ಹಂಪಿಯಲ್ಲಿ ಅಪರೂಪದ 'Brown rock chat' ಹಕ್ಕಿ ಪತ್ತೆ: ಪಕ್ಷಿ ಪ್ರೇಮಿಗಳು ಸಂತಸ
ಬ್ರೌನ್ ರಾಕ್ ಚಾಟ್ ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತವೆ. ಹೀಗಾಗಿ ಹಂಪಿಯ ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ಬಂಡೆಗಳಿಂದ ಕೂಡಿದ ಭೂದೃಶ್ಯವು ಈ ಪ್ರಭೇದಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ.

ಹಂಪಿ/ಹೊಸಪೇಟೆ: ಉತ್ತರ ಮತ್ತು ಮಧ್ಯ ಭಾರತದ ಕೆಲ ಭಾಗಗಳಲ್ಲಿ ಮಾತ್ರ ಆವಾಸಸ್ಥಾನ ಹೊಂದಿರುವ ಅಪರೂಪದ ಬ್ರೌನ್ ರಾಕ್ ಚಾಟ್ ಪಕ್ಷಿ ಹಂಪಿಯಲ್ಲಿ ಕಾಣಿಸಿಕೊಂಡಿದ್ದು, ಈ ಬೆಳವಣಿಕೆ ಪಕ್ಷಿ ಪ್ರೇಮಿಗಳ ಮತ್ತು ಸಂರಕ್ಷಣಾ ಕಾರ್ಯಕರ್ತರಲ್ಲಿ ಸಂತಸ ಮತ್ತು ಆಶ್ಚರ್ಯವನ್ನು ಮೂಡಿಸಿದೆ.
ಪಂಪಯ್ಯಸ್ವಾಮಿ ಮಳಿಮಠ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ತಂಡವು ಹಂಪಿಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಅಚ್ಯುತರಾಯ ದೇಗುಲ ಸ್ಮಾರಕಗಳ ಮೇಲೆ ಬ್ರೌನ್ ರಾಕ್ ಚಾಟ್ ಓಡಾಡುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಸಬ್ಯಸಾಚಿ ರಾಯ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಬ್ರೌನ್ ರಾಕ್ ಚಾಟ್ ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತವೆ. ಹೀಗಾಗಿ ಹಂಪಿಯ ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ಬಂಡೆಗಳಿಂದ ಕೂಡಿದ ಭೂದೃಶ್ಯವು ಈ ಪ್ರಭೇದಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ.
ಇದಕ್ಕೂ ಮೊದಲು ಈ ಪಕ್ಷಿಯನ್ನು ಪರಿಸರ ಪ್ರೇಮಿ ಪಂಪಯ್ಯಸ್ವಾಮಿ ಮಳಿಮಠ ಅವರು ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇಗುಲದ ಬಳಿ ಪತ್ತೆ ಹಚ್ಚಿದ್ದರು.
ಇದರ ವೈಜ್ಞಾನಿಕ ಹೆಸರು Oenanthe fusca. ಇದು ಸುಮಾರು 17 ಸೆ.ಮೀ. ಉದ್ದವಿರುತ್ತದೆ. ಸಾಮಾನ್ಯ 'ಇಂಡಿಯನ್ ರಾಬಿನ್' ಪಕ್ಷಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಸಂಪೂರ್ಣ ಕಂದು ಬಣ್ಣದ ದೇಹ, ರೆಕ್ಕೆ ಮತ್ತು ಬಾಲದ ಭಾಗಗಳು ಸ್ವಲ್ಪ ಗಾಢವಾಗಿರುತ್ತವೆ. ಇವು ಹೆಚ್ಚಾಗಿ ಹಳೆಯ ಕೋಟೆಗಳು, ಪಾಳುಬಿದ್ದ ಕಟ್ಟಡಗಳು, ಬಂಡೆಗಳ ನಡುವೆ ಮತ್ತು ಕಲ್ಲುಗಣಿಗಳಲ್ಲಿ ವಾಸಿಸುತ್ತವೆ. ನೆಲದ ಮೇಲೆ ಕಂಡುಬರುವ ಸಣ್ಣಪುಟ್ಟ ಕೀಟಗಳೇ ಇವುಗಳ ನೆಚ್ಚಿನ ಆಹಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



