ಕಾರಿನಲ್ಲಿ ನಿದ್ರೆಗೆ ಜಾರಿದ್ದ ಕಂದಮ್ಮ: ಕ್ಯಾಬ್'ನಲ್ಲೇ ಬಿಟ್ಟು ಹೋದ ಪೋಷಕರು, ಮುಂದಾಗಿದ್ದೇನು..?
ಮನೆಗೆ ತೆರಳಿದ ಸ್ವಲ್ಪ ಸಮಯದ ಬಳಿಕ ಮಗು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಮಗು ಕ್ಯಾಬ್ ನಲ್ಲೇ ಮಲಗಿರುವುದನ್ನು ನೆನಪಿಸಿಕೊಂಡ ತಾಯಿ, ಕ್ಯಾಬ್ ಚಾಲಕನಿಗೆ ಕರೆ ಮಾಡಿದ್ದಾರೆ. ಆದರೆ, ಚಾಲಕ ಸಂಪರ್ಕಕ್ಕೆ ಸಿಕ್ಕಿಲ್ಲ.

ಬೆಂಗಳೂರು: ನಿದ್ರೆಗೆ ಜಾರಿದ್ದ ಮಗುವನ್ನು ಪೋಷಕರು ಕ್ಯಾಬ್ ನಲ್ಲೇ ಮರೆತುಹೋದ ಘಟನೆಯೊಂದು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪೊನ್ನಪ್ಪ ಲೇಔಟ್‌ನಲ್ಲಿರುವ ಅಪಾರ್ಟ್ಮೆಂಟ್ ನಿವಾಸಿಗಳಾಗಿರುವ ಮಗುವಿನ ಪೋಷಕರು ಇಸ್ಕಾನ್ ದೇವಾಲಯಕ್ಕೆ ತೆರಳಿದ್ದಾರೆ. ಮರಳಿ ಕ್ಯಾಬ್ ನಲ್ಲಿ ಬಂದಿದ್ದು, ಈ ವೇಳೆ ಕಾರಿನಲ್ಲಿ ನಾಲ್ಕು ವರ್ಷದ ಮಗು ಮಲಗಿದೆ. ಕಾರಿನಲ್ಲಿ ಇಳಿದು ಹೋಗುವಾಗ ಮಗುವನ್ನು ಪೋಷಕರು ಮರೆತಿದ್ದಾರೆ. ಈ ನಡುವೆ ಕ್ಯಾಬ್ ಚಾಲಕ ಕೂಡ ಈ ಬಗ್ಗೆ ಗಮನ ಕೊಟ್ಟಿಲ್ಲ.
ಮನೆಗೆ ತೆರಳಿದ ಸ್ವಲ್ಪ ಸಮಯದ ಬಳಿಕ ಮಗು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಮಗು ಕ್ಯಾಬ್ ನಲ್ಲೇ ಮಲಗಿರುವುದನ್ನು ನೆನಪಿಸಿಕೊಂಡ ತಾಯಿ, ಕ್ಯಾಬ್ ಚಾಲಕನಿಗೆ ಕರೆ ಮಾಡಿದ್ದಾರೆ. ಆದರೆ, ಚಾಲಕ ಸಂಪರ್ಕಕ್ಕೆ ಸಿಕ್ಕಿಲ್ಲ.
ಬಳಿಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದು, 2 ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಂತ್ರಜ್ಞಾನ ಬಳಸಿ ಕ್ಯಾಬ್ ಚಾಲಕನನ್ನು ಪತ್ತೆ ಮಾಡಿದ್ದಾರೆ.
ಚಾಲಕನನ್ನು ಸಂಪರ್ಕಿಸಿ ಮಗು ಹಿಂದಿನ ಸೀಟಿನಲ್ಲಿ ಇರುವುದಾಗಿ ತಿಳಿಸಿದ್ದಾರೆ. ನಂತರ ಮಗು ಮಲಗಿರುವುದನ್ನು ನೋಡಿ ಚಾಲಕ ಬೆಚ್ಚಿಬಿದ್ದಿದ್ದು, ಮರಳಿ ಸ್ಥಳಕ್ಕೆ ತೆರಳಿ ಮಗುವನ್ನು ಹಿಂತಿರುಗಿಸಿದ್ದಾನೆ.
ಒಂದು ಗಂಟೆಯೊಳಗೆ ಮಗು ಸುರಕ್ಷಿತವಾಗಿ ಪೋಷಕರ ಬಳಿ ಸೇರಿದ್ದು, ಪೊಲೀಸರು ಪೋಷಕರೊಂದಿಗೆ ಕೌನ್ಸೆಲಿಂಗ್ ನಡೆಸಿ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯು ಪೋಷಕರು ಮಕ್ಕಳೊಂದಿಗೆ ಪ್ರಯಾಣಿಸುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



