ಬೆಂಗಳೂರಿನಲ್ಲಿ LPG ಸಿಲಿಂಡರ್ ಕೊರತೆ: ವಿತರಣೆಯಲ್ಲಿ ವಿಳಂಬ; ಕಾಳಸಂತೆ ಮಾರಾಟ ಕುರಿತು ಗ್ರಾಹಕರ ಆರೋಪ
ಕೆಲವರು ಸಿಲಿಂಡರ್ ಪಡೆಯಲು ಹೆಚ್ಚುವರಿ ಹಣ ನೀಡಿರುವುದಾಗಿ ತಿಳಿಸಿದ್ದಾರೆ. ಸುಮಾರು ಶೇ.3 ಮಂದಿ ಪ್ರತಿ ಸಿಲಿಂಡರ್‌ಗೆ ರೂ.100 ಹೆಚ್ಚುವರಿ ನೀಡಿದರೆ, 10 ಶೇಕಡಾ ಮಂದಿ ರೂ.100ರಿಂದ ರೂ.300ರವರೆಗೆ ಹೆಚ್ಚುವರಿ ಹಣ ನೀಡಿದ್ದಾರೆ.

ಬೆಂಗಳೂರು: ನಗರದಲ್ಲಿ ಕಳೆದ ಒಂದು ವಾರದಿಂದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಣೆಯಲ್ಲಿ ವಿಳಂಬವಾಗುತ್ತಿರುವುದು ಮತ್ತು ಕೆಲವೆಡೆ ಕಾಳಸಂತೆ ಮಾರಾಟಕ ಕುರಿತು ಗ್ರಾಹಕರಿಂದ ಆರೋಪಗಳು ಕೇಳಿ ಬರುತ್ತಿವೆ.
ಎಲ್‌ಪಿಜಿ ಬುಕ್ಕಿಂಗ್ ಮತ್ತು ವಿತರಣೆಯ ಕುರಿತು ನಡೆದಿರುವ ಸಮೀಕ್ಷೆಯಲ್ಲಿ 2,721 ಮಂದಿ ಭಾಗವಹಿಸಿದ್ದು, ಈ ಪೈಕಿ ಸುಮಾರು ಶೇ.39ರಷ್ಟು ಮಂದಿ ಡೀಲರ್‌ಗಳು ಸಿಲಿಂಡರ್ ಲಭ್ಯವಿಲ್ಲ ಅಥವಾ ಬುಕ್ಕಿಂಗ್ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಸುಮಾರು ಶೇ.16ರಷ್ಟು ಮಂದಿ ಸಾಮಾನ್ಯಕ್ಕಿಂತ ಹೆಚ್ಚು ಕಾಲ ವಿತರಣೆಗೆ ಕಾಯಬೇಕಾಯಿತು ಎಂದು ಹೇಳಿದ್ದಾರೆ. ಇನ್ನೂ 10 ಶೇಕಡಾ ಮಂದಿ ಡೀಲರ್‌ಗಳನ್ನು ಹಲವು ಬಾರಿ ಸಂಪರ್ಕಿಸಬೇಕಾಯಿತು ಎಂದು ತಿಳಿಸಿದ್ದಾರೆ.ಈ ನಡುವೆ 23 ಶೇಕಡಾ ಮಂದಿ ಬುಕ್ಕಿಂಗ್ ಮತ್ತು ವಿತರಣೆ ಸಾಮಾನ್ಯವಾಗಿಯೇ ನಡೆದಿದೆ ಎಂದು ಹೇಳಿದ್ದಾರೆ.
ಸುಮಾರು 12 ಶೇಕಡಾ ಮಂದಿ ಹೆಚ್ಚುವರಿ ದರ ನೀಡಿ ಕಾಳಸಂತೆ ಮೂಲಕ ಸಿಲಿಂಡರ್ ಖರೀದಿಸಬೇಕಾಯಿತು ಎಂದು ತಿಳಿಸಿದ್ದಾರೆ.
ಡೀಲರ್‌ಗಳಿಂದ ಸರಬರಾಜಿನ ಬಗ್ಗೆ 2,502 ಮಂದಿ ಪ್ರತಿಕ್ರಿಯಿಸಿದ್ದು, ಶೇ.37 ಮಂದಿ ಈಗಾಗಲೇ ಸರಬರಾಜಿನಲ್ಲಿ ಕೊರತೆ ಇದೆ ಎಂದು ಡೀಲರ್‌ಗಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೂ ಶೇ.33 ಮಂದಿ ವಿತರಣೆಯಲ್ಲಿ ವಿಳಂಬ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕೆಲವರು ಸಿಲಿಂಡರ್ ಪಡೆಯಲು ಹೆಚ್ಚುವರಿ ಹಣ ನೀಡಿರುವುದಾಗಿ ತಿಳಿಸಿದ್ದಾರೆ. ಸುಮಾರು ಶೇ.3 ಮಂದಿ ಪ್ರತಿ ಸಿಲಿಂಡರ್‌ಗೆ ರೂ.100 ಹೆಚ್ಚುವರಿ ನೀಡಿದರೆ, 10 ಶೇಕಡಾ ಮಂದಿ ರೂ.100ರಿಂದ ರೂ.300ರವರೆಗೆ ಹೆಚ್ಚುವರಿ ಹಣ ನೀಡಿದ್ದಾರೆ.
ಸುಮಾರು 14 ಶೇಕಡಾ ಮಂದಿ ರೂ.300ರಿಂದ ರೂ.500ರವರೆಗೆ ಹೆಚ್ಚುವರಿ ಹಣ ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನೂ 16 ಶೇಕಡಾ ಮಂದಿ ಪ್ರತಿ ಸಿಲಿಂಡರ್‌ಗೆ ರೂ.500ಕ್ಕಿಂತ ಹೆಚ್ಚು ಹಣ ನೀಡಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ ಸುಮಾರು 20 ಶೇಕಡಾ ಮಂದಿ ತಮ್ಮ ಮನೆ ಅಥವಾ ನೆರೆಹೊರೆಯಲ್ಲಿ ಕಾಳಸಂತೆ ಮಾರಾಟ ನಡೆದಿದೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಈ ಸಮೀಕ್ಷೆಯ ಫಲಿತಾಂಶ ದೇಶವ್ಯಾಪಿ ಸ್ಥಿತಿಯನ್ನು ಕೂಡ ಪ್ರತಿಬಿಂಬಿಸುತ್ತದೆ. ದೇಶದ 309 ಜಿಲ್ಲೆಗಳಲ್ಲಿನ 57,000ಕ್ಕೂ ಹೆಚ್ಚು ಕುಟುಂಬಗಳು ಭಾಗವಹಿಸಿದ ಸಮೀಕ್ಷೆಯಲ್ಲಿ, ಕಳೆದ ಒಂದು ವಾರದಲ್ಲಿ 57 ಶೇಕಡಾ ಮಂದಿ ಎಲ್‌ಪಿಜಿ ವಿತರಣೆಯಲ್ಲಿ ವಿಳಂಬ ಅಥವಾ ಕಾಳಸಂತೆ ಮಾರಾಟ ನಡೆದಿದೆ ಎಂದು ತಿಳಿಸಿದ್ದಾರೆ.
ಅದರಲ್ಲೂ 36 ಶೇಕಡಾ ಮಂದಿ ಮಧ್ಯವರ್ತಿಗಳು ಪ್ರತಿ ಸಿಲಿಂಡರ್‌ಗೆ ರೂ.100ರಿಂದ ರೂ.500ರವರೆಗೆ ಹೆಚ್ಚುವರಿ ಹಣ ವಸೂಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಒಂದು ಸಿಲಿಂಡರ್‌ಗೆ ರೂ.1,500ರಿಂದ ರೂ.2,800ರವರೆಗೆ ದರ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



