ಸಾವಿನಲ್ಲೂ ಸಾರ್ಥಕತೆ ಮೆರೆದ 7 ವರ್ಷದ ಪುಟ್ಟ ಬಾಲಕ: ಅಂಗಾಗ ದಾನದ ಮೂಲಕ ನಾಲ್ವರ ಬಾಳಿಗೆ ಬೆಳಕು..!
ಸ್ಯಾಂಡಲ್ವುಡ್ ನಟನಾದ ಸಂಚಾರಿ ವಿಜಯ್ ನಿಧನರಾದಾಗ ತಮ್ಮ ದೇಹದ ಒಂದಷ್ಟು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಇದೀಗ ಇಂತಹದ್ದೇ ಒಂದು ಸಾಲಿಗ ಒಬ್ಬರ ಉದಾಹರಣೆ ಸೇರ್ಪಡೆಯಾಗಿದೆ.

ಬೆಂಗಳೂರು: ನೇತ್ರದಾನ ಮಹಾದಾನ ಎಂಬ ಮಾತಿದೆ. ಸಾಯುವ ಸಮಯದಲ್ಲಿ ಕಣ್ಣು ದಾನ ಮಾಡಿದ್ರೆ ತುಂಬಾ ಒಳಿತು ಎಂಬ ಮಾತುಗಳನ್ನು ಕೇಳಿರುತ್ತೇವೆ. ಅದರಿಂದ ಇಬ್ಬರಿಗಾದ್ರೂ ಸಹಾಯವಾಗುತ್ತದೆ. ಕೇವಲ ನೇತ್ರವಲ್ಲದೆ ದೇಹದ ಅಂಗಾಂಗಗಳನ್ನು ಕೂಡ ದಾನ ಮಾಡಬಹುದು.
ಒಂದು ವೇಳೆ ಅಪಾಘಾತದಲ್ಲಿ ಸಡನ್ ಆಗಿ ಸತ್ತರೆ, ದೇಹದ ಅಂಗಾಂಗಗಳನ್ನು ಯಾವ ರೀತಿಯಾಗಿ ದಾನ ಮಾಡಬಹುದು ಅಂತಲೂ ಹಲವಾರು ಬಾರಿ ವೈದ್ಯರು ತಿಳಿಸಿರುತ್ತಾರೆ. ಅಥವಾ ನಮ್ಮ ಪೋಷಕರು ಅದನ್ನು ದಾನ ಮಾಡಬಹುದಾಗಿದೆ. ಸ್ಯಾಂಡಲ್ವುಡ್ ನಟನಾದ ಸಂಚಾರಿ ವಿಜಯ್ ನಿಧನರಾದಾಗ ತಮ್ಮ ದೇಹದ ಒಂದಷ್ಟು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.
ಇದೀಗ ಇಂತಹದ್ದೇ ಒಂದು ಸಾಲಿಗ ಒಬ್ಬರ ಉದಾಹರಣೆ ಸೇರ್ಪಡೆಯಾಗಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಮೆದುಳು ನಿಷ್ಕ್ರಯಗೊಂಡಿದ್ದ ಬಾಲಕನ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ.
ನಗರದ ರಸ್ತೆ ಅಪಘಾತದ ಬಳಿ ಗಂಭೀರವಾಗಿ ಗಾಯಗೊಂಡು ಬ್ರೇನ್ ಡೆಡ್ (ಮಿದುಳು ನಿಷ್ಕ್ರಿಯ) ಘೋಷಿಸಲ್ಪಟ್ಟ ಏಳು ವರ್ಷದ ಬಾಲಕನ ಅಂಗಾಂಗಗಳು ನಾಲ್ವರಿಗೆ ಹೊಸ ಬದುಕನ್ನು ನೀಡಿದೆ.
ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನನ್ನು ಏಳು ದಿನಗಳ ಕಾಲ ಪೀಡಿಯಾಟ್ರಿಕ್ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಚೇತರಿಕೆ ಕಂಡು ಬಂದಿರಲಿಲ್ಲ. ಬಳಿಕ ವೈದ್ಯರು ಫೆಬ್ರವರಿ 24ರಂದು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಮಾರ್ಗಸೂಚಿಗಳ ಪ್ರಕಾರ ಮೆದುಳು ನಿಷ್ಕ್ರಿಯಗೊಂಡಿದೆ ದೃಢಪಡಿಸಿದರು. ಬಳಿಕ ವೈದ್ಯಕೀಯ ತಂಡದ ಸಮಾಲೋಚನೆಯ ಬಳಿಕ ಪೋಷಕರು ಅಂಗದಾನಕ್ಕೆ ಒಪ್ಪಿಗೆ ಸೂಚಿಸಿದರು.
ನಂತರ ರಾಜ್ಯ ಕಸಿ ಜಾಲದೊಂದಿಗೆ ಸಮನ್ವಯದ ಮೂಲಕ, ಎರಡು ಮೂತ್ರಪಿಂಡಗಳು, ಒಂದು ಯಕೃತ್ತು, ಎರಡು ಕಾರ್ನಿಯಾಗಳು ಮತ್ತು ಹೃದಯ ಕವಾಟಗಳನ್ನು ಸಂಗ್ರಹಿಸಿ ಅಗತ್ಯವಿದ್ದ ರೋಗಿಗಳಿಗೆ ಕಸಿ ಮಾಡಿದ್ದಾರೆ. ಇದರಿಂದ ನಾಲ್ವರ ಜೀವನಕ್ಕೆ ಬೆಳಕು ನೀಡಿದಂತಾಗಿದೆ.
ಅಂಗ ಸಂಗ್ರಹ ಹಾಗೂ ಕಸಿ ಪ್ರಕ್ರಿಯೆ ಮಹದೇವಪುರದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಈ ಮಹಾದಾನದಿಂದ ನಾಲ್ವರ ಜೀವ ಉಳಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಕ್ಕಳ ಅಂಗದಾನ ಭಾರತದಲ್ಲಿ ಅಪರೂಪವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



