ರಾಜ್ಯ

ಕೆ ಆರ್ ಪುರ ತ್ರಿವಳಿ ಕೊ*ಲೆ ಪ್ರಕರಣ: ಕೊನೆಗೂ ಪ್ರಿಯಕರ ಕೆನ್ನೆತ್ ಬಂಧನ, ಆರೋಪಿ ಶ್ವೇತಾಗೆ 7 ದಿನ ಪೊಲೀಸ್ ಕಸ್ಟಡಿ

ಕೆಆರ್ ಪುರಂನಲ್ಲಿ ಸ್ವಂತ ತಂದೆ-ತಾಯಿ ಮತ್ತು ತಂಗಿಯನ್ನು ಕೊಂದು ಪರಾರಿಯಾಗಿದ್ದ ಶ್ವೇತಾಳನ್ನು ಬಂಧಿಸಿದ ಮಾರನೇ ದಿನವೇ ಪೊಲೀಸರು ಆಕೆಯ ಪ್ರಿಯಕರ ಕೆನ್ನೆತ್ ನನ್ನು ಕೂಡ ಬಂಧಿಸಿದ್ದಾರೆ.

ಕೆ ಆರ್ ಪುರ ತ್ರಿವಳಿ ಕೊ*ಲೆ ಪ್ರಕರಣ: ಕೊನೆಗೂ ಪ್ರಿಯಕರ ಕೆನ್ನೆತ್ ಬಂಧನ, ಆರೋಪಿ ಶ್ವೇತಾಗೆ 7 ದಿನ ಪೊಲೀಸ್ ಕಸ್ಟಡಿ
ಆರೋಪಿ ಕೆನ್ನೆತ್ ಬಂಧನ
Published On :

ಬೆಂಗಳೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು 2ನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಶ್ವೇತಾಳ ಪ್ರಿಯಕರ ಕೆನ್ನೆತ್ ನನ್ನು ಬಂಧಿಸಿದ್ದಾರೆ.

ಕೆಆರ್ ಪುರಂನಲ್ಲಿ ಸ್ವಂತ ತಂದೆ-ತಾಯಿ ಮತ್ತು ತಂಗಿಯನ್ನು ಕೊಂದು ಪರಾರಿಯಾಗಿದ್ದ ಶ್ವೇತಾಳನ್ನು ಬಂಧಿಸಿದ ಮಾರನೇ ದಿನವೇ ಪೊಲೀಸರು ಆಕೆಯ ಪ್ರಿಯಕರ ಕೆನ್ನೆತ್ ನನ್ನು ಕೂಡ ಬಂಧಿಸಿದ್ದಾರೆ.

ಘಟನೆ ಬಳಿಕ ಇಬ್ಬರೂ ಪುದುಚೇರಿಗೆ ಪರಾರಿಯಾಗಿ ಅಲ್ಲಿ ಬೇರೆ ಬೇರೆಯಾಗಿ ತಲೆಮರೆಸಿಕೊಂಡಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಶ್ವೇತಾಳನ್ನು ಬಂಧಿಸಿದ್ದ ಪೊಲೀಸರು ಆಕೆಯನ್ನು 47ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆಕೆಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಹಲವು ನಿಗೂಢ ಅಂಶಗಳನ್ನು ಭೇದಿಸಲು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

ತಲೆಮರಿಸಿಕೊಂಡಿದ್ದ ಕೆನೆತ್ ಬಂಧನಕ್ಕಾಗಿ 3 ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಪುದುಚೇರಿ ಹಾಗೂ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರೆದಿತ್ತು. ಇದೀಗ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

6 ವಿಶೇಷ ತಂಡ ರಚನೆ

ಇನ್ನು ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೆ.ಆರ್.ಪುರ ಪೊಲೀಸರು ಒಟ್ಟು 6 ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪ್ರಕರಣದ ಪ್ರತಿಯೊಂದು ಕೊಂಡಿಯನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.