್ಚುವರಿ ಮೊತ್ತ ವಾಪಸ್ ಪಡೆಯಲಾಗಿದ್ದು, ಸಂಬಂಧಿತ ಡಿಪೋ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ಹಣ ವಸೂಲಿ ಪ್ರಕ್ರಿಯೆಯೂ ಭಾನುವಾರ ಸಂಜೆ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.