ಬಾಲಿವುಡ್

ನಟನೆಯ ಪಾಠ ಮಾಡಲಿರುವ ಸಲ್ಮಾನ್ ಖಾನ್! ಮಕ್ಕಳಿಗಾಗಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ ಭಾಯಿಜಾನ್

ಬಾಲಿವುಡ್ ಸುಲ್ತಾನ್ ಈಗ ಶಿಕ್ಷಕ: ಮಕ್ಕಳಿಗೆ ನಟನೆ, ಪಾಠ ಹೇಳಿಕೊಡಲು ಬಂದ ಭಾಯಿಜಾನ್, ಬೀಯಿಂಗ್ ಸಲ್ಮಾನ್ ಖಾನ್ ಯೂಟ್ಯೂಬ್ ಚಾನೆಲ್ ಮೂಲಕ ಹೊಸ ಸಾಹಸಕ್ಕೆ ಕೈಹಾಕಿದ ನಟ ಸಲ್ಮಾನ್ ಖಾನ್! ಆ ಕುರಿತ ವರದಿ ಇಲ್ಲಿದೆ:

ನಟನೆಯ ಪಾಠ ಮಾಡಲಿರುವ ಸಲ್ಮಾನ್ ಖಾನ್! ಮಕ್ಕಳಿಗಾಗಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ ಭಾಯಿಜಾನ್
ನಟನೆಯ ಪಾಠ ಮಾಡಲಿರುವ ಸಲ್ಮಾನ್ ಖಾನ್ — Online Desk
Published On :

ಮುಂಬೈ (ಮಹಾರಾಷ್ಟ್ರ): ಬಾಲಿವುಡ್‌ನ ಸುಲ್ತಾನ್ ಸಲ್ಮಾನ್ ಖಾನ್ ಅಂದರೆ ತಕ್ಷಣ ನೆನಪಿಗೆ ಬರೋದು ಅವರ ಮಾಸ್ ಡೈಲಾಗ್‌ಗಳು, ಸ್ಟೈಲಿಶ್ ಆಕ್ಷನ್ ಮತ್ತು ಶರ್ಟ್ ಬಿಚ್ಚಿ ಬಾಡಿ ತೋರಿಸುವ ಸ್ಟೈಲ್. ಆದರೆ, ತಮ್ಮ ಮೂರು ದಶಕಗಳಿಗೂ ಹೆಚ್ಚು ಕಾಲದ ಸಿನಿಮಾ ಜರ್ನಿಯಲ್ಲಿ ಸಲ್ಮಾನ್ ಕೇವಲ ಕಮರ್ಷಿಯಲ್ ಹೀರೋ ಆಗಿ ಉಳಿದಿಲ್ಲ. ಅವರು ತಮ್ಮ ಸಾಂಪ್ರದಾಯಿಕ ಶೈಲಿಯನ್ನು ಬದಿಗಿಟ್ಟು, ವಿಭಿನ್ನ ಹಾಗೂ ನಟನಾ ಪ್ರಾಧಾನ್ಯತೆಯುಳ್ಳ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮತ್ತು ವಿಮರ್ಶಕರನ್ನು ಬೆರಗುಗೊಳಿಸಿದ್ದಾರೆ. ಹೀಗೆ ಮಾಸ್ ಮಸಾಲೆ ಚಿತ್ರಗಳ ಆಚೆಗೂ ತಮ್ಮಲ್ಲಿ  ಒಬ್ಬ ಅದ್ಭುತ ನಟನಿದ್ದಾನೆ ಎಂಬುದನ್ನು ಸಾಬೀತುಪಡಿಸಿದ ಸಲ್ಮಾನ್ ಖಾನ್ ಅವರು ಇದೀಗ ನಟನೆಯ ಪಾಠ ಮಾಡಲು ಮುಂದಾಗಿದ್ದಾರೆ. ಅದಕ್ಕೆ, ಬೀಯಿಂಗ್ ಸಲ್ಮಾನ್ ಖಾನ್ ಎಂಬ ತಮ್ಮದೇ ಆದ ಹೊಸ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಶಿಕ್ಷಕ ಮತ್ತು ವಿದ್ಯಾರ್ಥಿಯಾಗಿ ಭಾಯಿಜಾನ್

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಚಾನೆಲ್‌ನ ಲಿಂಕ್ ಹಂಚಿಕೊಂಡಿರುವ ಅವರು ಭಾಯಿಜಾನ್ ಸಲ್ಮಾನ್ ಖಾನ್, "ಶುರುನಿಂದ ಶುರು ಮಾಡೋಣ. ನನ್ನ ಅಧಿಕೃತ ಯೂಟ್ಯೂಬ್ ಚಾನೆಲ್. ಇಲ್ಲಿ ನಿಮಗೆ A ಇಂದ Z ವರೆಗೆ ಎಲ್ಲವೂ ಸಿಗುತ್ತದೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ತಮ್ಮ ಚೊಚ್ಚಲ ವಿಡಿಯೋದಲ್ಲಿ ಮಕ್ಕಳಿಗಾಗಿ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇದರಲ್ಲಿ ಅವರು ಶಿಕ್ಷಕ ಮತ್ತು ವಿದ್ಯಾರ್ಥಿ ಎರಡೂ ಪಾತ್ರಗಳನ್ನು ತಾವೇ ನಿರ್ವಹಿಸಿ ಗಮನ ಸೆಳೆದಿದ್ದಾರೆ.

ಮುಂದುವರೆದು, ಮೊದಲ ವಿಡಿಯೋಗಳಲ್ಲಿ ಅವರು ತಮ್ಮದೇ ಆದ ವಿಶಿಷ್ಟ ನಟನಾ ಶೈಲಿ, ಸಿಗ್ನೇಚರ್ ಬಾಡಿ ಲ್ಯಾಂಗ್ವೇಜ್ ಮತ್ತು ಡೈಲಾಗ್ ಡೆಲಿವರಿ ಬಗ್ಗೆ ವಿನೋದಮಯವಾಗಿ ಹೇಳಿಕೊಟ್ಟಿದ್ದಾರೆ. ಅಲ್ಲದೆ, ಮಕ್ಕಳಿಗೆ ಮಾನವ ದೇಹದ ಅಂಗಾಂಗಗಳ ಹೆಸರುಗಳನ್ನು ವಿನೋದಮಯವಾಗಿ ಕಲಿಸುವ ಮೂಲಕ ಶಿಕ್ಷಣ ಮತ್ತು ಮನರಂಜನೆಯನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ, ಈ ಚಾನೆಲ್‌ನ ವಿಷಯವು ಮುಖ್ಯವಾಗಿ ಮಕ್ಕಳನ್ನು ಉದ್ದೇಶಿಸಿ ಮಾಡಿದ್ದಾಗಿದೆ ಎಂದು ಸ್ವತಃ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಚಾನೆಲ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅದರಲ್ಲೂ, ಈ ಹಿಂದೆಯೇ ಅವರು ಸಿನಿಮಾಗಳ ಹಾಡುಗಳನ್ನು ಹಂಚಿಕೊಳ್ಳಲು 'ಸಲ್ಮಾನ್ ಖಾನ್ ಫಿಲ್ಮ್ಸ್ ಮ್ಯೂಸಿಕ್' ಎಂಬ ಚಾನೆಲ್ ಹೊಂದಿದ್ದರಾದರೂ, ಅಭಿಮಾನಿಗಳೊಂದಿಗೆ ನೇರ ಸಂಪರ್ಕ ಸಾಧಿಸಲು ಆರಂಭಿಸಿರುವ ಮೊದಲ ವೈಯಕ್ತಿಕ ಚಾನೆಲ್ ಇದಾಗಿದೆ.

ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ ಭಾಯಿಜಾನ್
ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ ಭಾಯಿಜಾನ್ — Online Desk

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.