ರಾಜ್ಯ

ಉಗ್ರ ಜುನೈದ್ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ: ಹಣದ ಆಸೆ ಬೇಡ, ದೇಶ ಸೇವೆಗಾಗಿ ಮಾಹಿತಿ ನೀಡಿ; ಮುಸ್ಲಿಂ ಸಮುದಾಯಕ್ಕೆ Imam ಮನವಿ

ಸಮುದಾಯದ ಸದಸ್ಯರು ಬಹುಮಾನದ ಆಸೆಗಾಗಿ ಕಾಯಬಾರದು, ಬದಲಿಗೆ ದೇಶಸೇವೆಯ ಮನೋಭಾವದಿಂದ ತಲೆಮರೆಸಿಕೊಂಡಿರುವ ಉಗ್ರನ ಬಗ್ಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದ್ದಾರೆ,

ಉಗ್ರ ಜುನೈದ್ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ: ಹಣದ ಆಸೆ ಬೇಡ, ದೇಶ ಸೇವೆಗಾಗಿ ಮಾಹಿತಿ ನೀಡಿ; ಮುಸ್ಲಿಂ ಸಮುದಾಯಕ್ಕೆ Imam ಮನವಿ
ಮಸೀದಿ — online desk
Published On :

ಬೆಂಗಳೂರು: ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರ ಜುನೈದ್ ಅಹ್ಮದ್ ಪತ್ತೆಗೆ ಎನ್ಐಎ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವ ಬೆನ್ನಲ್ಲೇ, ಬೆಂಗಳೂರಿನ ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಅವರು ಸಮುದಾಯಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ.

ಸಮುದಾಯದ ಸದಸ್ಯರು ಬಹುಮಾನದ ಆಸೆಗಾಗಿ ಕಾಯಬಾರದು, ಬದಲಿಗೆ ದೇಶಸೇವೆಯ ಮನೋಭಾವದಿಂದ ತಲೆಮರೆಸಿಕೊಂಡಿರುವ ಉಗ್ರನ ಬಗ್ಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದ್ದಾರೆ.

ಇಸ್ಲಾಂ ಧರ್ಮವು ಎಂದಿಗೂ ಭಯೋತ್ಪಾದಕ ಕೃತ್ಯಗಳನ್ನು ಅಥವಾ ಅಮಾಯಕರ ಕೊಲೆಯನ್ನು ಬೆಂಬಲಿಸುವುದಿಲ್ಲ.ಬಹುಮಾನಕ್ಕಾಗಿ ನೋಡದೆ, ಸಮಾಜಕ್ಕೆ ಹಾನಿ ಮಾಡುವವರನ್ನು ಹಿಡಿಯಲು ಸಹಕರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದ್ದಾರೆ.

ಇದೇ ವೇಳೆ ಈ ಸಂದೇಶವನ್ನು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಪ್ರಕಟಿಸಲಾಗುವುದೆಂದು ತಿಳಿಸಿರುವ ಅವರು, ಜುನೈದ್ ಅಹ್ಮದ್ ಸೇರಿದಂತೆ ಸಮಾಜಕ್ಕೆ ಅಪಾಯಕಾರಿಯಾದವರ ಕುರಿತು ಮಾಹಿತಿ ಸಿಕ್ಕಲ್ಲಿ ಅಧಿಕಾರಿಗಳಿಗೆ ತಿಳಿಸಲು ಸಮುದಾಯದವರಿಗೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಒಂದರಲ್ಲೇ ಸುಮಾರು 800 ಮಸೀದಿಗಳು ಮತ್ತು ಕರ್ನಾಟಕದಲ್ಲಿ 2,000ಕ್ಕೂ ಹೆಚ್ಚು ಮಸೀದಿಗಳಿದ್ದು, ಎನ್‌ಐಎ ವಿತರಿಸಿದ ಪೋಸ್ಟರ್‌ಗಳ ಆಧಾರದಲ್ಲಿ ಶಂಕಿತರ ಕುರಿತು ಮಾಹಿತಿ ನೀಡುವಂತೆ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.