'ಬೆಂಗಳೂರು ನನಗೆ ಮೋಸ ಮಾಡಿದೆ' : ಏನಿದು ಬಾಲಿವುಡ್ ನಟಿ ಪಾರುಲ್ ಗುಲಾಟಿ ಆರೋಪ? VIDEO
ತನ್ನ ಮಾಲೀಕತ್ವದ ನಿಶ್ ಹೇರ್ ಅಂಗಡಿಯ ಇಬ್ಬರು ಉದ್ಯೋಗಿಗಳು ಗ್ರಾಹಕರಿಂದ ಪಡೆದ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು, ಸುಮಾರು 8 ಲಕ್ಷ ರೂ. ದೋಚಿದ್ದಾರೆ ಎಂದು ಪಾರುಲ್ ಗುಲಾಟಿ ಆರೋಪಿಸಿದ್ದಾರೆ

ಬೆಂಗಳೂರು: ನಗರದ ನಿಶ್ ಹೇರ್ ಅಂಗಡಿಯ ಇಬ್ಬರು ಉದ್ಯೋಗಿಗಳು 8 ಲಕ್ಷ ರೂ. ವಂಚನೆ ಮಾಡಿರುವುದಾಗಿ ನಟಿ ಹಾಗೂ ಉದ್ಯಮಿ ಪಾರುಲ್ ಗುಲಾಟಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅವರು ವಿಡಿಯೋ ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಬೆಂಗಳೂರು ನನಗ ಮೋಸ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ತನ್ನ ಮಾಲೀಕತ್ವದ ನಿಶ್ ಹೇರ್ ಅಂಗಡಿಯ ಇಬ್ಬರು ಉದ್ಯೋಗಿಗಳು ಗ್ರಾಹಕರಿಂದ ಪಡೆದ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು, ಸುಮಾರು 8 ಲಕ್ಷ ರೂ. ದೋಚಿದ್ದಾರೆ ಎಂದು ಪಾರುಲ್ ಗುಲಾಟಿ ಆರೋಪಿಸಿದ್ದಾರೆ. ವಂಚನೆ ಗೊತ್ತಾದ ಬಳಿಕ ಇಡೀ ದಿನ ಪೊಲೀಸ್ ಠಾಣೆಯಲ್ಲಿ ಕಳೆದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಅಂಗಡಿಯಿಂದ ಬರುವ ಆದಾಯದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಅನಿಸಿದಾಗ ಇಬ್ಬರು ಉದ್ಯೋಗಿಗಳಿಗೆ ಮಾಹಿತಿ ನೀಡದೆಯೇ ಅಂಗಡಿಗೆ ಇದ್ದಕ್ಕಿದ್ದಂತೆ ಭೇಟಿ ನೀಡಿದಾಗ ಸೇಲ್ಸ್ ವ್ಯವಸ್ಥಾಪಕಿ ಅನಾರೋಗ್ಯದಿಂದ ರಜೆ ಹಾಕಿದ್ದರು. ಅಂಗಡಿಯ ಮ್ಯಾನೇಜರ್ ಮಾತ್ರ ಇದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹಣವನ್ನು ದೋಚಿರುವುದು ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದು, ಸೇಲ್ಸ್ ವ್ಯವಸ್ಥಾಪಕಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
8 ಲಕ್ಷ ರೂ. ಗಿಂತ ಹೆಚ್ಚಿನ ಹಣವನ್ನು ವಂಚಿಸಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಸಹ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಯುವತಿ ತಪ್ಪಿಸಿಕೊಂಡಿದ್ದಾಳೆ. ಇಬ್ಬರು ಸಿಬ್ಬಂದಿ ಸೇರಿಕೊಂಡು ಪ್ರತಿದಿನ 15 ಸಾವಿರ ರೂಗಳಿಂದ 20 ಸಾವಿರ ರೂ. ಮೌಲ್ಯದ ಹೇರ್ ಪ್ರಾಡಕ್ಟ್ ಗಳನ್ನು ಮಾಡುತ್ತಿದ್ದರು. ಆದರೆ, ಅವರು ಹಣವನ್ನು ಅಂಗಡಿಯ ಖಾತೆಗೆ ಜಮಾ ಮಾಡದೆ ತಮ್ಮ ವೈಯಕ್ತಿಕ ಖಾತೆಗೆ ಹಾಕಿಸಿಕೊಳ್ಳತ್ತಿದ್ದರು. ಅವರು ನನ್ನ ಉತ್ಪನ್ನಗಳು ಮತ್ತು ಹೆಸರನ್ನು ಬಳಸಿಕೊಂಡು ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಹಣವನ್ನು ಅವರೇ ತೆಗೆದುಕೊಂಡಿದ್ದಾರೆ. ಅವರು ನನ್ನಿಂದ ಮತ್ತು ಗ್ರಾಹಕರಿಂದ ಇಬ್ಬರಿಂದಲೂ ಹಣ ದೋಚಿದ್ದು, ಹಣ ಮರಳಿ ಸಿಗದಿದ್ದರೂ ನ್ಯಾಯ ಸಿಗಲಿ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



