ರಾಜ್ಯ

ಬೆಂಗಳೂರು: ಚಡ್ಡಿ ಹಾಕಿಕೊಂಡು ತಿರುಗಾಡಬೇಡ ಅಂತ ಬುದ್ಧಿ ಹೇಳಿದ ಹೋಂ ಗಾರ್ಡ್‌ಗೆ ಥಳಿಸಿದ ಯುವತಿ, Video

ಚಡ್ಡಿ ಹಾಕಿಕೊಂಡು ತಿರುಗಾಡುತ್ತಿದ್ದ ಯುವತಿಯೋರ್ವಳಿಗೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್‌ಗೆ ಯುವತಿಯೋರ್ವಳು ಥಳಿಸಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಹೋಂ ಗಾರ್ಡ್ ಲಕ್ಷ್ಮೀನರಸಮ್ಮಗೆ ಮೋಹಿನಿ ಎಂಬಾಕೆ ತೀವ್ರವಾಗಿ ಥಳಿಸಿದ್ದಾಳೆ.

ಬೆಂಗಳೂರು: ಚಡ್ಡಿ ಹಾಕಿಕೊಂಡು ತಿರುಗಾಡಬೇಡ ಅಂತ ಬುದ್ಧಿ ಹೇಳಿದ ಹೋಂ ಗಾರ್ಡ್‌ಗೆ ಥಳಿಸಿದ ಯುವತಿ, Video
Published On :

ಬೆಂಗಳೂರು: ಚಡ್ಡಿ ಹಾಕಿಕೊಂಡು ತಿರುಗಾಡುತ್ತಿದ್ದ ಯುವತಿಯೋರ್ವಳಿಗೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್‌ಗೆ ಯುವತಿಯೋರ್ವಳು ಥಳಿಸಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಹೋಂ ಗಾರ್ಡ್ ಲಕ್ಷ್ಮೀನರಸಮ್ಮಗೆ ಮೋಹಿನಿ ಎಂಬಾಕೆ ತೀವ್ರವಾಗಿ ಥಳಿಸಿದ್ದಾಳೆ. ಶಾರ್ಟ್ ಬಟ್ಟೆಗಳನ್ನು ಧರಿಸಿ ಮೋಹಿನಿ ಓಡಾಡುತ್ತಿದ್ದಳು. ಮೋಹಿನಿಯನ್ನು ನೋಡಿದ ಕೆಲ ಯುವಕರು ಚುಡಾಯಿಸಿದ್ದರು.

ಇದನ್ನು ಗಮನಿಸಿದ ಹೋಂ ಗಾರ್ಡ್ ಲಕ್ಷ್ಮೀನರಸಮ್ಮ ಯುವತಿಯನ್ನು ಕರೆದು ವಿಚಾರಿಸಿದರು. ಅಲ್ಲದೆ ಈ ರೀತಿ ಶಾರ್ಟ್ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದರೆ ಪುಂಡ ಪೋಕರಿಗಳು ಚುಡಾಯಿಸದೇ ಏನು ಮಾಡುತ್ತಾರೆ. ಮುಂದೆ ಈಗೇ ಸಣ್ಣ ಪುಟ್ಟ ಬಟ್ಟೆ ಧರಿಸಿ ಓಡಾಡಬೇಡ ಎಂದು ಬುದ್ಧವಾದ ಹೇಳಿದ್ದರು. ಇದರಿಂದ ಕೋಪಗೊಂಡ ಯುವತಿ, ನನಗೆ ಬುದ್ಧಿ ಹೇಳಲು ನೀನ್ಯಾರು? ಎಂದು ಹೋಂ ಗಾರ್ಡ್ ಗೆ ಮನಬಂದಂತೆ ಹೊಡೆದು ಹಲ್ಲೆ ನಡೆಸಿದ್ದಾಳೆ. ಸ್ಥಳೀಯರು ಆಗಮಿಸಿ ಹೋಂ ಗಾರ್ಡ್ ಮಹಿಳೆಯನ್ನು ರಕ್ಷಿಸಿದ್ದಾರೆ. ಹಲ್ಲೆ ನಡೆಸಿರುವ ಯುವತಿ ಮೋಹಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.