ಗಂಗೆಯಲ್ಲಿ ಪುಣ್ಯಸ್ನಾನ, ವೇದ ಮಂತ್ರಘೋಷ: ಹಿಂದೂ ಧರ್ಮ ಸ್ವೀಕರಿಸಿದ 6 ಮುಸ್ಲಿಮರು! Video
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಮುಸ್ಲಿಂ ಕುಟುಂಬವೊಂದರ ಐವರು ಹಾಗೂ ಸಹರಾನ್‌ಪುರದ ಮತ್ತೊಬ್ಬ ವ್ಯಕ್ತಿ ಸೇರಿದಂತೆ ಒಟ್ಟು ಆರು ಮಂದಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ.

ಹರಿದ್ವಾರ: ಪವಿತ್ರ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿ, ವೇದ ಮಂತ್ರಘೋಷಗಳ ನಡುವೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಮಂದಿ ಮುಸ್ಲಿಮರು ಹಿಂದೂ ಧರ್ಮ ಸ್ವೀಕರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಮುಸ್ಲಿಂ ಕುಟುಂಬವೊಂದರ ಐವರು ಹಾಗೂ ಸಹರಾನ್‌ಪುರದ ಮತ್ತೊಬ್ಬ ವ್ಯಕ್ತಿ ಸೇರಿದಂತೆ ಒಟ್ಟು ಆರು ಮಂದಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ.
ಹರಿದ್ವಾರದ ಚಂಡಿಘಾಟ್‌ನಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ಬಳಿಕ ಅವರು ಹೊಸ ಹೆಸರು ಹಾಗೂ ಗುರುತನ್ನು ಸ್ವೀಕರಿಸಿದ್ದಾರೆ.
ಹೊಸ ಹೆಸರು-ಹೊಸ ಗುರುತು
ಪಿಲಿಭಿತ್ ಜಿಲ್ಲೆಯ ಮಹಿದ್ ಮತ್ತು ಅವರ ಪತ್ನಿ ಸಬೀನಾ ಬಿಬಿ ಇದೀಗ ಕ್ರಮವಾಗಿ ಮೋಹಿತ್ ಮತ್ತು ಖುಷಿ ಎಂಬ ಹೆಸರುಗಳನ್ನು ಪಡೆದಿದ್ದಾರೆ. ತಮ್ಮ ನಿರ್ಧಾರ ಸ್ವಇಚ್ಛೆಯಿಂದ ತೆಗೆದುಕೊಂಡಿದ್ದೇವೆ ಎಂದು ಮೋಹಿತ್ ಹೇಳಿದ್ದಾರೆ.
'ನಾವು ಈ ನಿರ್ಧಾರವನ್ನು ನಮ್ಮ ಸ್ವಂತ ಇಚ್ಛೆಯಿಂದ ತೆಗೆದುಕೊಂಡಿದ್ದೇವೆ. ಸನಾತನ ಧರ್ಮದ ಬಗ್ಗೆ ನಮ್ಮಲ್ಲಿ ಗೌರವ, ಕರುಣೆ ಮತ್ತು ಶಾಂತಿಯ ಭಾವನೆ ಮೂಡಿದೆ. ಹಿಂದೂ ಧರ್ಮ ಸ್ವೀಕಾರ ಬಳಿಕ ಮಕ್ಕಳ ಹೆಸರು ಬದಲಿಸಲಾಗಿದ್ದು, ಇಬ್ಬರು ಗಂಡು ಮಕ್ಕಳಿಗೆ ರೋಷನ್ ಮತ್ತು ರೋಹನ್ ಎಂಬ ಹೆಸರುಗಳನ್ನು ಇಡಲಾಗಿದ್ದು, ಪುತ್ರಿಗೆ ಅನನ್ಯಾ ಎಂದು ಹೆಸರಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸಹರಾನ್‌ಪುರದ ಇಬ್ರಾಹಿಂ ಅವರು ಇದೀಗ ವಿರಾಟ್ ಪುಂಡೀರ್ ಎಂಬ ಹೆಸರನ್ನು ಸ್ವೀಕರಿಸಿದ್ದಾರೆ.
ಗಂಗೆಯಲ್ಲಿ ಪುಣ್ಯಸ್ನಾನ, ವೇದಮಂತ್ರಗಳ ಘೋಷ
ಹರಿದ್ವಾರದ ಚಂಡಿಘಾಟ್‌ನಲ್ಲಿ ಧರ್ಮ ಪರಿವರ್ತನೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಆರು ಮಂದಿಯೂ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಳಿಕ ಗಂಗಾ ಪೂಜೆ, ಹವನ ಸೇರಿದಂತೆ ವಿವಿಧ ಹಿಂದೂ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ವೇದಮಂತ್ರಗಳ ಪಠಣದ ನಡುವೆ ಕಾರ್ಯಕ್ರಮ ನಡೆಯಿತು.
ತೀರ್ಥ ಸೇವಾ ನ್ಯಾಯಾಸ್ ಸಂಸ್ಥೆಯ ಅಧ್ಯಕ್ಷ ತೀರ್ಥಾಚಾರ್ಯ ಸಂತ ರಾಮ್ ವಿಶಾಲ್ ದಾಸ್ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಬಗ್ಗೆ ಸಂತ ರಾಮ್ ವಿಶಾಲ್ ದಾಸ್ ಮಾತನಾಡಿ, “ಇಂದು ನಡೆದ ಈ ಘರ್ ವಾಪ್ಸಿ ಪಿಲಿಭಿತ್‌ನ ಕುಟುಂಬವೊಂದಕ್ಕೆ ಸಂಬಂಧಿಸಿದ್ದು. ಮಹಿದ್, ಅವರ ಪತ್ನಿ ಸಬೀನಾ ಹಾಗೂ ಮೂವರು ಮಕ್ಕಳು ಇಂದು ಇಸ್ಲಾಂ ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂದು ಹೇಳಿದರು.
ಅವರು ಗಂಗೆಯಲ್ಲಿ ಸ್ನಾನ ಮಾಡಿ, ಪವಿತ್ರ ಗಂಗೆಯ ದಡದಲ್ಲಿರುವ ಚಂಡಿಘಾಟ್‌ನಲ್ಲಿ ಆಚಮನ ನೆರವೇರಿಸಿದರು. ಬಳಿಕ ಸಂಪೂರ್ಣ ವೈದಿಕ ವಿಧಿವಿಧಾನ ಹಾಗೂ ಮಂತ್ರಘೋಷದೊಂದಿಗೆ ಸನಾತನ ಧರ್ಮಕ್ಕೆ ಮರಳಿದ್ದಾರೆ.
ಸಮಾಜದಲ್ಲಿ ಧರ್ಮ, ಮೌಲ್ಯಗಳು ಮತ್ತು ಸೇವೆಯ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಗಂಗಾ, ಯಜ್ಞ, ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಟುಂಬ ಮೌಲ್ಯಗಳಿಗೆ ಸನಾತನ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವು ಸಾಧು-ಸಂತರು ಭಾಗವಹಿಸಿ ಧರ್ಮ ಸ್ವೀಕರಿಸಿದವರನ್ನು ಸ್ವಾಗತಿಸಿ ಗೌರವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



