'ನನಗೆ ದುಡ್ಡಿನ ಅವಶ್ಯಕತೆಯಿಲ್ಲ.., ಮೂರು ತಲೆಮಾರಿಗೆ ಆಗುವಷ್ಟು ಇದೆ, ಈ ರಾಜ್ಯಕ್ಕೆ ಕೊಡುಗೆ ನೀಡಬೇಕು, ಇತಿಹಾಸ ನಿರ್ಮಿಸಬೇಕೆಂಬುದೇ ನನ್ನ ಆಸೆ': ಡಿ.ಕೆ ಶಿವಕುಮಾರ್
ನಿನ್ನೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ನನಗೆ ದುಡ್ಡಿನ ಅವಶ್ಯಕತೆ ಇಲ್ಲ, ನನ್ನ ತಂದೆ-ತಾಯಿ ಮಾಡಿಟ್ಟಿದ್ದು, ನಾನು ಸಂಪಾದನೆ ಮಾಡಿರುವ ಹಣವೇ ಎರಡು-ಮೂರು ತಲೆಮಾರಿಗೆ ಆಗುವಷ್ಟು ಇದೆ. ಈ ರಾಜ್ಯದ ಜನತೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ ಎಂದರು.

ಬೆಂಗಳೂರು: ನನಗೆ ದುಡ್ಡಿನ ಅವಶ್ಯಕತೆಯಿಲ್ಲ, ಆದರೆ ಈ ರಾಜ್ಯಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ, ಅದಕ್ಕೆ ನನಗೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ನನಗೆ ದುಡ್ಡಿನ ಅವಶ್ಯಕತೆ ಇಲ್ಲ, ನನ್ನ ತಂದೆ-ತಾಯಿ ಮಾಡಿಟ್ಟಿದ್ದು, ನಾನು ಸಂಪಾದನೆ ಮಾಡಿರುವ ಹಣವೇ ಎರಡು-ಮೂರು ತಲೆಮಾರಿಗೆ ಆಗುವಷ್ಟು ಇದೆ. ನನಗೆ ಈ ರಾಜ್ಯದಲ್ಲಿ ಇತಿಹಾಸ ನಿರ್ಮಿಸುವ ಆಸೆಯಿದೆ, ಈ ರಾಜ್ಯದ ಜನತೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ ಎಂದರು.
ನನಗೆ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಮುಂದುವರಿಯಲು ದೇವರು ಎಷ್ಟು ದಿನ ಅನುಗ್ರಹಿಸುತ್ತಾರೋ ಗೊತ್ತಿಲ್ಲ, ಆದರೆ ಅಷ್ಟರೊಳಗೆ ಈ ರಾಜ್ಯಕ್ಕೆ ಏನಾದರೊಂದು ಕೊಡುಗೆಯನ್ನು ನೀಡಬೇಕೆಂದು ಆಸೆಯಿದೆ. ಆದರೆ ಅದು ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ.
ನನಗೆ ಈ ಸೇನೆ ಮುಖ್ಯ. ನಿಮ್ಮೆಲ್ಲರ ಸಹಕಾರ ಬೇಕು, ಮುಂದಿನ 25 ವರ್ಷಕ್ಕೆ ಈ ರಾಜ್ಯದ ನೀರಾವರಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು, ಅದಕ್ಕೆ ಹಣ ಯಾವ ರೀತಿ ತರಬೇಕು, ಯಾವ ಸೋರಿಕೆ ಮಾಡಬೇಕು, ಪರಿಶುದ್ಧ ಆಡಳಿತ ಹೇಗೆ ತರಬೇಕು, ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸಬೇಕು ಎಂದು ಸಲಹೆ ನೀಡಿ, ನಾನು ನಿಮಗೆ ಸಹಕಾರ ನೀಡಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



