ರಾಜ್ಯ

ಪಶ್ಚಿಮ ಏಷ್ಯಾ ಸಂಘರ್ಷ ಭವಿಷ್ಯದ ಕಾರ್ಯಾಚರಣೆಗಳಿಗೆ ಪಾಠ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ತ್ರಿಪಾಠಿ

ಯುದ್ಧ ಇನ್ನೂ ನಡೆಯುತ್ತಿದೆ. ಏನಾಗುತ್ತಿದೆ, ಏನು ಕೆಲಸ ಮಾಡಲಾಗುತ್ತಿದೆ. ಏನು ಕೆಲಸ ಆಗುತ್ತಿಲ್ಲ ಎಂಬುದರ ಕುರಿತು ಸರಿಯಾದ ಪಾಠಗಳನ್ನು ಕಲಿಯುತ್ತಿದ್ದೇವೆ ಎಂದು ಅಡ್ಮಿರಲ್ ತ್ರಿಪಾಠಿ ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷ ಭವಿಷ್ಯದ ಕಾರ್ಯಾಚರಣೆಗಳಿಗೆ ಪಾಠ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ತ್ರಿಪಾಠಿ
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ತ್ರಿಪಾಠಿ
Published On :

ಬೆಂಗಳೂರು: ಪಶ್ಚಿಮ ಏಷ್ಯಾ ಯುದ್ಧವನ್ನು ಆಧುನಿಕ ಯುದ್ಧದಲ್ಲಿ ನಿರ್ಣಾಯಕ ಅಧ್ಯಯನ ಎಂದು ಬಣ್ಣಿಸಿರುವ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ಇದು ಭವಿಷ್ಯದಲ್ಲಿನ ಕಾರ್ಯಾಚರಣೆಗಳಿಗೆ ಪಾಠ ಎಂದಿದ್ದಾರೆ.

ಮ್ಯಾರಿಟೈಮ್ ಫೋರ್ಸಸ್ -- ಮಲ್ಟಿ ಡೊಮೈನ್ ಆಪರೇಷನ್ (MDO)ದೃಶ್ಯೀಕರಣ ಕುರಿತ 'ರಣ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದ ತ್ರಿಪಾಠಿ, ಭವಿಷ್ಯದ ಕಾರ್ಯಾಚರಣೆಗಳಿಗೆ ಪಾಠ ಕಲಿಯಲು ಭಾರತೀಯ ಸಶಸ್ತ್ರ ಪಡೆಗಳು ಪಶ್ಚಿಮ ಏಷ್ಯಾ ಸಂಘರ್ಷದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮಿಸುತ್ತಿವೆ ಎಂದರು.

ಯುದ್ಧ ಇನ್ನೂ ನಡೆಯುತ್ತಿದೆ. ಏನಾಗುತ್ತಿದೆ, ಏನು ಕೆಲಸ ಮಾಡಲಾಗುತ್ತಿದೆ. ಏನು ಕೆಲಸ ಆಗುತ್ತಿಲ್ಲ ಎಂಬುದರ ಕುರಿತು ಸರಿಯಾದ ಪಾಠಗಳನ್ನು ಕಲಿಯುತ್ತಿದ್ದೇವೆ ಎಂದು ಅಡ್ಮಿರಲ್ ತ್ರಿಪಾಠಿ ಹೇಳಿದರು.

ಪ್ರಸ್ತುತ ಯುದ್ಧದ ಸ್ವರೂಪ ಪಾರದರ್ಶಕವಾಗಿದೆ. ಚಲಿಸುತ್ತಿದ್ದರೂ ಅಥವಾ ನಿಶ್ಚಲವಾಗಿದ್ದರೂ ಅಥವಾ ಏನಾದರೂ ಕಾಣಿಸಿದರೂ ಅಂತರ್ಗತವಾಗಿ ದುರ್ಬಲವಾಗಿರುತ್ತದೆ. ಪತ್ತೆ ಸವಾಲುಗಳಿಂದಾಗಿ ಭೂಮಿ, ಸಮುದ್ರ ಮತ್ತು ಬಾಹ್ಯಾಕಾಶ ಸೇರಿದಂತೆ ಎಲ್ಲ ಕಡೆಗಳಲ್ಲೂ ಅನುಕೂಲಗಳಿವೆ ಎಂದ ಅವರು, ದೀರ್ಘಕಾಲದ ಹಗೆತನದ ಪೂರೈಕೆ ಸರಪಳಿಯಲ್ಲಿ ಸ್ವಾವಲಂಬನೆಯ ಮಹತ್ವವನ್ನು ಸಂಘರ್ಷ ತಿಳಿಸಿದೆ ಎಂದು ತಿಳಿಸಿದರು.

ಆಧುನಿಕ ಯುದ್ಧವು ಈಗ ವೇಗವಾಗಿ ಬೆಳವಣಿಗೆಯಾಗುತ್ತಿರುವ ತಾಂತ್ರಿಕ ಮತ್ತು ಕಾರ್ಯಾಚರಣೆಯ ನೈಜತೆಗಳಿಗೆ ನಿರಂತರ ಹೊಂದಾಣಿಕೆಯನ್ನು ಬಯಸುತ್ತದೆ ಎಂದರು.

ಕಡಲ ಪಡೆಗಳು ಯಾವಾಗಲೂ ಅನೇಕ ಡೊಮೇನ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ ಆದರೆ ಈಗ ಹೆಚ್ಚು ಸಂಕೀರ್ಣವಾದ ಮತ್ತು ಅಂತರ್ ಸಂಪರ್ಕಿತ ಯುದ್ಧ-ಸ್ಥಳವನ್ನು ಎದುರಿಸುತ್ತಿವೆ. ಅಧುನಿಕ ಯುದ್ಧಕ್ಕೆ ತಕ್ಕಂತೆ ಭಾರತೀಯ ನೌಕಪಡೆಯ ಕಾರ್ಯತಂತ್ರವನ್ನು ಮರು ಸಂಯೋಜಿಸುತ್ತಿದೆ ಎಂದು ಅಡ್ಮಿರಲ್ ತ್ರಿಪಾಠಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.