ರಾಜ್ಯ

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣದ ಸಂಗೀತ ಮಾಂತ್ರಿಕ ಎ. ಆರ್.ರೆಹಮಾನ್! Video

ಕಾರಿನಲ್ಲಿ ಕುಳಿತಿದ್ದ ಅವರನ್ನು ಅಭಿಮಾನಿಗಳು ಗುರುತಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣದ ಸಂಗೀತ ಮಾಂತ್ರಿಕ ಎ. ಆರ್.ರೆಹಮಾನ್! Video
ಎ. ಆರ್.ರೆಹಮಾನ್
Published On :

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಯಾರನ್ನೂ ಬಿಡಲ್ಲ, ಎಷ್ಟೇ ದೊಡ್ಡವರಾದರೂ ಇಲ್ಲಿ ಟ್ರಾಫಿಕ್‌ನಲ್ಲಿ ಕಾಯಲೇಬೇಕು. ಅಂತಹುದೇ ಬಿಸಿ ಇದೀಗ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಗೂ ತಟ್ಟಿದ್ದು, ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾಗಿರುವ ಘಟನೆ ನಡೆದಿದೆ.

ಕಾರಿನಲ್ಲಿ ಕುಳಿತಿದ್ದ ಅವರನ್ನು ಅಭಿಮಾನಿಗಳು ಗುರುತಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹೌದು, ಇತ್ತೀಚೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಒ (KTPO) ಕನ್ವೆನ್ಷನ್ ಸೆಂಟರ್‌ನಲ್ಲಿ ಎ.ಆರ್. ರೆಹಮಾನ್ ಅವರ 'ದಿ ವಂಡರ್‌ಮೆಂಟ್ ಟೂರ್' (The Wonderment Tour) ಲೈವ್ ಮ್ಯೂಸಿಕ್ ಕಾನ್ಸರ್ಟ್ ಆಯೋಜನೆಗೊಂಡಿತ್ತು.

ಈ ಸಂಗೀತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ, ಸಂಗೀತ ಮಾಂತ್ರಿಕನ ಗಾನಸುಧೆಯನ್ನು ಆಲಿಸಿದ್ದಾರೆ.

ಆದರೆ, ಅದ್ದೂರಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ವಾಪಸ್ ತೆರಳುವಾಗ ಎ.ಆರ್. ರೆಹಮಾನ್ ಅವರಿಗೆ ಬೆಂಗಳೂರಿನ ಅಸಲಿ ಟ್ರಾಫಿಕ್ ದರ್ಶನವಾಗಿದೆ. ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳ ಮಧ್ಯೆ ರೆಹಮಾನ್ ಅವರ ಕಾರು ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದೆ.

ಕಾರಿನಲ್ಲಿ ಕುಳಿತಿದ್ದ ಎ.ಆರ್. ರೆಹಮಾನ್ ಅವರನ್ನು ಗುರುತಿಸಿದ ಅಭಿಮಾನಿಗಳು, ಅವರ ಬಳಿ ತೆರಳಿ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅವರು ಕೂಡಾ ಮುಗುಳ್ನಗೆ ಬೀರುತ್ತಾ, ಅಭಿಮಾನಿಗಳ ಅಭಿಮಾನಕ್ಕೆ ಬೆರಗಾಗಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.