ನಾನಲ್ಲ, ನನ್ನ ಪ್ರಿಯಕರ ಕೊಂದಿದ್ದು; ಹೆತ್ತವರ ಹತ್ಯೆ ಕೇಸ್‌ನಲ್ಲಿ ಉಲ್ಟಾ ಹೊಡೆದ ಹಂತಕಿ; ಲವರ್ ವಿರುದ್ಧವೇ ತಿರುಗಿಬಿದ್ದ ಶ್ವೇತಾ!
ರಾಜ್ಯವನ್ನೇ ಬೆಚ್ಚಿಬಿಳಿಸಿದ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಸದ್ದು ಮಾಡುತಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಶ್ವೇತಾ, ತನ್ನ ಪ್ರಿಯಕರ ಕೆನತ್ ವಿರುದ್ಧವೇ ಮಾಫಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾಳೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ದ ಮಾಫಿ ಸಾಕ್ಷಿಯಾಗಲು ಸಹ-ಆರೋಪಿಗಳು ಮುಂದಾದ ಬೆನಲ್ಲೇ, ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿಯೂ ಮಾಫಿ ಸಾಕ್ಷಿ ಸದ್ದು ಮಾಡುತಿದೆ. ಹೌದು, ಪ್ರಕರಣದ ಪ್ರಮುಖ ಆರೋಪಿಯಾದ ಶ್ವೇತಾ, ತನ್ನ ಪ್ರಿಯಕರ ಕೆನತ್ ವಿರುದ್ಧವೇ ಮಾಫಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾಳೆ. ಪ್ರಕರಣ ಸಂಬಂಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಶ್ವೇತಾ, ನನ್ನ ಹೆತ್ತವರು ಮತ್ತು ತಂಗಿಯನ್ನು ಕೊಂದಿದ್ದು ನನ್ನ ಪ್ರಿಯಕರ ಕೆನತ್, ನಾನು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿ ಆಗಲು ಸಿದ್ಧಳಿದ್ದೇನೆ ಎಂದು ಅರ್ಜಿ ಸಲ್ಲಿಸಿದ್ದಾಳೆ. ಅದರಲ್ಲೂ, ಇಷ್ಟು ದಿನ ನಾನೇ ಕೊಲೆ ಮಾಡಿದ್ದು ಎಂದು ಹೇಳಿಕೆ ನೀಡುತ್ತಿದ್ದ ಶ್ವೇತಾ, ಈಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾಳೆ. ಆ ಕುರಿತ ವರದಿ ಇಲ್ಲಿದೆ:
ಕೋರ್ಟ್‌ಗೆ ಶ್ವೇತಾ ಸಲ್ಲಿಸಿರುವ ಅರ್ಜಿಯಲ್ಲೇನಿದೆ?
29ನೇ ACJM ಕೋರ್ಟ್‌ಗೆ ಶ್ವೇತಾ ಸಲ್ಲಿಸಿರುವ ಅರ್ಜಿಯಲ್ಲಿ, ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡುವ ತೀರ್ಮಾನ ಸಂಪೂರ್ಣವಾಗಿ ಕೆನತ್‌ನದ್ದಾಗಿತ್ತು. ಆತನೇ ಎಲ್ಲರನ್ನೂ ಚಾಕುವಿನಿಂದ ಇರಿದು ಕೊಂದಿದ್ದಾನೆ. ನಾನು ಯಾರಿಗೂ ಚಾಕುವಿನಿಂದ ಚುಚ್ಚಿಲ್ಲ ಎಂದು ಶ್ವೇತಾ ಹೇಳಿದ್ದಾಳೆ. ಇದರೊಂದಿಗೆ, ಕೊಲೆ ನಡೆದ ಸಂದರ್ಭದಲ್ಲಿ ನಾನು ಅದೇ ಸ್ಥಳದಲ್ಲಿದ್ದೆ ನಿಜ, ಆದರೆ ನಾನು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಆದ್ದರಿಂದ ನನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ, ಕೆನತ್ ವಿರುದ್ಧ ಸಾಕ್ಷಿ ನುಡಿಯಲು ಅವಕಾಶ ಕೊಡಿ" ಎಂದು ಮನವಿ ಮಾಡಿದ್ದಾಳೆ.
ಏತನ್ಮಧ್ಯೆ, ಪ್ರಕರಣ ಸಂಬಂಧ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾದ ಬಳಿಕ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ ಕೋರ್ಟ್, ಶ್ವೇತಾ ಸಲ್ಲಿಸಿರುವ ಈ ಅರ್ಜಿಯನ್ನು ಸದ್ಯಕ್ಕೆ ಪುರಸ್ಕರಿಸಿಲ್ಲ. ಇದರ ನಡುವೆ, ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಪ್ರಮುಖ ಫೋರೆನ್ಸಿಕ್ ವರದಿಗಳು ಬರಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವರದಿಗಳು ಬಂದ ನಂತರವಷ್ಟೇ ಶ್ವೇತಾಳ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲಿದೆ.

ಏನಿದು ಪ್ರಕರಣ?
ಜೂನ್ 2024 ರಲ್ಲಿ ಬೆಂಗಳೂರಿನ ಸೀಗೇಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಸೋಮಸುಂದರ್ (54), ಮುತ್ತುಲಕ್ಷ್ಮಿ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (20) ಅವರ ಭೀಕರ ಕೊಲೆಯಾಗಿತ್ತು. ಹಿರಿಯ ಮಗಳಾದ ಶ್ವೇತಾ ಮತ್ತು ಆಕೆಯ ಲಿವ್-ಇನ್ ಪಾರ್ಟ್‌ನರ್ ಕೆನತ್ ಜಂಟಿಯಾಗಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಇಬ್ಬರನ್ನೂ ಪುದುಚೇರಿಯಲ್ಲಿ ಬಂಧಿಸಿದ್ದರು. ಇನ್ನು, ಪ್ರೀತಿಯ ವಿರೋಧ ಹಾಗೂ ಸಾಲದ ಬಾಧೆಯೇ ಈ ಕೊಲೆಗೆ ಕಾರಣ ಎನ್ನಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




