ರಾಜ್ಯ

ನನ್ನಪ್ಪ Club ಮೆಂಬರ್, ನನ್ನನ್ನ ಒಳಗೆ ಬಿಡಿ: ಪ್ರತಿಷ್ಠಿತ ಕ್ಲಬ್‌ವೊಂದರ ಮುಂದೆ ಬೆತ್ತಲಾಗಿ ವ್ಯಕ್ತಿ ರಂಪಾಟ, Video ವೈರಲ್..!

ಸಂಪೂರ್ಣ ಪಾನಮತ್ತನಾಗಿದ್ದ ವ್ಯಕ್ತಿ ಕ್ಲಬ್‌ನ ಮುಖ್ಯ ದ್ವಾರದ ಬಳಿ ಬಂದಿದ್ದಾನೆ. ಆರಂಭದಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿರುವ ವ್ಯಕ್ತಿ, ತಾನು ಕ್ಲಬ್ ಸದಸ್ಯನ ಮಗ ಎಂದು ಹೇಳಿಕೊಂಡು ಒಳಗೆ ಹೋಗಲು ಯತ್ನಿಸಿದ್ದಾನೆ.

ನನ್ನಪ್ಪ Club ಮೆಂಬರ್, ನನ್ನನ್ನ ಒಳಗೆ ಬಿಡಿ: ಪ್ರತಿಷ್ಠಿತ ಕ್ಲಬ್‌ವೊಂದರ ಮುಂದೆ ಬೆತ್ತಲಾಗಿ ವ್ಯಕ್ತಿ ರಂಪಾಟ, Video ವೈರಲ್..!
ಕ್ಲಬ್ ಮುಂದೆ ಗಲಾಟೆ ನಡೆಸುತ್ತಿರುವ ವ್ಯಕ್ತಿ
Published On :

ಬೆಂಗಳೂರು: ನನ್ನಪ್ಪ Club ಮೆಂಬರ್, ನನ್ನನ್ನ ಒಳಗೆ ಬಿಡಿ ಎಂದು ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ವೊಂದರ ಮುಂದೆ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ ಗಲಾಟೆ ಮಾಡಿದ್ದು, ಸಿಬ್ಬಂದಿಗಳು ನಿರಾಕರಿಸಿದ್ದಕ್ಕೆ ಬೆತ್ತಲಾಗಿ ರಂಪಾಟ ನಡೆಸಿರುವ ಘಟನೆ ನಗರದ ಲ್ಯಾವೆಲ್ಲಿ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಸಂಪೂರ್ಣ ಪಾನಮತ್ತನಾಗಿದ್ದ ವ್ಯಕ್ತಿ ಕ್ಲಬ್‌ನ ಮುಖ್ಯ ದ್ವಾರದ ಬಳಿ ಬಂದಿದ್ದಾನೆ. ಆರಂಭದಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿರುವ ವ್ಯಕ್ತಿ, ತಾನು ಕ್ಲಬ್ ಸದಸ್ಯನ ಮಗ ಎಂದು ಹೇಳಿಕೊಂಡು ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ, ಆತನ ವರ್ತನೆಯನ್ನು ಗಮನಿಸಿದ ಸಿಬ್ಬಂದಿ ಒಳಗೆ ಬಿಡಲು ನಿರಾಕರಿಸಿದ್ದಾರೆ.

ಇದರಿಂದ ಆಕ್ರೋಶಗೊಂಡಿರುವ ವ್ಯಕ್ತಿ, ಎಲ್ಲರ ಎದುರೇ ತನ್ನ ಬಟ್ಟೆಗಳನ್ನು ಒಂದೊಂದಾಗಿ ಕಳಚಿ ಸಂಪೂರ್ಣ ಬೆತ್ತಲೆಯಾಗಿ ರಸ್ತೆಯಲ್ಲೇ ನಿಂತು ಕೂಗಾಡುತ್ತಾ ಗಲಾಟೆ ಮಾಡಿದ್ದಾನೆ.

ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಮತ್ತು ವಾಹನ ಸವಾರರು ಮುಜುಗರಕ್ಕೊಳಗಾಗಿದ್ದಾರೆ. ನಂತರ ಕ್ಲಬ್ ಸಿಬ್ಬಂದಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಯಾರಿಗೂ ಬಗ್ಗದೆ ರಂಪಾಟ ಮುಂದುವರಿಸಿದ್ದಾನೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕ್ಲಬ್ ಸಿಬ್ಬಂದಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯ ವೇಳೆ ಆತನ ತಂದೆ ನಿಜವಾಗಿಯೂ ಅದೇ ಕ್ಲಬ್‌ನ ಸದಸ್ಯರಾಗಿದ್ದಾರೆಂಬುದು ದೃಢಪಟ್ಟಿದೆ. ಬಳಿಕ ಆತನ ತಂದೆಯನ್ನು ಠಾಣೆಗೆ ಕರೆಯಿಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.