ಅನಿವಾರ್ಯ ಪರಿಸ್ಥಿತಿ, ವಾಣಿಜ್ಯ ಸಿಲಿಂಡರ್ ಸ್ಟಾಕ್ ಇಲ್ಲ, ಹೋಟೆಲ್ನವರು 1 ವಾರ ಸಹಿಸಿಕೊಳ್ಳಬೇಕು: ಸಚಿವ ಕೆ.ಎಚ್ ಮುನಿಯಪ್ಪ!
ಪರಿಸ್ಥಿತಿ 'ಅನಿವಾರ್ಯ'ವಾಗಿದ್ದು ಸ್ಟಾಕ್ ಲಭ್ಯವಿಲ್ಲದ ಕಾರಣ ಕನಿಷ್ಠ ಒಂದು ವಾರ ಹೋಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ಗಳನ್ನು ಪೂರೈಸುವುದು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ಬೆಂಗಳೂರು: ಪರಿಸ್ಥಿತಿ 'ಅನಿವಾರ್ಯ'ವಾಗಿದ್ದು ಸ್ಟಾಕ್ ಲಭ್ಯವಿಲ್ಲದ ಕಾರಣ ಕನಿಷ್ಠ ಒಂದು ವಾರ ಹೋಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ಗಳನ್ನು ಪೂರೈಸುವುದು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು. ಇದೇ ವೇಳೆ ಮುನಿಯಪ್ಪ, ಹೋಟೆಲ್ ಮಾಲೀಕರಿಗೆ ಅಗತ್ಯ ಆಹಾರಗಳನ್ನು ತಯಾರಿಸಲು ವಿದ್ಯುತ್ ಸ್ಟವ್ ಬಳಸುವಂತೆ ಸಲಹೆ ನೀಡಿದರು. ವಾಣಿಜ್ಯ ಸಿಲಿಂಡರ್ಗಳ ಕೊರತೆ 10 ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಭಾವಿಸುತ್ತೇನೆ ಎಂದರು.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಇಂದು 'ಶೂನ್ಯ ಸಮಯದಲ್ಲಿ'ದಲ್ಲಿ ಸಿಲಿಂಡರ್ಗಳ ಪೂರೈಕೆಯಲ್ಲಿನ ಅಡಚಣೆಯ ಕುರಿತು ಸದಸ್ಯರಾದ ಎಂ. ನಾಗರಾಜು ಮತ್ತು ಇವಾನ್ ಡಿ'ಸೋಜಾ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ಯಾಸ್ ಕೊರತೆಯಿಂದಾಗಿ ಹೋಟೆಲ್ಗಳು ಪರಿಣಾಮ ಬೀರಿವೆ. ಕೆಲವು ಹೋಟೆಲ್ಗಳು ಸ್ಥಗಿತಗೊಂಡಿವೆ. ಇನ್ನು ಕೆಲವು ಹೋಟೆಲ್ಗಳು ಮೆನು ಕಡಿತಗೊಳಿಸಿವೆ. ಪಿಜಿ ವಸತಿಗಳಲ್ಲಿ ಆಹಾರ ತಯಾರಿಕೆ, ದೇವಾಲಯಗಳಲ್ಲಿ ಪ್ರಸಾದ ವಿತರಣೆ ಮತ್ತು ಆಟೋಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ನಾಗರಾಜು ಮತ್ತು ಇವಾನ್ ಡಿ'ಸೋಜಾ ಹೇಳಿದರು. ಕೊರತೆಯಿಂದಾಗಿ ಸಿಲಿಂಡರ್ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಗ್ಯಾಸ್ ಬೆಲೆಗಳು ಏರಿಕೆಯಾಗಿವೆ ಎಂದು ಸದಸ್ಯರು ಗಮನಸೆಳೆದರು.
ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ (OMC) ಸಭೆ ನಡೆಸಿರುವುದಾಗಿ ಸಚಿವರು ಹೇಳಿದರು. ಸದ್ಯಕ್ಕೆ ಆಸ್ಪತ್ರೆಗಳು, ಹಾಸ್ಟೆಲ್ಗಳು ಮತ್ತು ವಸತಿ ಶಾಲೆಗಳಿಗೆ ಅಗತ್ಯ ಆಹಾರ ಪದಾರ್ಥಗಳನ್ನು ತಯಾರಿಸಲು ವಾಣಿಜ್ಯ ಸಿಲಿಂಡರ್ಗಳನ್ನು ಪೂರೈಸಲಾಗುವುದು. ಸಿಲಿಂಡರ್ಗಳಿಗೆ ತೀವ್ರ ಅವಶ್ಯಕತೆ ಇರುವ ಕಡೆ ನಾವು ಆದ್ಯತೆಯ ಆಧಾರದ ಮೇಲೆ ಸಿಲಿಂಡರ್ಗಳನ್ನು ಪೂರೈಸುತ್ತೇವೆ ಎಂದು ಮುನಿಯಪ್ಪ ಸದನಕ್ಕೆ ಮಾಹಿತಿ ನೀಡಿದರು. ಹೋಟೆಲ್ ಮಾಲೀಕರು ಒಂದು ವಾರಕ್ಕೂ ಹೆಚ್ಚು ಕಾಲ ತಾಳ್ಮೆಯಿಂದ ಕಾಯುವಂತೆ ವಿನಂತಿಸಿದರು. ನಾವು ಈಗ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಆದಾಗ್ಯೂ, ಒಂದು ವಾರದಿಂದ ಹತ್ತು ದಿನಗಳಲ್ಲಿಉದ್ವಿಗ್ನತೆ ಕಡಿಮೆಯಾಗುತ್ತದೆ ಎಂದು ನಾವು ಆಶಿಸುತ್ತೇವೆ ಎಂದು ಮುನಿಯಪ್ಪ ಹೇಳಿದರು.
ಕಾಳಸಂತೆಯಲ್ಲಿ ಸಿಲಿಂಡರ್ಗಳ ಮಾರಾಟದ ದೂರುಗಳ ಕುರಿತು, ಉಪ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ ಎಂದರು. ಹೋರ್ಮುಜ್ ಜಲಸಂಧಿಯಿಂದ ಎರಡು LPG ಟ್ಯಾಂಕರ್ ಹಡಗುಗಳು ಭಾರತವನ್ನು ತಲುಪಿವೆ ಎಂದು ಸಚಿವರು ಸದನಕ್ಕೆ ತಿಳಿಸಿದರು. ಸುಮಾರು 12 ಹಡಗುಗಳು ಬರುವ ನಿರೀಕ್ಷೆಯಿದೆ. ಅವು ನಿರ್ಗಮಿಸಿದ ನಂತರ ಹೊಸ ಅಪ್ಟೇಡ್ ಕೊಡುವುದಾಗಿ ಹೇಳಿದರು. ಸ್ಟಾಕ್ ತಲುಪಿದ ನಂತರ ಪೂರೈಕೆಗಾಗಿ ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



