ರಾಜ್ಯ

'ಹಿಂದೂ ಧರ್ಮ, RSS ನಿಂದಿಸಿದರೆ ಕಾಂಗ್ರೆಸ್‌ನಲ್ಲಿ ಬಡ್ತಿ; ಬಿ.ಕೆ ಹರಿಪ್ರಸಾದ್-ಪ್ರಿಯಾಂಕ್​​ ಖರ್ಗೆಗೆ ಮಹತ್ವದ ಹುದ್ದೆ ಸಿಕ್ಕಿದ್ದು ಇದೇ ಕಾರಣಕ್ಕೆ'

ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಸಚಿವ ಸ್ಥಾನ ಲಭಿಸಿರುವುದರ ಹಿಂದೆ ಇದೇ ಕಾರಣ. ಅಷ್ಟೇ ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಗಾದಿ ಏರಿದ್ದರ ಹಿಂದೆಯೂ ಇದೇ ತಂತ್ರವಿದೆ

'ಹಿಂದೂ ಧರ್ಮ, RSS ನಿಂದಿಸಿದರೆ ಕಾಂಗ್ರೆಸ್‌ನಲ್ಲಿ ಬಡ್ತಿ; ಬಿ.ಕೆ ಹರಿಪ್ರಸಾದ್-ಪ್ರಿಯಾಂಕ್​​ ಖರ್ಗೆಗೆ ಮಹತ್ವದ ಹುದ್ದೆ ಸಿಕ್ಕಿದ್ದು ಇದೇ ಕಾರಣಕ್ಕೆ'
ಬಸನಗೌಡ ಪಾಟೀಲ್ ಯತ್ನಾಳ್
Published On :

ಬೆಂಗಳೂರು: ದೇಶ, ಹಿಂದೂ ಧರ್ಮ ಮತ್ತು ಆರ್​​ಎಸ್​​ಎಸ್​​ ವಿರುದ್ಧ ಮಾತಾಡುವವರಿಗೆ ರಾಹುಲ್​​ ಗಾಂಧಿ ಕಾಂಗ್ರೆಸ್​​ನಲ್ಲಿ ಬಡ್ತಿ​​ ಕೊಡುತ್ತಾರೆ. ಬಿಕೆ ಹರಿಪ್ರಸಾದ್​​​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರಿಯಾಂಕ್​​ ಖರ್ಗೆಗೆ ಗೃಹ ಸಚಿವ ಹುದ್ದೆ ಸಿಕ್ಕಿದ್ದು ಇದೇ ಕಾರಣಕ್ಕೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರವಾಗಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ದೇಶ, ಹಿಂದು ಧರ್ಮ ಹಾಗೂ ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ಮಾತನಾಡುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಅವರು ಇಂತಹ ನಾಯಕರಿಗೆ ನಿರಂತರವಾಗಿ ಬಡ್ತಿ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಸಚಿವ ಸ್ಥಾನ ಲಭಿಸಿರುವುದರ ಹಿಂದೆ ಇದೇ ಕಾರಣ. ಅಷ್ಟೇ ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಗಾದಿ ಏರಿದ್ದರ ಹಿಂದೆಯೂ ಇದೇ ತಂತ್ರವಿದೆ ಎಂದಿರುವ ಅವರು, ದೇಶದ ವಿರುದ್ಧ ಮಾತನಾಡುವುದು ಮತ್ತು ಹಿಂದೂಗಳ ಬಗ್ಗೆ ಹಗುರವಾಗಿ ನಡೆದುಕೊಳ್ಳುವುದು ಕಾಂಗ್ರೆಸ್‌ನ ಮೂಲ ಸಂಸ್ಕೃತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.