ಗೆಳತಿಯನ್ನ Pretty ಅಂತ ಕರೆದ್ರೆ ತಪ್ಪಲ್ಲ; ಇದು Gen Z ಭಾಷಾಶೈಲಿಯೇ ಹೊರತು ಅಪರಾಧವಲ್ಲ ಎಂದ ಕರ್ನಾಟಕ ಹೈಕೋರ್ಟ್
ಇಂದಿನ ಯುವಕರಲ್ಲಿ ಅದರಲ್ಲೂ Gen-Z ಗಳಲ್ಲಿ ತಮ್ಮ ಗೆಳತಿಯನ್ನ Pretty ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ, ಇದನ್ನೇ ತಪ್ಪು ತಿಳಿದ ಪೋಷಕರೊಬ್ಬರು, ತಮ್ಮ ಪುತ್ರಿಯನ್ನು Pretty ಎಂದು ಕರೆದ ಯುವಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಇಂದಿನ ಯುವಕರಲ್ಲಿ ಅದರಲ್ಲೂ Gen-Z ಗಳಲ್ಲಿ ತಮ್ಮ ಗೆಳತಿಯನ್ನ Pretty ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ, ಇದನ್ನೇ ತಪ್ಪು ತಿಳಿದ ಪೋಷಕರೊಬ್ಬರು, ತಮ್ಮ ಪುತ್ರಿಯನ್ನು Pretty ಎಂದು ಕರೆದ ಯುವಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇನ್ನೂ, ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಮಹತ್ವದ ತೀರ್ಪು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬೆಂಗಳೂರಿನ ಕಾಲೇಜೊಂದರ 20 ವರ್ಷದ ಯುವಕ, ತನ್ನ ಗೆಳತಿಯ ಇನ್‌ಸ್ಟಾಗ್ರಾಮ್ ಫೋಟೋಗೆ Pretty ಎಂದು ಮೆಸೇಜ್ ಕಳುಹಿಸಿದ್ದನು. ಇದಕ್ಕೆ ಪ್ರತಿಯಾಗಿ, ಹುಡುಗಿಯು ಥ್ಯಾಂಕ್ಸ್ ಎಂದು ರಿಪ್ಲೇ ಮಾಡಿದ್ದಾಳೆ.
ಆದರೆ, ಕರ್ನಾಟಕ ಕೆಡರ್‌ನ ಹಿರಿಯ ಐಪಿಎಸ್ ಅಧಿಕಾರಿ ಆಗಿರುವ ಹುಡುಗಿಯ ತಂದೆ, ಈ ಮೆಸೇಜ್ ನೋಡಿ, ಯುವಕನ ವಿರುದ್ಧ, ಮಹಿಳೆಯನ್ನು ಹಿಂಬಾಲಿಸಿದ್ದಕ್ಕಾಗಿ, ಆಕೆಯ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66E (ಗೌಪ್ಯತೆಯ ಉಲ್ಲಂಘನೆ) ಅಡಿಯಲ್ಲಿ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೊತೆಗೆ ಹುಡುಗನ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದರು.
ಹೈಕೋರ್ಟ್ ಹೇಳಿದ್ದೇನು?
ಮುಂದುವರೆದು, ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಯುವಕನ ಮೇಲಿನ FIR ರದ್ದುಗೊಳಿಸಿ ಇದು ಇಂದಿನ ಯುವ ಪೀಳಿಗೆ (Gen Z) ಸಂವಹನ ನಡೆಸಲು ಇಂತಹ ಸಾಮಾನ್ಯ ಅನೌಪಚಾರಿಕ ರೀತಿಯ ಭಾಷೆಯನ್ನು ಬಳಸುತ್ತಾರೆ. ಹಾಗಾಗಿ, ಖಾಸಗಿಯಾದ ಚಾಟ್‌ನಲ್ಲಿ ತನ್ನ ಸಹಪಾಠಿಯೊಬ್ಬರನ್ನು ಸುಂದರಿ (Pretty) ಎಂದು ಕರೆಯುವುದು ಮಹಿಳೆಯ ಶೀಲಭಂಗ ವ್ಯಾಪ್ತಿಗೆ ಬರುವುದಿಲ್ಲ. ಇದು ಇಬ್ಬರ ನಡುವಿನ ವೈಯಕ್ತಿಕ ಸಂಭಾಷಣೆಯಾಗಿದ್ದು, ಸಾರ್ವಜನಿಕವಾಗಿ ಮಾಡಿದ ಕಾಮೆಂಟ್ ಅಲ್ಲ. ಹಾಗಾಗಿ, ಇಂತಹ ಸಣ್ಣ ವಿಷಯಗಳಿಗೆ ಕ್ರಿಮಿನಲ್ ಕಾನೂನನ್ನು ಬಳಸುವುದು ಯುವಕರ ಭವಿಷ್ಯವನ್ನು ಹಾಳು ಮಾಡುತ್ತದೆ ಜೊತೆಗೆ ಇದು ಕಾನೂನಿನ ಸ್ಪಷ್ಟ ದುರ್ಬಳಕೆಯಾಗಿದೆ ಎಂದು ತಿಳಿಸಿದೆ.
ಒಟ್ಟಾರೆಯಾಗಿ, ಯುವಕನ ವಿರುದ್ಧದ ತನಿಖೆಯನ್ನು ಕೈಬಿಟ್ಟ ನ್ಯಾಯಾಲಯ, ಪೊಲೀಸರ ವಶದಲ್ಲಿದ್ದ ಆತನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ತಕ್ಷಣವೇ ಹಿಂತಿರುಗಿಸುವಂತೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




